Homeರಾಜ್ಯಡಿಕೆಶಿ ಸಂಪುಟದಲ್ಲಿ ಮುಂದುವರೆದ ಖಾತೆ ಕಿರಿಕ್

ಡಿಕೆಶಿ ಸಂಪುಟದಲ್ಲಿ ಮುಂದುವರೆದ ಖಾತೆ ಕಿರಿಕ್

DK Shivakumar's cabinet continues to be a mess

ಬೆಂಗಳೂರು, ಜೂ.8- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ಖಾತೆ ಹಂಚಿಕೆ ವಿಚಾರವಾಗಿರುವ ಅಸಮಧಾನ ಮತ್ತೂ ಮುಂದುವರೆದಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಪಡೆದಿರುವ ಸಚಿವ ಕೃಷ್ಣ ಬೈರೇಗೌಡ, ಬಿ ಎಂ ಆರ್‌ ಡಿ ಮತ್ತು ಬಿಡಿಎ ಒಳಗೊಂಡಂತೆ ಬೆಂಗಳೂರಿನ ಸಮಗ್ರ ಜವಾಬ್ದಾರಿ ನೀಡಬೇಕು ಎಂದು ಒತ್ತಾಯಿಸಿರುವುದಾಗಿ ತಿಳಿದು ಬಂದಿದೆ.

ಸಚಿವ ರಾಮಲಿಂಗಾ ರೆಡ್ಡಿ ತಮಗೆ ನೀಡಿರುವ ಜಲಸಂಪನೂಲ ಖಾತೆ ಬೇಡ. ಬೆಂಗಳೂರು ನಗರಾಭಿವೃದ್ಧಿ ಬೇಕು ಎಂದು ಪಟ್ಟು ಹಿಡಿದು ರಾಜೀನಾಮೆ ನೀಡಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಸೇರಿದಂತೆ ಅನೇಕರು ರಾಮಲಿಂಗಾ ರೆಡ್ಡಿ ಅವರ ಮನವೋಲಿಸಿದ್ದರು.

ತಾವು ಕೊಟ್ಟ ರಾಜೀನಾಮೆ ಅಂಗೀಕಾರವಾಗದೆ ತಿರಸ್ಕಾರವಾಗಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿಕೆ ನೀಡಿ ತಮ ಪಾಡಿಗೆ ತಾವಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೈಕಮಾಂಡ್‌ ಮತ್ತು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಅಲ್ಲಿಗೆ ಎಲ್ಲವೂ ಬಗೆ ಹರಿದಿದೆ ಎಂದು ಮಾಧ್ಯಮಗಳು ಭಾವಿಸಿಕೊಳ್ಳಬಹುದು ಎಂದು ಮುಗುಮಾಗಿ ಹೇಳಿದ್ದಾರೆ.

ಈ ನಡುವೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಪಡೆದಿರುವ ಕೃಷ್ಣ ಬೈರೇಗೌಡ ಈವರೆಗೂ ಇಲಾಖೆಯ ಪ್ರರಿಚಯಾತಕ ಸಭೆ ನಡೆಸಿಲ್ಲ. ತಮಗೆ ಇದೇ ಖಾತೆ ಇರಲಿದೆಯೇ ಅಥವಾ ಬದಲಾಗಲಿದೆಯೇ ಎಂಬ ಗೊಂದಲದಲ್ಲಿ ಇದ್ದಂತಿದೆ. ರಾಮಲಿಂಗಾ ರೆಡ್ಡಿ ಅವರ ಹಠ ಪಕ್ಷದ ಹಿರಿಯ ನಾಯಕರಲ್ಲಿ ಅಸ್ಪಷ್ಟತೆಯ ವಾತಾವರಣ ನಿರ್ಮಿಸಿದೆ.

ಸಚಿವ ಕೃಷ್ಣ ಬೈರೇಗೌಡ ಅವರಿಗೆ ಗ್ರೆಟರ್‌ ಬೆಂಗಳೂರು ನಗರಾಭಿವೃದ್ಧಿಯಲ್ಲಿ ಐದು ಮಹಾನಗರ ಪಾಲಿಕೆಗಳ ಜವಾಬ್ದಾರಿಯನ್ನು ವಹಿಸಲಾಗಿದೆ. ಪ್ರಮುಖವಾಗಿ ಬಿಡಿಎ ಮತ್ತು ಬಿಎಂಆರ್‌ಡಿ ಜವಾಬ್ದಾರಿಗಳನ್ನು ಮುಖ್ಯಮಂತ್ರಿಯವರು ತಮ ಬಳಿಯೇ ಇರಿಸಿಕೊಂಡಿದ್ದಾರೆ.
ಬಿಡಿಎ ನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಕಾಮಗಾರಿಗಳು ನಡೆಯಬೇಕಿದೆ. ಗ್ರೇಟರ್‌ ಬೆಂಗಳೂರು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆದು ಸದಸ್ಯರು ಆಯ್ಕೆಯಾದರೆ, ಸ್ಥಳೀಯ ಆಡಳಿತಕ್ಕೆ ಒತ್ತು ನೀಡಬೇಕಿದೆ. ಸಚಿವರ ಕಾರ್ಯಭಾರ ಕಡಿಮೆಯಾಗಲಿದೆ.

ಬಿಡಿಎ, ಬಿಎಂಆರ್‌ಡಿಗೆ ಪಾಲಿಕೆ ಸದಸ್ಯರ ಹಸ್ತಕ್ಷೇಪ ಮಾಡಲು ಅವಕಾಶ ಇಲ್ಲ. ಹೀಗಾಗಿ ಸಚಿವ ಕೃಷ್ಣ ಬೈರೇಗೌಡ ಈವರೆಗೂ ಖಾತೆಯ ಜವಾಬ್ದಾರಿ ವಹಿಸಿಕೊಳ್ಳದೇ ಗೊಂದಲದ್ದಲಿದ್ದಾರೆ. ಈವರೆಗೂ ತಾವು ನಿರ್ವಹಿಸಿದ ಕಂದಾಯ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಹೊಸ ಖಾತೆಯ ಬಗ್ಗೆ ಚಕಾರ ಎತ್ತದೆ ಇರುವುದು ಹಲವು ಅನುಮಾನಗಳನ್ನು ಮೂಡಿಸಿದೆ.

RELATED ARTICLES

Latest News