Homeಅಂತಾರಾಷ್ಟ್ರೀಯಶ್ವೇತಭವನದಲ್ಲಿ ದೀಪಾವಳಿ ಸಂಭ್ರಮ : ದೀಪ ಬೆಳಗಿಸಲಿದ್ದಾರೆ ಅಧ್ಯಕ್ಷ ಟ್ರಂಪ್‌

ಶ್ವೇತಭವನದಲ್ಲಿ ದೀಪಾವಳಿ ಸಂಭ್ರಮ : ದೀಪ ಬೆಳಗಿಸಲಿದ್ದಾರೆ ಅಧ್ಯಕ್ಷ ಟ್ರಂಪ್‌

ವಾಷಿಂಗ್ಟನ್‌, ನ. 6- ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇಂದು ಶ್ವೇತಭವನದಲ್ಲಿ ನಡೆಯಲಿರುವ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ವೇತಭವನದ ಓವಲ್‌ ಕಚೇರಿಯಲ್ಲಿ ದೀಪಾವಳಿ ಸಂಭ್ರಮಾಚರಣೆ ನಡೆಯಲಿದ್ದು, ಅಮೆರಿಕದ ಅಧ್ಯಕ್ಷ ಜಾರ್ಜ್‌ ಡಬ್ಲ್ಯು. ಬುಷ್‌ ಆರಂಭಿಸಿದ್ದ ಸಂಪ್ರದಾಯವನ್ನು ಮುಂದುವರಿಸಲಾಗುತ್ತಿದೆ.

ಹಿಂದೆ ದೀಪಾವಳಿ ಕಾರ್ಯಕ್ರಮಗಳನ್ನು ಮುಖ್ಯವಾಗಿ ಐಸೆನ್‌ಹೋವರ್‌ ಕಾರ್ಯನಿರ್ವಾಹಕ ಕಚೇರಿ ಕಟ್ಟಡದಲ್ಲಿ ಆಯೋಜಿಸಲಾಗುತ್ತಿತ್ತು. ಈ ಕಾರ್ಯಕ್ರಮಗಳಲ್ಲಿ ಭಾರತೀಯ ಮೂಲದ ಅಮೆರಿಕನ್ನರು ಹಾಗೂ ಭಾರತೀಯ ರಾಜತಾಂತ್ರಿಕರು ಭಾಗವಹಿಸುತ್ತಿದ್ದರು.

2009ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು ಶ್ವೇತಭವನದಲ್ಲಿ ಮೊದಲ ಬಾರಿಗೆ ದೀಪ ಬೆಳಗಿಸುವ ಮೂಲಕ ದೀಪಾವಳಿ ಆಚರಣೆಯಲ್ಲಿ ಭಾಗವಹಿಸಿದ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಕಾರ್ಯಕ್ರಮವು ಶ್ವೇತಭವನದ ಈಸ್ಟ್‌ ರೂಮ್‌ನಲ್ಲಿ ನಡೆದಿತ್ತು.

ಅಂದಿನಿಂದ ಶ್ವೇತಭವನದ ವಿವಿಧ ಸ್ಥಳಗಳಲ್ಲಿ ದೀಪ ಬೆಳಗಿಸುವ ಸಂಪ್ರದಾಯ ಮುಂದುವರಿದಿದೆ. ಓವಲ್‌ ಕಚೇರಿ ಹಾಗೂ ರೂಸ್‌ವೆಲ್ಟ್‌ ಕೊಠಡಿಯಲ್ಲಿಯೂ ದೀಪಾವಳಿ ಆಚರಣೆಗಳು ನಡೆದಿವೆ. ಕಳೆದ ವರ್ಷ ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್‌ ಕ್ವಾತ್ರಾ ಅವರು ಓವಲ್‌ ಕಚೇರಿಯಲ್ಲಿ ಟ್ರಂಪ್‌ ಅವರೊಂದಿಗೆ ದೀಪ ಬೆಳಗಿಸಿ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

RELATED ARTICLES

Latest News