Homeಅಂತಾರಾಷ್ಟ್ರೀಯ12 ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದಲ್ಲಿರುವ ಮೋದಿ ಕಠಿಣ ವ್ಯಕ್ತಿ, ಶ್ರೇಷ್ಠ ನಾಯಕ: ಟ್ರಂಪ್‌‍

12 ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದಲ್ಲಿರುವ ಮೋದಿ ಕಠಿಣ ವ್ಯಕ್ತಿ, ಶ್ರೇಷ್ಠ ನಾಯಕ: ಟ್ರಂಪ್‌‍

ವಾಷಿಂಗ್ಟನ್‌‍, ಜೂ.19- ಭಾರತವನ್ನು ಅಮೆರಿಕ ಅಧ್ಯಕ್ಷ ಟಂಪ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ರೇಷ್ಠ ನಾಯಕ ಹಾಗೂ ಕಠಿಣ ವ್ಯಕ್ತಿ ಎಂದು ಹೊಗಳಿದ್ದಾರೆ. ಭಾರತದ ಬೃಹತ್‌ ದೇಶವನ್ನು 12 ವರ್ಷಗಳಿಗಿಂತ ಹೆಚ್ಚು ಕಾಲ ಅಧಿಕಾರ ನಡೆಸಿ ಶ್ರೇಷ್ಠ ನಾಯಕರೆನಿಸಿದ್ದಾರೆ ಎಂದು ಟ್ರಂಪ್‌ ಕೊಂಡಾಡಿದ್ದಾರೆ. ಆಕ್ಸಿಯೊಸ್‌‍ಗೆ ನೀಡಿದ ಸಂದರ್ಶನದಲ್ಲಿ ,ಅಧಿಕಾರ, ಪ್ರಭಾವ ಮತ್ತು ನಿರ್ಧಾರಗಳನ್ನು ಜಾರಿಗೆ ತರುವ ಸಾಮರ್ಥ್ಯದ ದೃಷ್ಟಿಯಿಂದ ತಾನು ಹೆಚ್ಚು ಮೆಚ್ಚುವ ಇಬ್ಬರು ನಾಯಕರಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌‍ ಮತ್ತು ಮೋದಿ ಸೇರಿದ್ದಾರೆ ಎಂದು ಟ್ರಂಪ್‌ ಹೇಳಿದರು.

ಮೋದಿ ತುಂಬಾ ಉತ್ತಮ ನಾಯಕ. ಭಾರತವು ಉತ್ತಮ ಆರ್ಥಿಕ ಸಾಧನೆಗಳನ್ನು ದಾಖಲಿಸಿದ ಅವರು ಯುದ್ಧಗಳಿಂದ ದೂರವಿರುತ್ತಾರೆ, ಅದು ಬುದ್ಧಿವಂತಿಕೆಯ ನಡೆ ಎಂದಿದ್ದಾರೆ. ಭಾರತವು 1.5 ಬಿಲಿಯನ್‌ ಜನಸಂಖ್ಯೆಯ ದೇಶ. ವಾಸ್ತವವಾಗಿ ಅದು ವಿಶ್ವದ ಅತಿ ದೊಡ್ಡ ಜನಸಂಖ್ಯೆಯ ರಾಷ್ಟ್ರವಾಗಿದೆ. ಮೋದಿ ಒಬ್ಬ ಶ್ರೇಷ್ಠ ನಾಯಕ ಎಂದು ಟ್ರಂಪ್‌ ಹೇಳಿದರು. ಭಾರತದೊಂದಿಗೆ ಅಮೆರಿಕ ಹೆಚ್ಚಿನ ವ್ಯಾಪಾರ ನಡೆಸುತ್ತಿದೆ ಎಂದು ಹೇಳಿದ ಅವರು, ನಾವು ಈಗ ಭಾರತ ಜತೆಗೆ ಸಾಕಷ್ಟು ವ್ಯಾಪಾರ ಮಾಡುತ್ತಿದ್ದೇವೆ. ಆದರೆ ಈಗ ಅದು ನ್ಯಾಯಯುತ ವ್ಯಾಪಾರವಾಗಿದೆ. ಹಿಂದೆ ಅವರು ನಮನ್ನು ಬಹಳವಾಗಿ ಬಳಸಿಕೊಳ್ಳುತ್ತಿದ್ದರು. ಅದಕ್ಕಾಗಿ ನಾನು ಅವರನ್ನು ದೂಷಿಸುವುದಿಲ್ಲ. ಅದಕ್ಕೆ ಅವಕಾಶ ನೀಡಿದ್ದವರು ನಮ್ಮ ಮೂರ್ಖ ರಾಜಕಾರಣಿಗಳು. ಆದರೆ ಈಗ ನಾವು ಸಾಕಷ್ಟು ವ್ಯಾಪಾರ ಮಾಡುತ್ತಿದ್ದೇವೆ ಎಂದು ಟ್ರಂಪ್‌ ಹೇಳಿದರು.

ಈಗಿನ ಪರಿಸ್ಥಿತಿಯಿಂದ ಅವರು ಅಷ್ಟಾಗಿ ಸಂತುಷ್ಟರಿಲ್ಲ, ಏಕೆಂದರೆ ಹಿಂದೆ ಅವರಿಗೆ ಹೆಚ್ಚಿನ ಲಾಭವಾಗುತ್ತಿತ್ತು. ಆದರೂ ಮೋದಿ ಶ್ರೇಷ್ಠ ನಾಯಕ ಎಂದು ಅವರು ಹೇಳಿದರು. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌‍ ಅವರನ್ನು ಸಹ ಟ್ರಂಪ್‌ ಪ್ರಶಂಸಿಸಿ, ಅವರು ಅಪಾರ ವ್ಯಕ್ತಿತ್ವ ಮತ್ತು ಆತವಿಶ್ವಾಸ ಹೊಂದಿರುವ ನಾಯಕ ಎಂದು ಬಣ್ಣಿಸಿದರು. ಇಬ್ಬರ ಜೀವನದ ಕುರಿತಾಗಿ ಸಿನಿಮಾ ಮಾಡಲು ಹೊರಟರೆ, ಹಾಲಿವುಡ್‌ನಲ್ಲಿ ಅವರಂತ ವ್ಯಕ್ತಿಗಳನ್ನು ಹುಡುಕುವುದು ಕಷ್ಟ ಎಂದು ಟ್ರಂಪ್‌ ಹೇಳಿದರು.

ಮೋದಿ ವಿಭಿನ್ನ ರೀತಿಯಲ್ಲಿ ಅತ್ಯಂತ ಗೌರವಾನ್ವಿತ ನಾಯಕ. ನಿಜವಾದ ಮೋದಿ ಬಹಳ ಕಠಿಣ ವ್ಯಕ್ತಿ ಎಂಬುದು ನನಗೆ ಗೊತ್ತಾಗಿದೆ. ನಾನು ಅವರನ್ನು ಹಿಂದೆ ಅಷ್ಟು ಚೆನ್ನಾಗಿ ತಿಳಿದಿರಲಿಲ್ಲ, ಆದರೆ ಈಗ ತಿಳಿದುಕೊಂಡಿದ್ದೇನೆ ಎಂದು ಅವರು ಹೇಳಿದರು. ಕಳೆದ ವರ್ಷದಿಂದ ಉಭಯ ರಾಷ್ಟ್ರಗಳ ಸಂಬಂಧಗಳಲ್ಲಿ ಉಂಟಾಗಿದ್ದ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿ, ಟ್ರಂಪ್‌ ಮತ್ತು ಮೋದಿ ಅವರು ಬುಧವಾರ ಫ್ರಾನ್‌್ಸನಲ್ಲಿ ನಡೆದ 7 ಸಭೆಯ ಸಂದರ್ಭದಲ್ಲಿ ಭೇಟಿಯಾಗಿದ್ದರು.

ಭಾರತದಲ್ಲಿ ಹಿಂದೆ ಆಗಾಗ ನಾಯಕತ್ವ ಬದಲಾವಣೆ ಆಗುತ್ತಿದ್ದುದನ್ನು ತಾನು ಗಮನಿಸಿದ್ದೇನೆ ಎಂದು ಟ್ರಂಪ್‌ ಹೇಳಿದರು. ಯಾರೋ ಒಬ್ಬರು ಆರು ತಿಂಗಳು, ಮತ್ತೊಬ್ಬರು ಒಂದು ವರ್ಷ ಅಧಿಕಾರದಲ್ಲಿರುತ್ತಿದ್ದರು. ಆದರೆ ನಂತರ ಮೋದಿ ಪ್ರಧಾನಿಯಾದರು. ಅವರು 12 ವರ್ಷಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿದ್ದು, ಅತ್ಯಂತ ಸ್ಥಿರ ನಾಯಕತ್ವ ನೀಡಿದ್ದಾರೆ. ಅವರಲ್ಲಿ ಅಪಾರ ಶಾಂತ ಸ್ವಭಾವ ಕಾಣುತ್ತದೆ. ಆದರೆ ವಾಸ್ತವವಾಗಿ ಅವರು ತುಂಬಾ ಕಠಿಣ ವ್ಯಕ್ತಿ ಎಂದು ಟ್ರಂಪ್‌ ಹೇಳಿದರು. ಇದೇ ವೇಳೆ, ಟ್ರಂಪ್‌ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಹಾಗೂ ಪ್ರಧಾನಿ ಅವರನ್ನೂ ತಾನು ಮೆಚ್ಚುವ ನಾಯಕರ ಪಟ್ಟಿಯಲ್ಲಿ ಉಲ್ಲೇಖಿಸಿದರು.

RELATED ARTICLES
spot_img

Latest News