Homeರಾಜ್ಯವಿದ್ವಂಸಕ ಕೃತ್ಯಕ್ಕೆ ಯುವಕರನ್ನು ಸಿದ್ದಪಡಿಸುತ್ತಿದ್ದ ಬಂಧಿತ ಶಂಕಿತ ಉಗ್ರರು : ಸ್ಫೋಟಕ ಮಾಹಿತಿ ಬಹಿರಂಗ

ವಿದ್ವಂಸಕ ಕೃತ್ಯಕ್ಕೆ ಯುವಕರನ್ನು ಸಿದ್ದಪಡಿಸುತ್ತಿದ್ದ ಬಂಧಿತ ಶಂಕಿತ ಉಗ್ರರು : ಸ್ಫೋಟಕ ಮಾಹಿತಿ ಬಹಿರಂಗ

Arrested suspected terrorists were preparing youth for terrorist acts:

ಬೆಂಗಳೂರು,ಜೂ.8 -ತುಮಕೂರು ನಗರ ಠಾಣೆ ಪೊಲೀಸರು ಬಂಧಿಸಿರುವ ಇಬ್ಬರು ಶಂಕಿತ ಉಗ್ರರು ದೇಶದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಯುವಕರ ಪಡೆಯೊಂದನ್ನು ಸಿದ್ದಪಡಿಸುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ.

ಪಾಕ್‌ ಉಗ್ರರ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆಂಬ ಮಾಹಿತಿ ಮೇರೆಗೆ ತುಮಕೂರಿನ ಶ್ರೀರಾಮನಗರದ ನಿವಾಸಿ ಅಲ್ಲಾಬಕ್ಷು ಹಾಗೂ ದಾವಣೆಗೆರೆ ಬೀಡಿ ಕಾಲೋನಿ ನಿವಾಸಿ ಜಮೀರ್‌ಖಾನ್‌ ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿರುವ ಸಂದರ್ಭದಲ್ಲಿ ಈ ವಿಚಾರ ಗೊತ್ತಾಗಿದೆ.

ಪಾಕ್‌ ಉಗ್ರ ರಾಣಾ ಸಂಪರ್ಕಕ್ಕೆ ಸಿಕ್ಕ ಬಳಿಕ ಅಲ್ಲಾಬಕ್ಷು ಇನ್‌ಸ್ಟಾಗ್ರಾಮ್‌ನಲ್ಲಿ ರಾಣಾ ಬಾಯಿ ಬಾಯಿ ಎಂದು ಸೇವ್‌ ಮಾಡಿಕೊಂಡಿದ್ದ ತದ ನಂತರದಲ್ಲಿ ಹಿಂದಿ ಭಾಷೆಯಲ್ಲಿ ಆತನೊಂದಿಗೆ ನಡೆಸಿದ ಚರ್ಚೆಯ ಮಾಹಿತಿ ಪೊಲೀಸರಿಗೆ ಲಭಿಸಿದೆ.

ಉಗ್ರ ರಾಣಾ ಪ್ರಚೋದನೆಗೆ ಅಲ್ಲಾಬಕ್ಷು ಮಾರುಹೋಗಿದ್ದ. ಯಾವುದೇ ರೀತಿಯ ಕೆಲಸವಿರಲಿ ನೀನು ನನ್ನನ್ನು ತಮನೆಂದು ನೆನಪಿಸಿಕೋ. ನಾನು ಕಂಡಿತವಾಗಿಯೂ ಆ ಕೆಲಸ ಮಾಡುತ್ತೇನೆಂದು ಅಲ್ಲಾಬಕ್ಷು ಬರವಸೆ ನೀಡಿದ್ದ ಎಂಬ ವಿವರಗಳು ವಿಚಾರಣೆ ವೇಳೆ ಪೊಲೀಸರಿಗೆ ಗೊತ್ತಾಗಿದೆ.

ಅಷ್ಟೇ ಅಲ್ಲದೇ ನಾವಿಬ್ಬರೂ ಜೊತೆಯಾಗಿದ್ದೇವೆ. ನಮ ಸಮುದಾಯಕೋಸ್ಕರ ಕೆಲಸ ಮಾಡೋಣವೆಂದು ಅಲ್ಲಬಕ್ಷು ಹೇಳಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಈ ನಡುವೆ ನಮ ಧರ್ಮವನ್ನು ದ್ವೇಷಿಸುವವರನ್ನು ನಾಶ ಮಾಡಬೇಕು. ಅದಕ್ಕಾಗಿ 50 ರಿಂದ 60 ಮಂದಿಯ ಯುವಕರ ಪಡೆಯನ್ನು ಸಿದ್ದಪಡಿಸಿ ಅವರಿಗೆ ತರಬೇತಿ ನೀಡುವಂತೆ ರಾಣಾ ಹೇಳಿರುವುದಲ್ಲದೇ ಅದಕ್ಕೆ ಖರ್ಚಾಗುವ ಹಣ ನಾನು ಕೊಡುತ್ತೇನೆಂಬ ಆಮಿಷವನ್ನು ಅಲ್ಲಾಬಕ್ಷುಗೆ ಒಡ್ಡಿದ್ದ ಎಂಬ ಸ್ಫೋಟಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ರಾಣಾಗೆ ಶಂಕಿತ ಉಗ್ರ ಅಲ್ಲಾಬಕ್ಷು ನೀನು ಭಾರತದಲ್ಲಿ ಬೇರೆ ಯಾರನ್ನಾದರೂ ಸಂಪರ್ಕಿಸಿದ್ದೀಯಾ ಎಂದು ಕೇಳಿದಾಗ ರಾಣಾನೇ ದಾವಣಗೆರೆಯ ಜಮೀರ್‌ಖಾನ್‌ ಎಂಬಾತನನ್ನು ಪರಿಚಯಿಸಿದ್ದಾನೆ.

ಇವರಿಬ್ಬರು ಜೊತೆಯಾಗಿ ರಾಣಾನ ಮಾರ್ಗದರ್ಶನದಂತೆ ದೇಶ ವಿರೋಧಿ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಬೆನ್ನಲ್ಲೇ ಕೇಂದ್ರ ಗುಪ್ತಚರ ದಳಕ್ಕೆ ಮಹತ್ವದ ಸುಳಿವು ಲಭ್ಯವಾಗಿದೆ.ಕೂಡಲೇ ಎಚ್ಚೆತ್ತುಕೊಂಡು ರಾಜ್ಯ ಗುಪ್ತಚರ ದಳಕ್ಕೆ ಈ ಮಾಹಿತಿ ರವಾನಿಸಿದೆ. ನಂತರ ತುಮಕೂರು ನಗರ ಪೊಲೀಸರಿಗೆ ವಿಷಯ ತಿಳಿಸಿದ್ದು, ಎಲ್ಲರೂ ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಇಬ್ಬರು ಉಗ್ರರನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭಯೋತ್ಪಾದನ ಸಂಚಿನ ಮತ್ತಷ್ಟು ಸಂಗತಿಗಳನ್ನು ವಿಚಾರಣೆ ವೇಳೆ ಪೊಲೀಸರು ಕಲೆ ಹಾಕುತ್ತಿದ್ದಾರೆ.

RELATED ARTICLES

Latest News