Homeಬೆಂಗಳೂರುಶಿವಾಜಿನಗರದಲ್ಲಿ ಮುಂದುವರೆದ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ

ಶಿವಾಜಿನಗರದಲ್ಲಿ ಮುಂದುವರೆದ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ

Footpath encroachment clearance operation continues in Shivajinagar

ಬೆಂಗಳೂರು,ಜು.27-ಶಿವಾಜಿನಗರದಲ್ಲಿಂದು ಬಿಗಿಪೊಲೀಸ್‌‍ ಭದ್ರತೆಯಲ್ಲಿಂದು ಮತ್ತೆ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಜಿಬಿಎ ಅಧಿಕಾರಿಗಳು ಕೈಗೊಂಡರು. ರಸೆಲ್‌ ಮಾರ್ಕೆಟ್‌ ವ್ಯಾಪ್ತಿಯಲ್ಲಿ ಫುಟ್‌ಪಾತ್‌ ಮೇಲಿನ ಒತ್ತುವರಿಯನ್ನು ಕೇಂದ್ರ ಮಹಾನಗರ ಪಾಲಿಕೆಯ ಇಂಜಿನಿಯರ್‌ ಮಾಧವರಾವ್‌, ಎಇಇ ರುಚಿತಾ ಹಾಗೂ ಎಇ ಸಾವಿತ್ರಿಯವರ ನೇತೃತ್ವದಲ್ಲಿ ಸಿಬ್ಬಂದಿಗಳು ಧರ್ಮರಾಜ ದೇವಸ್ಥಾನದ ಬೀದಿ,ರಸೆಲ್‌ ಮಾರ್ಕೆಟ್‌,ಚರ್ಚ್‌ ರಸ್ತೆಯಲ್ಲಿ ಅಕ್ರಮ ಫುಟ್‌ಪಾತ್‌ ಒತ್ತುವರಿಯನ್ನು ತೆರವುಗೊಳಿಸಿದರು.

ಕಾರ್ಯಾಚರಣೆಯ ವೇಳೆ ಪೊಲೀಸರು ಸಂಪೂರ್ಣ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣ ನಡೆಸಿದ್ದು, ಘಟನೆಗಳ ದಾಖಲಾತಿಗಾಗಿ ಪ್ರತಿಯೊಂದು ದೃಶ್ಯವನ್ನು ದಾಖಲಿಸಿಕೊಂಡಿದ್ದಾರೆ.
ಕಳೆದ ಭಾರಿ ಕಾರ್ಯಾಚರಣೆ ವೇಳೆ ಹಲ್ಲೆಗೆ ಒಳಗಾಗಿದ್ದ ಎಇ ಸಾವಿತ್ರಿ ಅವರು ಮಾತನಾಡಿ, ತೆರವು ಕಾರ್ಯಾಚರಣೆ ಮತ್ತೆ ಆರಂಭವಾಗಿದೆ. ಆ ದಿನ ಮೊದಲು ಕೆಲವು ಕಿಡಿಗೇಡಿಗಳು ನನ್ನ ಮೇಲೆ ಪೆಪ್ಪರ್‌ ಸೆ್ಪ್ರೕ ಸಿಂಪಡಿಸಿದರು, ಹೊರಗಿನಿಂದ ಬಂದವರೇ ಈ ಕೃತ್ಯೆ ಎಸಗಿದ್ದಾರೆ. ಆದರೆ ಇಲ್ಲಿನ ಸ್ಥಳೀಯರು ನಮಗೆ ಉತ್ತಮ ಸಹಕಾರ ನೀಡಿದ್ದಾರೆ ಎಂದರು.

ಕೆಲವು ಕಡೆ ಸ್ವಯಂಪ್ರೇರಿತರಾಗಿ ವ್ಯಾಪಾರಿಗಳೇ ಒತ್ತುವರಿ ತೆರವಿಗೆ ಅವಕಾಶ ಮಾಡಿಕೊಟ್ಟರು. ಒತ್ತುವರಿ ತೆರವು ಕಾರ್ಯಾಚರಣೆಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಇಂಜಿನಿಯರ್‌ ಮಾಧವರಾವ್‌ ಮಾತನಾಡಿ, ಪೊಲೀಸರ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಥಳೀಯರು ಉತ್ತಮ ಸಹಕಾರ ನೀಡುತ್ತಿದ್ದಾರೆ.ರಸೆಲ್‌ ಮಾರ್ಕೆಟ್‌ ಭಾಗದಲ್ಲಿ ಹೆಚ್ಚಿನ ಫುಟ್‌ಪಾತ್‌ ಒತ್ತುವರಿ ಆಗಿರುವುದರಿಂದ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.

RELATED ARTICLES

Latest News