Homeರಾಜ್ಯಸಿಎಂ ಭೇಟಿ ಮಾಡಿದ ಗುತ್ತಿಗೆದಾರರು, 37 ಸಾವಿರ ಕೋಟಿ ಬಿಲ್‌ ಬಿಡುಗಡೆ ಮನವಿ

ಸಿಎಂ ಭೇಟಿ ಮಾಡಿದ ಗುತ್ತಿಗೆದಾರರು, 37 ಸಾವಿರ ಕೋಟಿ ಬಿಲ್‌ ಬಿಡುಗಡೆ ಮನವಿ

Contractors meet CM, request release of Rs 37,000 crore bill

ಬೆಂಗಳೂರು,ಜೂ.30-ಬಾಕಿ ಇರುವ 37 ಸಾವಿರ ಕೋಟಿ ರೂ.ಗಳ ಬಿಲ್ಲನ್ನು ತಕ್ಷಣ ಬಿಡುಗಡೆ ಮಾಡುವಂತೆ ರಾಜ್ಯ ಗುತ್ತಿಗೆದಾರರ ಸಂಘ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಮನವಿ ಮಾಡಿಕೊಂಡಿದೆ. ಇಂದು ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿದ ಗುತ್ತಿಗೆದಾರರ ನಿಯೋಗ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಕಾಮಗಾರಿಗಳ ಬಿಲ್‌ಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಹಾಗೂ ಗುತ್ತಿಗೆದಾರರು ಎದುರಿಸುತ್ತಿರುವ ವಿವಿಧ ಆಡಳಿತಾತಕ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

ಕಳೆದ ಮಾರ್ಚ್‌ 6 ರಂದು ಫ್ರೆಡಂ ಪಾರ್ಕ್‌ನಲ್ಲಿ ನಡೆದ ರಾಜ್ಯಮಟ್ಟದ ಬೃಹತ್‌ ಪ್ರತಿಭಟನೆಯ ವೇಳೆ ಸರ್ಕಾರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿತ್ತು. ಆದರೆ, ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದ ಕಾರಣ ಮತ್ತೊಮೆ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.

ಸಂಘದ ಪ್ರಕಾರ, 2021-22ರಿಂದ 2023-24ರವರೆಗೆ ವಿವಿಧ ಇಲಾಖೆಗಳಲ್ಲಿ ಸುಮಾರು 37,370.76 ಕೋಟಿ ಮೊತ್ತದ ಕಾಮಗಾರಿ ಬಿಲ್‌ಗಳು ಬಾಕಿ ಉಳಿದಿವೆ. ಲೋಕೋಪಯೋಗಿ, ಜಲಸಂಪನೂಲ, ಸಣ್ಣ ನೀರಾವರಿ, ನಗರಾಭಿವೃದ್ಧಿ, ವಸತಿ, ಕಾರ್ಮಿಕ ಹಾಗೂ ಗ್ರೀಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸೇರಿದಂತೆ ಹಲವು ಇಲಾಖೆಗಳ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಾಯಿತು.

ಇದೇ ವೇಳೆ 2017-18ರಿಂದ 2019-20ರ ಅವಧಿಯ ಕಾಮಗಾರಿಗಳಿಗೆ ಸಂಬಂಧಿಸಿದ ಜಿಎಸ್‌‍ಟಿ ವ್ಯತ್ಯಾಸದ ಶೇ.8ರ ಮೊತ್ತವನ್ನು ಏಳು ವರ್ಷಗಳಿಂದ ಪಾವತಿಸದಿರುವುದು, ಇ-ಸಂಗ್ರಹಣಾ ವೇದಿಕೆಯ ಒಪ್ಪಂದ ನಿರ್ವಹಣಾ ಮಾಡ್ಯೂಲ್‌ ಕಡ್ಡಾಯಗೊಳಿಸಿರುವ ಆದೇಶವನ್ನು ರದ್ದುಪಡಿಸುವುದು, ಲೈಸ್ಸೆ್‌ ನವೀಕರಣದ ವೇಳೆ ವರ್ಕ್‌ ಡನ್‌ ಮತ್ತು ಟರ್ನೋವರ್‌ ಮಾನದಂಡವನ್ನು 10 ವರ್ಷಗಳಿಗೆ ವಿಸ್ತರಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘ ಮುಂದಿಟ್ಟಿದೆ.

ಬೆಂಗಳೂರು ಮಹಾನಗರ ಪಾಲಿಕೆ ಜಿಬಿಎ ಆಗಿರುವ ಬಳಿಕ ಗುತ್ತಿಗೆದಾರರಿಗೆ ಹಲವು ಸಮಸ್ಯೆಗಳು ಎದುರಾಗಿದ್ದು, ಭದ್ರತಾ ಠೇವಣಿಯಾಗಿ ಕಡಿತಗೊಳಿಸಿದ ಶೇ.10ರಷ್ಟು ಹಣ ಹಾಗೂ ಕೆಲವು ಕಾಮಗಾರಿಗಳ ಶೇ.25ರಷ್ಟು ಬಾಕಿ ಮೊತ್ತ ಇನ್ನೂ ಪಾವತಿಯಾಗಿಲ್ಲ ಎಂದು ಸಂಘ ಆರೋಪಿಸಿದೆ. ಅಲ್ಲದೆ, ಕಾಮಗಾರಿಗಳನ್ನು ಪ್ಯಾಕೇಜ್‌ ಪದ್ಧತಿಯಲ್ಲಿ ನೀಡುತ್ತಿರುವುದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ತುರ್ತಾಗಿ ಅಧಿಕೃತ ಸಭೆ ನಡೆಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್‌. ಮಂಜುನಾಥ್‌ ಹಾಗೂ ಬೆಂಗಳೂರು ನಗರ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಂದಕುಮಾರ್‌ ಮನವಿ ಮಾಡಿದ್ದಾರೆ.

RELATED ARTICLES

Latest News