Homeರಾಜ್ಯಪಬ್‌ನಲ್ಲಿ ಬೆಂಕಿ ಪ್ರಕರಣ : ಅಬಕಾರಿ ಡಿಸಿ ಅಮಾನತು

ಪಬ್‌ನಲ್ಲಿ ಬೆಂಕಿ ಪ್ರಕರಣ : ಅಬಕಾರಿ ಡಿಸಿ ಅಮಾನತು

Pub fire case: Excise DC suspended

ಮೈಸೂರು, ಜೂನ್‌ 16- ಪಬ್‌ನಲ್ಲಿ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು ಮಾಡಲಾಗಿದೆ ಹಾಗೂ ಪಬ್‌ ಮಾಲೀಕರ ವಿರುದ್ಧ ದೂರು ದಾಖಲು ಮಾಡಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಲೈಸೆನ್ಸ್ ಇಲ್ಲದೆ ಪಬ್‌ ನಡೆಯುತ್ತಿತ್ತು. ಮೈಸೂರಿನಲ್ಲಿ ಅನೇಕ ಪಬ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳು ಲೈಸೆನ್ಸ್ ಪಡೆಯದೆ ನಡೆಸುತ್ತಿರುವ ವಿಚಾರ ಗೊತ್ತಾಗಿದೆ. ಎಲ್ಲೆಲ್ಲಿ ಅಕ್ರಮ ಹಾಗೂ ಲೈಸೆನ್ಸ್ ಇಲ್ಲದೆ ಬಾರ್‌ ರೆಸ್ಟೋರೆಂಟ್‌ ನಡೆಯುತ್ತಿದೆ ಅಂಥವುಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅಬಕಾರಿ ಡಿಸಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.

ಲೈಸೆನ್ಸ್ ಇಲ್ಲದೆ ಬಾರ್‌ ನಡೆಸುತ್ತಿದ್ದರೂ ಅಬಕಾರಿ ಡಿಸಿ ಕಣುಚ್ಚಿ ಕುಳಿತಿದ್ದಾರೆ. ಅಧಿಕಾರಿಗಳ ಮೇಲೂ ಕ್ರಮಕ್ಕೆ ಒತ್ತಾಯ ಕೇಳಿ ಬಂದಿದೆ. ಹೀಗಾಗಿ ಅಮಾನತು ಮಾಡುವಂತೆ ಶಿಫಾರಸು ಮಾಡುತ್ತೇನೆ. ಪೊಲೀಸರಿಗೂ ಕೂಡ ಎಲ್ಲಾ ಕಡೆ ಪರಿಶೀಲನೆ ನಡೆಸಿ ಎಂದು ಸೂಚನೆ ನೀಡಿದ್ದೇನೆ. ಮೈಸೂರಿನ ಎಲ್ಲಾ ವಾಣಿಜ್ಯ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆ ಬಗ್ಗೆ ಮುಂಜಾಗ್ರತೆ ಕ್ರಮ ತೆಗೆದುಕೊಂಡಿರುವ ಕುರಿತು ಪರಿಶೀಲನೆ ನಡೆಸಲು ಮತ್ತು ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌‍ನಿಂದ 5 ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ನಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಇಂದು ನಡೆಯುವ ಸಿ.ಎಲ್‌‍. ಪಿ ಸಭೆಯಲ್ಲಿ ನಾನು ಕೂಡ ಭಾಗಿಯಾಗುತ್ತೇನೆ ಎಂದ ಅವರು, ಬಿಡದಿ ಟೌನ್‌ಶಿಪ್‌ ಮಾಡುವುದು ಅತ್ಯವಶ್ಯಕ. ಶೇ.80ರಷ್ಟು ರೈತರು ಜಮೀನು ಕೊಡಲು ಒಪ್ಪಿದ್ದಾರೆ.ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇದರಲ್ಲಿ ಜೆಡಿಎಸ್‌‍ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. ಕೆಲವರ ಮಾತನ್ನು ಕೇಳಿ ಯೋಜನೆ ಕೈ ಬಿಡಲು ಆಗಲ್ಲ. ಬೆಂಗಳೂರು ಜನಸಂದಣಿ ಹೆಚ್ಚಾಗಿದೆ. ಜನರಿಗೆ ನಿವೇಶನದ ಅಗತ್ಯ ಇದೆ. ಬೆಂಗಳೂರು ವಿಸ್ತರಣೆಯ ಅವಶ್ಯಕತೆಯಂತೂ ಇದೆ. ರೈತರೊಂದಿಗೆ ಮಾತುಕತೆ ನಡೆಸಿ, ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಮಾಡುತ್ತೇವೆ ಎಂದು ಅವರು ಹೇಳಿದರು.

RELATED ARTICLES

Latest News