ನೀಸ್ (ಫ್ರಾನ್ಸ್), ಜೂ.13- ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜಿ7 ಶೃಂಗಸಭೆ ಯಲ್ಲಿ ಭಾಗವಹಿಸಲು ಫ್ರಾನ್ಸ್ ಗೆ ಆಗಮಿಸಿದ್ದಾರೆ. ಫ್ರಾನ್ಸ್ ಮತ್ತು ಸ್ಲೋವಾಕಿಯಾ ದೇಶಗಳ ಐದು ದಿನಗಳ ಪ್ರವಾಸದ ಮೊದಲ ಹಂತವಾಗಿ ಮೋದಿ ಅವರು ಫ್ರಾನ್ಸ್ ನ ನೀಸ್ ನಗರಕ್ಕೆ ತಲುಪಿದರು.
ಫ್ರಾನ್‌್ಸಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ ಹಾಗೂ ನಾವೀನ್ಯತೆ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.ನೀಸ್ ಕೋಟ್ ಡಿ ಅಝೂರ್ ವಿಮಾನ ನಿಲ್ದಾಣದಲ್ಲಿ ಫ್ರಾನ್ಸ್ ನ ಶಿಕ್ಷಣ ಸಚಿವ ಎಡ್ವಾರ್ಡ್ ಜೆಫ್ರೇ,ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಬಾಹ್ಯಾಕಾಶ ಸಚಿವ ಫಿಲಿಪ್ ಬ್ಯಾಪ್ಟಿಸ್ಟ್,ಭಾರತದಲ್ಲಿನ ಫ್ರಾನ್ಸ್ ರಾಯಭಾರಿ ಥಿಯರಿ ಮಥೋ, ನೀಸ್ ನಗರದ ಮೇಯರ್ ಎರಿಕ್ ಸಿಯೊಟ್ಟಿ ಸೇರಿದಂತೆ ಹಲವು ಗಣ್ಯರು ಅವರನ್ನು ಮೋದಿ ಅವರನ್ನು ಆತೀಯವಾಗಿ ಸ್ವಾಗತಿಸಿದರು.
ಆಗಮನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮೋದಿ, ನೀಸ್‌ಗೆ ಬಂದಿಳಿದಿದ್ದೇನೆ. ಈ ಫ್ರಾನ್ಸ್ ಪ್ರವಾಸದಲ್ಲಿ ನೀಸ್ ಜೊತೆಗೆ ಎವಿಯನ್ ಮತ್ತು ಪ್ಯಾರಿಸ್‌ನಲ್ಲಿಯೂ ಕಾರ್ಯಕ್ರಮಗಳಿವೆ. ಭಾರತದ ಪ್ರಮುಖ ಅಭಿವೃದ್ಧಿ ಪಾಲುದಾರ ರಾಷ್ಟ್ರಗಳೊಂದಿಗೆ ಸ್ನೇಹವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಭೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ನಾಳೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಭೇಟಿಯಾಗಲು ಹಾಗೂ ಭಾರತ್ ಇನ್ನೋವೇಟ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಎದುರು ನೋಡುತ್ತಿದ್ದೇನೆ, ಎಂದೂ ಅವರು ಹೇಳಿದ್ದಾರೆ.
ಪ್ರವಾಸದ ಮೊದಲ ಹಂತದಲ್ಲಿ ಪ್ರಧಾನಿ ಮೋದಿ ಇಂದು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ಇಬ್ಬರೂ ಸೇರಿ ಭಾರತ್ ಇನ್ನೋವೇಟ್ಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾರತ, ಫ್ರಾನ್ಸ್ ಹಾಗೂ ಇತರ ದೇಶಗಳ ಪ್ರಮುಖ
ಸ್ಟಾರ್ಟ್‌ಅಪ್‌ಗಳು ಮತ್ತು ವೆಂಚರ್ ಕ್ಯಾಪಿಟಲ್ ನಿಧಿಗಳು ಭಾಗವಹಿಸಲಿವೆ.
ಈ ವರ್ಷದ ಆರಂಭದಲ್ಲಿ ವಿಶೇಷ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆ ಮಟ್ಟಕ್ಕೆ ಏರಿಸಲ್ಪಟ್ಟ ಭಾರತ-ಫ್ರಾನ್‌್ಸಸಂಬಂಧಗಳ ಎಲ್ಲ ಆಯಾಮಗಳನ್ನೂ ಉಭಯ ನಾಯಕರು ಪರಿಶೀಲಿಸಲಿದ್ದಾರೆ.
2026: ಭಾರತ-ಫ್ರಾನ್ಸ್ ನಾವೀನ್ಯತಾ ವರ್ಷ
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಈ ಭೇಟಿ ಭಾರತ-ಫ್ರಾನ್‌್ಸ ಸಹಕಾರವನ್ನು ಹಲವು ಪ್ರಮುಖ ಕ್ಷೇತ್ರಗಳಲ್ಲಿ ಮತ್ತಷ್ಟು ಬಲಪಡಿಸಲು ಅವಕಾಶ ಕಲ್ಪಿಸಲಿದೆ ಎಂದು ತಿಳಿಸಿದ್ದಾರೆ.
ಭಾರತ ಮತ್ತು ಫ್ರಾನ್ಸ್ 2026ನೇ ವರ್ಷವನ್ನು ನಾವೀನ್ಯತಾ ವರ್ಷವಾಗಿ ಆಚರಿಸುತ್ತಿವೆ. ಭಾರತ್ ಇನ್ನೋವೇಟ್ಸ್ ಕಾರ್ಯಕ್ರಮವು ಭಾರತದ ಚೈತನ್ಯಮಯ ನಾವೀನ್ಯತಾ ಪರಿಸರವನ್ನು ಪ್ರದರ್ಶಿಸುವುದರ ಜೊತೆಗೆ ಸ್ಟಾರ್ಟ್‌ಅಪ್‌ಗಳು ಮತ್ತು ಆವಿಷ್ಕಾರಕರಿಗೆ ತಮ್ಮ ಅತ್ಯಾಧುನಿಕ ಪರಿಹಾರಗಳು ಮತ್ತು ಉತ್ಪನ್ನಗಳನ್ನು ಪರಿಚಯಿಸಲು ವೇದಿಕೆ ಒದಗಿಸಲಿದೆ, ಎಂದು ಅವರು ಹೇಳಿದ್ದಾರೆ.
ಭಾರತೀಯ ಸಮುದಾಯದಿಂದ ಅದ್ಧೂರಿ ಸ್ವಾಗತ
ಫ್ರಾನ್ಸ್ ನಲ್ಲಿರುವ ಭಾರತೀಯ ಸಮುದಾಯದ ಸದಸ್ಯರು ತ್ರಿವರ್ಣ ಧ್ವಜಗಳನ್ನು ಹಿಡಿದು ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಕೂಗಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ಕೋರಿದರು.ಮೋದಿ ತಂಗಿದ್ದ ಹೋಟೆಲ್ ಹೊರಗೆ ಭಾರತೀಯ ಸಮುದಾಯದ ಸದಸ್ಯರು ಅವರನ್ನು ಉತ್ಸಾಹದಿಂದ ಬರಮಾಡಿಕೊಂಡರು. ಸಾಂಪ್ರದಾಯಿಕ ನೃತ್ಯ ಪ್ರದರ್ಶನವು ಸ್ವಾಗತಕ್ಕೆ ಸಾಂಸ್ಕೃತಿಕ ಮೆರುಗು ನೀಡಿತು.
ನೀಸ್‌ನಲ್ಲಿರುವ ಭಾರತೀಯ ಸಮುದಾಯದಿಂದ ಸರಣೀಯ ಸ್ವಾಗತ ದೊರೆಯಿತು. ತಾಯ್ನಾಡಿನಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದರೂ, ಭಾರತದೊಂದಿಗೆ ಅವರ ಬಾಂಧವ್ಯ ಎಂದಿನಂತೆಯೇ ಗಟ್ಟಿಯಾಗಿದೆ, ಎಂದು ಮೋದಿ ಮತ್ತೊಂದು
ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಫ್ರೆಂಚ್ ಹಾಗೂ ಯುರೋಪಿಯನ್ ಕಲಾವಿದರು ಪ್ರದರ್ಶಿಸಿದ ಕಥಕ್, ಒಡಿಸ್ಸಿ ಮತ್ತು ಭರತನಾಟ್ಯನೃತ್ಯಗಳನ್ನೂ ಪ್ರಧಾನಿ ವೀಕ್ಷಿಸಿದರು ಎಂದು ಅವರು ತಿಳಿಸಿದ್ದಾರೆ.
ಮೋದಿ ಅವರ ಆಗಮನದ ಗೌರವಾರ್ಥವಾಗಿ ನೀಸ್ ನಗರದ ಮೇಯರ್ ಕಚೇರಿಯಲ್ಲಿರುವ ಸಿಟಿ ಹಾಲ್‌ನಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ವಿದೇಶಿ ನಾಯಕರಿಗೆ ಅಪರೂಪವಾಗಿ ನೀಡಲಾಗುವ ಗೌರವ ಇದಾಗಿದೆ.
ಪ್ರವಾಸದ ಅಂಗವಾಗಿ ಮೋದಿ ಅವರು ಜೂನ್ 14 ಮತ್ತು 15ರಂದು ಸ್ಲೋವಾಕಿಯಾ ಕ್ಕೆ ಭೇಟಿ ನೀಡಿ, ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನಿ ಮತ್ತು ಪ್ರಧಾನಿ ರಾಬರ್ಟ್ ಫಿಕೊಅವರೊಂದಿಗೆ ಬ್ರಾಟಿಸ್ಲಾವಾದಲ್ಲಿ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಉದ್ಯಮಿಗಳೊಂದಿಗೂ ಸಂವಾದ ನಡೆಸಲಿದ್ದಾರೆ.
ಅದಾದ ಬಳಿಕ ಅವರು ಮತ್ತೆ ಫ್ರಾನ್‌್ಸಗೆ ಮರಳಿ ಜೂನ್ 16 ಮತ್ತು 17ರಂದು ಎವಿಯನ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿಭಾಗವಹಿಸಲಿದ್ದಾರೆ.ಶೃಂಗಸಭೆಯಲ್ಲಿ ಅಂತರರಾಷ್ಟ್ರೀಯ ಸಹಕಾರ, ಆರ್ಥಿಕ ಬೆಳವಣಿಗೆ ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ಜಾಗತಿಕ ವಿಷಯಗಳ ಕುರಿತು ಜಿ7 ರಾಷ್ಟ್ರಗಳ ನಾಯಕರು ಹಾಗೂ ಆಹ್ವಾನಿತ ಪಾಲುದಾರ ರಾಷ್ಟ್ರಗಳೊಂದಿಗೆ ಅವರು ಚರ್ಚಿಸಲಿದ್ದಾರೆ. ಇದೇ ವೇಳೆ ಹಲವು ದ್ವಿಪಕ್ಷೀಯ ಸಭೆಗಳನ್ನೂ ನಡೆಸುವ ನಿರೀಕ್ಷೆಯಿದೆ.
ಪ್ರವಾಸದ ಅಂತಿಮ ಹಂತದಲ್ಲಿ ಜೂನ್ 18ರಂದು ಮೋದಿ ಅವರು ಪ್ಯಾರಿಸ್‌ನಲ್ಲಿ ನಡೆಯಲಿರುವ ಯುರೋಪಿನ ಅತಿದೊಡ್ಡ ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್ ಉತ್ಸವವಾದ ವಿವಾಟೆಕ್ 2026 ಕಾರ್ಯಕ್ರಮದಲ್ಲಿ ಅಧ್ಯಕ್ಷ ಮ್ಯಾಕ್ರೋನ್ ಅವರೊಂದಿಗೆ ಭಾಗವಹಿಸಲಿದ್ದಾರೆ.ಈ ವರ್ಷದ ಕಾರ್ಯಕ್ರಮದಲ್ಲಿ ಭಾರತವು ಅತಿದೊಡ್ಡ ರಾಷ್ಟ್ರೀಯ ಪೆವಿಲಿಯನ್‌ಹೊಂದಿರಲಿದೆ.
ಫ್ರಾನ್‌್ಸನ ಭಾರತೀಯ ಸಮುದಾಯದ ಸದಸ್ಯರೊಂದಿಗೂ ಮೋದಿ ಸಂವಾದ ನಡೆಸಲಿದ್ದಾರೆ.
