Homeರಾಜ್ಯಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಚಿನ್ನೇಗೌಡರಿಗೆ ಪತ್ನಿ ವಿಯೋಗ

ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಚಿನ್ನೇಗೌಡರಿಗೆ ಪತ್ನಿ ವಿಯೋಗ

Jayamma Passes Away: Sriimurali and Vijay Raghavendra’s Mother Dies After Illness

ಬೆಂಗಳೂರು,ಜೂ.16-ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ನಿರ್ಮಾಪಕರಾದ ಎಸ್‌‍.ಎ. ಚಿನ್ನೇಗೌಡ ಅವರ ಪತ್ನಿ ಜಯಮ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ (70) ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ನಿಧನರಾಗಿದ್ದಾರೆ.

ತಾಯಿಯ ಅಗಲಿಕೆಯಿಂದ ಪುತ್ರರಾದ ವಿಜಯ್‌ ರಾಘವೇಂದ್ರ ಮತ್ತು ಶ್ರೀಮುರಳಿ ಹಾಗೂ ಕುಟುಂಬ ವರ್ಗದವರು ದುಃಖತಪ್ತರಾಗಿದ್ದಾರೆ.ಜಯಮ ಅವರೂ ಕೂಡಾ ನಿರ್ಮಾಪಕರಾಗಿದ್ದು ಅವರು ತಮ ಪುತ್ರರಾದ ಶ್ರೀಮುರಳಿ ನಟನೆಯ ಸೇವಂತಿ ಸೇವಂತಿ ಮತ್ತು ವಿಜಯರಾಘವೇಂದ್ರ ಅಭಿನಯದ ಗಣೇಶ ಮತ್ತೆ ಬಂದ ಹಾಗೂ ಖುಷಿ ಸಿನಿಮಾಗಳನ್ನು ನಿರ್ಮಿಸಿದ್ದಾರೆ.

ನಟ ವಿಜಯ್‌ ರಾಘವೇಂದ್ರ ಅವರು ಕೆಲವೇ ವರ್ಷಗಳ ಹಿಂದೆ ಪತ್ನಿ ಸ್ಪಂದನಾರನ್ನು ಕಳೆದುಕೊಂಡಿದ್ದು, ಈಗ ತಾಯಿ ಜಯಮರವರ ನಿಧನದಿಂದ ಅವರ ದುಃಖ ಹೆಚ್ಚಾಗಿದೆ. ಜಯಮ ಅವರು ಕೇವಲ ಒಂದು ಸ್ಟಾರ್‌ ಕುಟುಂಬದ ಗೃಹಿಣಿಯಾಗಿರಲಿಲ್ಲ. ಬದಲಿಗೆ ಪತಿ ಹಾಗೂ ಮಕ್ಕಳ ಸಿನಿ ಪಯಣಕ್ಕೆ ದೊಡ್ಡ ಬೆನ್ನೆಲುಬಾಗಿ ನಿಂತು ಅಪಾರ ಬೆಂಬಲ ನೀಡಿದ್ದರು.

ಪತಿ ಚಿನ್ನೇಗೌಡರು ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಳ್ಳಲು ಹಾಗೂ ಇಬ್ಬರು ಗಂಡು ಮಕ್ಕಳು ಚಿತ್ರರಂಗದಲ್ಲಿ ಸ್ಟಾರ್‌ ನಟರಾಗಿ ಬೆಳೆಯಲು ಜಯಮ ಅವರ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ನೈತಿಕ ಬೆಂಬಲ ಅಪಾರವಾಗಿತ್ತು.

ಸದಾ ತೆರೆಯ ಮರೆಯಲ್ಲೇ ಇದ್ದು, ಇಡೀ ಕುಟುಂಬವನ್ನು ಮುನ್ನಡೆಸಿದ ಶಕ್ತಿ ಅವರಾಗಿದ್ದರು. ವಸಂತನಗರದಲ್ಲಿರುವ ಅವರ ನಿವಾಸಕ್ಕೆ ಚಿತ್ರರಂಗದ ಗಣ್ಯರು, ಚಲನಚಿತ್ರ ನಟ-ನಟಿಯರು, ಆಪ್ತರು ಆಗಮಿಸಿ ಜಯಮ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಚಿತ್ರರಂಗ ಕಂಬನಿ:
ಜಯಮ್ಮ ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟ ಉಂಟಾಗಿದ್ದು, ಸ್ಯಾಂಡಲ್‌ವುಡ್‌ನ ನಟರುಗಳಾದ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ರವಿಚಂದ್ರನ್‌, ಉಪೇಂದ್ರ, ರಮೇಶ್‌ ಅರವಿಂದ್‌, ಜಗ್ಗೇಶ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಜಯಮಾಲಾ ಸೇರಿದಂತೆ ಹಲವು ಕಲಾವಿದರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿ ಜಯಮ ಅವರ ಆತಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ದೇವರು ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

RELATED ARTICLES

Latest News