ಮನಿಲಾ,ಜೂ.8-ಫಿಲಿಪೈನ್ಸ್ ನ ದಕ್ಷಿಣ ಭಾಗದಲ್ಲಿರುವ ಮಿಂಡಾನಾವೊ ಪ್ರದೇಶದಲ್ಲಿ ಇಂದು ಮುಂಜಾನೆ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮ ಹಲವು ಕಟ್ಟಡಗಳು ಕುಸಿದಿದ್ದು ಜನರು ಭೀತಿಗೊಂಡಿದ್ದಾರೆ. ಫಿಲಿಪೈನ್‌್ಸ ಸೇರಿದಂತೆ ಸುತ್ತಮುತ್ತಲಿನ ದೇಶಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಕೇಂದ್ರದ (ಯುಎಸ್‌ಜಿಎಸ್) ಪ್ರಕಾರ, ಭೂಕಂಪವು ಮಿಂದನಾವೊ ದ್ವೀಪದ ಕರಾವಳಿಯಿಂದ ಸುಮಾರು 24 ಕಿಲೋಮೀಟರ್ ಪಶ್ಚಿಮಕ್ಕೆ ಸಮುದ್ರದೊಳಗೆ ಸಂಭವಿಸಿದೆ.
ದೇಶದ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಭೂಕಂಪದ ಕೇಂದ್ರಬಿಂದು ಮಿಂದನಾವೊ ದ್ವೀಪದ ಜನರಲ್ ಸ್ಯಾಂಟೋಸ್ ನಗರದ ನೈಋತ್ಯ ದಿಕ್ಕಿನಲ್ಲಿ 13 ಕಿಲೋಮೀಟರ್ ದೂರದಲ್ಲಿದ್ದು, ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಕಂಪನದ ಕೇಂದ್ರಬಿಂದು ದಾಖಲಾಗಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 7:37ಕ್ಕೆ ಕಂಪನ ಸಂಭವಿಸಿದೆ.
ಪ್ರಭಲ ಭೂಕಂಪದ ನಂತರ ಮತ್ತೆ 6.1 ತೀವ್ರತೆಯ ಕಂಪನ (ಆಫ್ಟರ್‌ಶಾಕ್) ಕೂಡ ದಾಖಲಾಗಿದೆ ಎಂದು ಯುಎಸ್‌ಜಿಎಸ್ ತಿಳಿಸಿದೆ. ಈ ಕಂಪನವು ಸರಂಗಾನಿ ಪ್ರಾಂತ್ಯದ ಉತ್ತರ-ವಾಯವ್ಯ ದಿಕ್ಕಿನಲ್ಲಿ ಸುಮಾರು 8 ಕಿಲೋಮೀಟರ್ ದೂರದಲ್ಲಿ, 67 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.
ಹಲವಾರು ಕಟ್ಟಡಗಳು ಧರೆಗೆ ಉರುಳಿದ್ದು ಮೂವರು ಮೃತಪಟ್ಟಿದ್ದರೆ, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಸುನಾಮಿ ಎಚ್ಚರಿಕೆ ನೀಡಿರುವಂತೆ, ಫಿಲಿಪೈನ್‌್ಸನ ಕೆಲವು ಕರಾವಳಿ ಪ್ರದೇಶಗಳಲ್ಲಿ ಮೂರು ಮೀಟರ್‌ವರೆಗೆ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ. ಇಂಡೋನೇಷ್ಯಾ ಮತ್ತು ಮಲೇಷ್ಯಾದ ಕೆಲವು ಕರಾವಳಿಗಳಲ್ಲಿ ಒಂದು ಮೀಟರ್‌ವರೆಗೆ ಅಲೆಗಳು ಏಳುವ ಸಾಧ್ಯತೆ ಇದೆ.
ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರು ತಕ್ಷಣ ಎತ್ತರದ ಪ್ರದೇಶಗಳಿಗೆ ಅಥವಾ ಒಳನಾಡಿನ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಫಿವೋಲ್‌್ಕ್ಸ್ಸಮುಖ್ಯಸ್ಥ ಎಚ್ಚರಿಕೆ ನೀಡಿದ್ದಾರೆ.
ಇದರ ಜೊತೆಗೆ ತೈವಾನ್, ಜಪಾನ್, ಗುವಾಮ್, ಪಪುವಾ ನ್ಯೂಗಿನಿಯಾ ಸೇರಿದಂತೆ ಪಶ್ಚಿಮ ಪೆಸಿಫಿಕ್ ಪ್ರದೇಶದ ಹಲವು ದ್ವೀಪ ರಾಷ್ಟ್ರಗಳು ಮತ್ತು ಪ್ರದೇಶಗಳಲ್ಲೂ ಸಣ್ಣ ಪ್ರಮಾಣದ ಸುನಾಮಿ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಭೂಕಂಪದ ಕಂಪನಗಳು ಉತ್ತರ ಸುಲವೇಸಿ ಮತ್ತು ಉತ್ತರ ಮಾಲುಕ್ ಪ್ರದೇಶಗಳಲ್ಲಿಯೂ ಅನುಭವಕ್ಕೆ ಬಂದಿವೆ.
ಫಿಲಿಪೈನ್‌್ಸ ಜಗತ್ತಿನ ಅತ್ಯಂತ ವಿಪತ್ತುಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. ರಕ್ಷಣಾ ಮತ್ತು ತುರ್ತು ಸೇವಾ ತಂಡಗಳು ಹಾನಿಯಾದ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಕರಾವಳಿ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.
