Homeರಾಜ್ಯಚಾರ್ಮಾಡಿ ಘಾಟ್‌ನಲ್ಲಿ ಚಿರತೆ ಪ್ರತ್ಯಕ್ಷ, ಪ್ರವಾಸಿಗರಲ್ಲಿ ಆತಂಕ

ಚಾರ್ಮಾಡಿ ಘಾಟ್‌ನಲ್ಲಿ ಚಿರತೆ ಪ್ರತ್ಯಕ್ಷ, ಪ್ರವಾಸಿಗರಲ್ಲಿ ಆತಂಕ

Leopard spotted at Charmadi Ghat, tourists worried

ಚಿಕ್ಕಮಗಳೂರು, ಜೂ.11-ಚಾರ್ಮಾಡಿ ಘಾಟ್‌ನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ವಾಹನ ಸವಾರರು ಹಾಗೂ ಪ್ರವಾಸಿಗರಲ್ಲಿ ಆತಂಕ ಮನೆ ಮಾಡಿದೆ.ಮೂಡಿಗೆರೆ ಅರಣ್ಯ ವಲಯ ವ್ಯಾಪ್ತಿಗೆ ಒಳಪಡುವ ಘಾಟಿ ರಸ್ತೆಯ ತಡೆಗೋಡೆಯ ಸಮೀಪ ಚಿರತೆ ಕಾಣಿಸಿಕೊಂಡಿದೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಮಳೆಗಾಲ ಆರಂಭವಾಗಿರುವುದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ.

ಮಳೆ ಹಾಗೂ ದಟ್ಟ ಮಂಜಿನಿಂದ ಹಚ್ಚಹಸಿರಿನಿಂದ ಚಾರ್ಮಾಡಿ ಘಾಟ್‌ ಕಂಗೊಳಿಸುತ್ತಿದ್ದು, ಕಾಡುಪ್ರಾಣಿಗಳ ಚಲನೆ ತಕ್ಷಣ ಗಮನಕ್ಕೆ ಬಾರದಿರುವ ಸಾಧ್ಯತೆ ಇದೆ. ಇಂತಹ ಸಂದರ್ಭಗಳಲ್ಲಿ ಫೋಟೋ ಅಥವಾ ಸೆಲ್ಫಿ ಪಡೆಯಲು ವಾಹನದಿಂದ ಇಳಿಯುವ ಪ್ರವಾಸಿಗರು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.

ಚಾರ್ಮಾಡಿ ಘಾಟ್‌ ಸಂಪೂರ್ಣ ಅರಣ್ಯ ವಲಯವಾಗಿರುವುದರಿಂದ ಕಾಡುಪ್ರಾಣಿಗಳ ಸಂಚಾರ ಸಹಜ. ಆದರೆ ಮಾನವ ಚಟುವಟಿಕೆ ಹೆಚ್ಚಿರುವ ರಸ್ತೆಯ ಸಮೀಪ ಅವು ಕಾಣಿಸಿಕೊಂಡಿರುವುದು ಗಮನಾರ್ಹವಾಗಿದೆ. ಹೀಗಾಗಿ ವಾಹನ ನಿಲ್ಲಿಸುವಾಗ ಸುರಕ್ಷ ಸ್ಥಳ ಆಯ್ಕೆ ಮಾಡುವುದು, ಗುಂಪಾಗಿ ರಸ್ತೆ ಅಂಚಿಗೆ ತೆರಳುವುದು ಹಾಗೂ ಕಾಡುಪ್ರಾಣಿಗಳ ಹತ್ತಿರ ಹೋಗಲು ಯತ್ನಿಸುವುದನ್ನು ತಪ್ಪಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

RELATED ARTICLES

Latest News