Homeರಾಜ್ಯದಂಡಕ್ಕೆ ಹೆದರಿ ನಿವೇಶನ ಕ್ಲೀನ್‌ ಮಾಡಿಸಲು ಮುಗಿಬಿದ್ದ ಜನ, ಜೆಸಿಬಿಗಳಿಗೆ ಫುಲ್ ಡಿಮ್ಯಾಂಡ್

ದಂಡಕ್ಕೆ ಹೆದರಿ ನಿವೇಶನ ಕ್ಲೀನ್‌ ಮಾಡಿಸಲು ಮುಗಿಬಿದ್ದ ಜನ, ಜೆಸಿಬಿಗಳಿಗೆ ಫುಲ್ ಡಿಮ್ಯಾಂಡ್

People who are afraid of fines are trying to clean the site

ಬೆಂಗಳೂರು, ಆ.17- ನಗರದಲ್ಲಿ ಜೆಸಿಬಿಗಳಿಗೆ ಇನ್ನಿಲ್ಲದ ಬೇಡಿಕೆ ಶುರುವಾಗಿದೆ. ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಪಂಚ ಪಾಲಿಕೆಗಳ ವ್ಯಾಪ್ತಿಯಲ್ಲಿ ಖಾಲಿ ಇರುವ ನಿವೇಶನಗಳನ್ನು ಆಯಾ ಸೈಟ್‌ಗಳ ಮಾಲೀಕರೇ ಕ್ಲೀನ್‌ ಮಾಡಿಸಬೇಕು. ಇಲ್ಲದಿದ್ದರೆ ಭಾರೀ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಜೆಸಿಬಿಗಳಿಗೆ ಇನ್ನಿಲ್ಲದ ಬೇಡಿಕೆ ಶುರುವಾಗಿದೆ.

ಕಸ ತುಂಬಿರುವ, ಗಿಡ ಗಂಟಿ ಬೆಳೆದುಕೊಂಡಿರುವ ನಿವೇಶನಗಳನ್ನು ಮಾಲೀಕರು ಗಳೇ ಕ್ಲೀನ್‌ ಮಾಡಬೇಕು. ಇಲ್ಲದಿದ್ದರೆ ನಾವೇ ಶುಚಿಗೊಳಿಸಿ ಅಡಿ ಲೆಕ್ಕದಲ್ಲಿ ದಂಡ ವಸೂಲಿ ಮಾಡಲಾಗುವುದು ಎಂದು ಜಿಬಿಎ ಅಧಿಕಾರಿಗಳು ಎಚ್ಚರಿಕೆ ನೀಡಿರುವುದರಿಂದ ಜನ ಎದ್ವೋ ಬಿದ್ವೋ ಎಂದು ತಮ ನಿವೇಶನಗಳನ್ನು ಶುಚಿಗೊಳಿಸಲು ಮುಂದಾಗಿದ್ದಾರೆ.

ಖಾಲಿ ನಿವೇಶನಗಳನ್ನು ಶುಚಿಗೊಳಿಸಲು ಆ.22ಕ್ಕೆ ಕೊನೆ ದಿನ ಆಗಿರುವುದರಿಂದ ಜನ ತರಾತುರಿಯಲ್ಲಿ ಜೆಸಿಬಿ ಗಳನ್ನು ಕರೆಸಿಕೊಂಡು ತಮ ನಿವೇಶನಗಳನ್ನು ಕ್ಲೀನ್‌ ಮಾಡಿಸಿಕೊಳ್ಳತೊಡಗಿದ್ದಾರೆ.ಜನರ ಈ ಆತುರವನ್ನೇ ಬಂಡವಾಳ ಮಾಡಿಕೊಂಡಿರುವ ಜೆಸಿಬಿ ಯಂತ್ರಗಳ ಮಾಲೀಕರು ಜೆಸಿಬಿ ಬಾಡಿಗೆಯನ್ನು ಮನಸ್ಸೋ ಇಚ್ಚೆ ಏರಿಸಿದ್ದಾರೆ.

ಗಂಟೆಗೆ ಒಂದು ಸಾವಿರ ರೂ. ಬಾಡಿಗೆ ನೀಡಿದರೆ ಕೆಲಸಕ್ಕೆ ಬರುತ್ತಿದ್ದ ಜೆಸಿಬಿ ಮಾಲೀಕರು ಇದೀಗ ಒಂದು ನಿವೇಶನ ಕ್ಲೀನ್‌ ಮಾಡಲು ಎಂಟರಿಂದ ಹತ್ತು ಸಾವಿರ ಬಾಡಿಗೆಗೆ ಬೇಡಿಕೆ ಇಡುತ್ತಿದ್ದಾರೆ.

ಸಣ್ಣ ನಿವೇಶನಗಳ ಕ್ಲೀನ್‌ಗೆ ಎಂಟು ಸಾವಿರ, ದೊಡ್ಡ ನಿವೇಶನಗಳನ್ನು ಶುಚಿ ಗೊಳಿಸಲು 9ರಿಂದ 10 ಸಾವಿರ ಬಾಡಿಗೆ ಪಡೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅದರಲ್ಲೂ ಬಿಡಿಎ ವತಿಯಿಂದ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಬಡವಾಣೆ ಸುತ್ತಮುತ್ತ ಸಾವಿರಾರು ನಿವೇಶನಗಳು ಖಾಲಿ ಬಿದ್ದಿರುವುದರಿಂದ ಅಲ್ಲಿನ ನಿವೇಶನಗಳನ್ನು ಕ್ಲೀನ್‌ ಮಾಡಿಸಲು ಜನ ಮುಗಿಬಿದ್ದಿದ್ದಾರೆ. ಮಾತ್ರವಲ್ಲ ಜೆಸಿಬಿ ಮಾಲೀಕರು ಕೇಳುವ ಬಾಡಿಗೆ ನೀಡಿ ತಮ ನಿವೇಶನಗಳನ್ನು ಕ್ಲೀನ್‌ ಮಾಡಿಸಿಕೊಳ್ಳುತ್ತಿದ್ದಾರೆ.

RELATED ARTICLES
spot_img

Latest News