Homeಅಂತಾರಾಷ್ಟ್ರೀಯಮಿಚಿಗನ್ ಹೌಸ್ ಸ್ಪೀಕರ್ ಆದ ಮೊದಲ ಭಾರತೀಯ-ಅಮೆರಿಕನ್ ರಂಜೀವ್ ಪುರಿ

ಮಿಚಿಗನ್ ಹೌಸ್ ಸ್ಪೀಕರ್ ಆದ ಮೊದಲ ಭಾರತೀಯ-ಅಮೆರಿಕನ್ ರಂಜೀವ್ ಪುರಿ

ವಾಷಿಂಗ್ಟನ್, ನ.6 (ಪಿಟಿಐ)- ಡೆಮಾಕ್ರಾಟ್ ರಂಜೀವ್ ಪುರಿ ಅವರು ಮಿಚಿಗನ್ ಹೌಸ್‌ನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಈ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ-ಅಮೆರಿಕನ್ ಎಂಬ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ. ಇಂದು, ನನ್ನ ಸಹೋದ್ಯೋಗಿಗಳಿಂದ ಮಿಚಿಗನ್ ಹೌಸ್‌ನ ಸ್ಪೀಕರ್ ಆಗಿ ಆಯ್ಕೆಯಾಗಲು ನನಗೆ ಸಂತೋಷವಾಗಿದೆ ಎಂದು ಪುರಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

42 ವರ್ಷದ ಪುರಿ ಮಿಚಿಗನ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಚುನಾವಣೆಗೆ ಮುನ್ನ ನೀಡಿದ ಭರವಸೆಗಳನ್ನು ಈಡೇರಿಸಲು ಸೆನೆಟ್ ಬಹುಮತದ ನಾಯಕಿ-ಚುನಾಯಿತ ಡ್ಯಾರಿನ್ ಕ್ಯಾಮಿಲ್ಲೆರಿ ಮತ್ತು ಗವರ್ನರ್ ಚುನಾಯಿತ ಜೋಸೆಲಿನ್ ಬೆನ್ಸನ್ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಪುರಿ ಹೇಳಿದರು.

ನನ್ನ ಸಹೋದ್ಯೋಗಿಗಳ ವಿಶ್ವಾಸಕ್ಕೆ ಧನ್ಯವಾದಗಳು. ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಅವರು ಹೇಳಿದರು. 2020ರಲ್ಲಿ ಮಿಚಿಗನ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಆಯ್ಕೆಯಾದ ಮೊದಲ ಸಿಖ್ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪುರಿ ಪಾತ್ರರಾದರು.

ಪಂಜಾಬಿ ವಲಸಿಗರಿಗೆ ಜನಿಸಿದ ಪುರಿ, 2025ರಲ್ಲಿ ರಿಪಬ್ಲಿಕನ್ ನಿಯಂತ್ರಿತ 110 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಡೆಮಾಕ್ರಟಿಕ್ ಪಕ್ಷದ ನಾಯಕರಾಗಿ ನೇಮಕಗೊಂಡರು.

ನನ್ನ ಪೋಷಕರು ಈ ದೇಶಕ್ಕೆ ವಲಸೆ ಬಂದಾಗ, ಅವರ ಮಗ ಒಂದು ದಿನ ಇತಿಹಾಸ ನಿರ್ಮಿಸುತ್ತಾನೆ, ಅಡೆತಡೆಗಳನ್ನು ಮುರಿದು ಮಿಚಿಗನ್ ಹೌಸ್ ಅನ್ನು ಮುನ್ನಡೆಸುತ್ತಾನೆ ಎಂದು ಅವರು ಊಹಿಸಿರಲಿಲ್ಲ. ಅದು ಅಮೆರಿಕದ ಭರವಸೆ ಎಂದು ಪುರಿ ಹೇಳಿದರು.

ಪುರಿ 2008 ಮತ್ತು 2012ರಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಚುನಾವಣಾ ಪ್ರಚಾರಗಳಲ್ಲಿ ಕೆಲಸ ಮಾಡಿದ್ದಾರೆ. ನಂತರ ಅವರು ಚಿಕಾಗೋ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಎಂಬಿಎ ಪದವಿ ಗಳಿಸಿದರು ಮತ್ತು ಇಲ್ಲಿಗೆ ಮರಳಿದರು.

RELATED ARTICLES

Latest News