ನಿತ್ಯ ನೀತಿ : ಚಿಕ್ಕ ಚಿಕ್ಕ ವಿಷಯಕ್ಕೆ ಕೋಪ ಮಾಡಿಕೊಳ್ಳೋರಿಗೆ ಮೋಸ ಮಾಡೋಕೆ ಬರಲ್ಲ. ಮೋಸ ಮಾಡೋರಿಗೆ ಕೋಪಾನೆ ಬರಲ್ಲ..
ಪಂಚಾಂಗ : ಮಂಗಳವಾರ, 16-06-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ / ಮಾಸ: ನಿಜ ಜ್ಯೇಷ್ಠ / ಪಕ್ಷ: ಶುಕ್ಲ / ತಿಥಿ: ದ್ವಿತೀಯಾ / ನಕ್ಷತ್ರ: ಅರ್ದ್ರಾ / ಯೋಗ: ವೃದ್ಧಿ / ಕರಣ: ಬಾಲವ
ಸೂರ್ಯೋದಯ – ಬೆ.5.54
ಸೂರ್ಯಾಸ್ತ – 06.47
ರಾಹುಕಾಲ – 3.00-4.30
ಯಮಗಂಡ ಕಾಲ – 9.00- 10.30
ಗುಳಿಕ ಕಾಲ – 12.00- 1.30
ರಾಶಿಭವಿಷ್ಯ :
ಮೇಷ: ಆರ್ಥಿಕ ಏರುಪೇರಿನಿಂದಾಗಿ ಕುಟುಂಬದಲ್ಲಿ ಅಹಿತಕರ ವಾತಾವರಣ ಉಂಟಾಗಲಿದೆ.
ವೃಷಭ: ಕೆಲಸ-ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ. ಮನೆ ಸಮಸ್ಯೆಗಳ ಬಗ್ಗೆ ಗಮನ ಕೊಡಿ.
ಮಿಥುನ: ಕೌಟುಂಬಿಕ ಜೀವನ ಸುಖಮಯವಾಗಿರು ತ್ತದೆ. ನಿಮ್ಮ ಕನಸು ನನಸಾಗಲಿದೆ.
ಕಟಕ: ಹಣ ಸುಲಭವಾಗಿ ದೊರೆಯುತ್ತದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಖರ್ಚು ಮಾಡದಿರಿ.
ಸಿಂಹ: ತಲೆನೋವು, ಮೊಣಕಾಲು ನೋವು ಇತ್ಯಾದಿಗಳಿಂದ ತೊಂದರೆಗೆಒಳಗಾಗಬಹುದು.
ಕನ್ಯಾ: ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳ ದಿರುವುದರಿಂದ ಸ್ನೇಹಿತರು ಕೋಪಗೊಳ್ಳಬಹುದು.
ತುಲಾ: ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಗಮನ ಹರಿಸಿ.
ವೃಶ್ಚಿಕ: ಹಣದ ಕೊರತೆ ಇರುವುದಿಲ್ಲ. ಹಿಂದೆ ಮಾಡಿದ್ದ ಸಾಲವನ್ನು ಸಹ ತೀರಿಸುವಿರಿ.
ಧನುಸ್ಸು: ದುಷ್ಟ ಜನರ ಸಹವಾಸದಿಂದ ದೂರವಿರುವುದು ಒಳಿತು.
ಮಕರ: ಹಿರಿಯರನ್ನು ಗೌರವಿಸುವುದರಿಂದ ಕೆಲಸದಲ್ಲಿ ಉತ್ತಮ ಯಶಸ್ಸು ಸಿಗಲಿದೆ.
ಕುಂಭ: ನಿಮ್ಮ ಜನಪ್ರಿಯತೆ ಉತ್ತುಂಗದಲ್ಲಿರುತ್ತದೆ ಮತ್ತು ಇತರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವಿರಿ.
ಮೀನ: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ.
