Homeಇದೀಗ ಬಂದ ಸುದ್ದಿಜು.3 ರಂದು ಮಳೆಗಾಗಿ ಋಷ್ಯಶೃಂಗದಲ್ಲಿ ವಿಶೇಷ ಪೂಜೆ

ಜು.3 ರಂದು ಮಳೆಗಾಗಿ ಋಷ್ಯಶೃಂಗದಲ್ಲಿ ವಿಶೇಷ ಪೂಜೆ

Special puja at Rishyashringa for rain on July 3rd

ಬೆಂಗಳೂರು, ಜೂ.30- ರಾಜ್ಯದಲ್ಲಿ ಉತ್ತಮ ಮಳೆ ಮತ್ತು ಬೆಳೆ ಸುಭೀಕ್ಷೆಗಾಗಿ ಶೃಂಗೇರಿಯ ಕಿಗ್ಗದ ಶ್ರೀ ಋಷ್ಯಶೃಂಗಾ ದೇವಸ್ಥಾನದಲ್ಲಿ ಜು.3 ರಂದು ವಿಶೇಷ ಪೂಜೆ ಹಮಿಕೊಳ್ಳಲಾಗಿದೆ.ಅನಾದಿಕಾಲದಿಂದಲೂ ನಡೆದುಬಂದಿರುವ ಸಂಪ್ರದಾಯದಂತೆ ಜು.3 ರ ಶುಕ್ರವಾರ ಬೆಳಿಗ್ಗೆ ಮಳೆ ದೇವರು ಎಂದು ಪ್ರಸಿದ್ಧಿಯಾಗಿರುವ ಕಿಗ್ಗದ ಶ್ರೀ ಋಷ್ಯಶೃಂಗಾ ದೇವರ ಸನ್ನಿಧಿಯಲ್ಲಿ ನಾಡಿಗೆ ಉತ್ತಮ ಮಳೆ-ಬೆಳೆ ಸುಭೀಕ್ಷೆಗಾಗಿ ವಿಶೇಷ ಪೂಜೆ ನಡೆಯಲಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ಆದೇಶದಂತೆ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್‌ ಅವರ ಸಲಹೆ ಮೇರೆಗೆ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಮಲೆನಾಡು, ಕರಾವಳಿ, ಪ.ಘಟ್ಟ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗ ಸೇರಿದಂತೆ ನಾಡಿನೆಲ್ಲೆಡೆ ಬಹುತೇಕ ಈ ಬಾರಿ ಮುಂಗಾರು ಮಳೆಯ ಕೊರತೆಯಾಗಿದೆ.

ಹಲವೆಡೆ ಬಿತ್ತನೆ ಕಾರ್ಯಗಳು ನಡೆದಿಲ್ಲ. ಬರದ ಛಾಯೆ ಆವರಿಸತೊಡಗಿದೆ. ಹೀಗಾಗಿ ಉತ್ತಮ ಮಳೆ-ಬೆಳೆ ಸುಭೀಕ್ಷೆಗಾಗಿ ಪ್ರತೀ ವರ್ಷ ಋಷ್ಯಶೃಂಗಾ ದೇಗುಲದಲ್ಲಿ ವಿಶೇಷ ಪೂಜೆ ನಡೆಯುತ್ತದೆ.ಜು.3 ರಂದು ನಡೆಯಲಿರುವ ವಿಶೇಷ ಪೂಜೆಯಲ್ಲಿ ನಾಡಿನ ಸದ್ಭಕ್ತರು, ಆಸ್ತಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಶಾಸಕ ಟಿ.ಡಿ.ರಾಜೇಗೌಡ ಮನವಿ ಮಾಡಿದ್ದಾರೆ.

RELATED ARTICLES

Latest News