Homeಬೆಂಗಳೂರುಬೆಂಗಳೂರಲ್ಲಿ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ ಆರಂಭ

ಬೆಂಗಳೂರಲ್ಲಿ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ ಆರಂಭ

Footpath encroachment clearance operation begins in Bengaluru

ಬೆಂಗಳೂರು, ಜು.1- ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ನೀಡಿದ್ದ ಗಡುವು ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಇಂದಿನಿಂದ ನಗರಾದ್ಯಂತ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದೆ.

ಜಿಬಿಎ ನಡೆಸುತ್ತಿರುವ ಕಾರ್ಯಾಚರಣೆಗೆ ಕೆಲವೆಡೆ ಬೀದಿಬದಿ ವ್ಯಾಪಾರಿಗಳು ಅಡ್ಡಿಪಡಿಸಿದ್ದಾರೆ. ನೀವು ಏಕಾಏಕಿ ನಮ ಅಂಗಡಿ-ಮುಂಗಟ್ಟುಗಳನ್ನು ಖಾಲಿ ಮಾಡಿಸಿದರೆ ನಾವು ನಮ ಮಕ್ಕಳ ಶಾಲಾಶುಲ್ಕ ಪಾವತಿಸುವುದು ಹೇಗೆ ಎಂದು ಗಲಾಟೆ ಮಾಡಿರುವ ಘಟನೆಗಳು ನಡೆದಿವೆ.
ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆಯಂತೆ ಅಧಿಕಾರಿಗಳು ಪೊಲೀಸ್‌‍ ಭದ್ರತೆಯೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಫುಟ್‌ಪಾತ್‌ಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಿಕೊಳ್ಳಲು ನಿನ್ನೆವರೆಗೆ ಅವಕಾಶ ನೀಡಲಾಗಿತ್ತು. ಗಡುವಿನ ಬಳಿಕವೂ ಒತ್ತುವರಿ ಮುಂದುವರಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಜಿಬಿಎ ಎಚ್ಚರಿಸಿತ್ತು.

ಮೊದಲ ಹಂತದಲ್ಲಿ ನಗರದ ಸುಮಾರು 2,000 ಕಿಲೋಮೀಟರ್‌ ರಸ್ತೆಗಳನ್ನು ಗುರುತಿಸಿ, ಫುಟ್‌ಪಾತ್‌ಗಳ ಮೇಲಿರುವ ಎಲ್ಲ ಅಡೆತಡೆಗಳನ್ನು ತೆರವುಗೊಳಿಸಲಾಗುತ್ತಿದೆ. ಅಧಿಕಾರಿಗಳೇ ಜೆಸಿಬಿ ಮೂಲಕ ತೆರವುಗೊಳಿಸಿದರೆ, ಅದರ ವೆಚ್ಚವನ್ನು ಸಂಬಂಧಿತ ಅತಿಕ್ರಮಣದಾರರಿಂದಲೇ ವಸೂಲಿ ಮಾಡಲಾಗುತ್ತಿದೆ.ನಗರದ ಎಂಟು ಜಂಟಿ ಆಯುಕ್ತರಿಗೆ ಕಾರ್ಯಾಚರಣೆಯ ಜವಾಬ್ದಾರಿ ನೀಡಲಾಗಿದ್ದು, ಸೂಕ್ತ ಪೊಲೀಸ್‌‍ ಭದ್ರತೆಯೊಂದಿಗೆ ತಂಡಗಳು ಸ್ಥಳಗಳಿಗೆ ತೆರಳಿ ಕ್ರಮ ಕೈಗೊಳ್ಳಲಿವೆ.

ಫುಟ್‌ಪಾತ್‌ ಒತ್ತುವರಿಯಿಂದ ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಇದರಿಂದ ಅಪಘಾತಗಳ ಅಪಾಯ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಜಿಬಿಎ ವ್ಯಾಪಕ ತೆರವು ಕಾರ್ಯಾಚರಣೆಗೆ ಮುಂದಾಗಿದೆ.

ಬೀದಿಬದಿ ವ್ಯಾಪಾರಿಗಳಿಗೆ ಬದಲಿ ಸ್ಥಳ ಕಲ್ಪಿಸಿ
ಬಡಕುಟುಂಬಗಳಿಗೆ ವ್ಯಾಪಾರವೇ ಜೀವನಾಧಾರವಾಗಿದ್ದು, ಬೀದಿಬದಿ ವ್ಯಾಪಾರ ತೆರವು ಮಾಡಿದರೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಬದಲಿ ಸ್ಥಳ ನಿಗದಿಪಡಿಸಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವಂತೆ ನವಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಕೇಶವಮೂರ್ತಿ ಮನವಿ ಮಾಡಿದ್ದಾರೆ.

ಸಾವಿರಾರು ಕುಟುಂಬಗಳು ಬೀದಿಬದಿ ವ್ಯಾಪಾರ ಮಾಡಿಕೊಂಡು ತಮ ಹೊಟ್ಟೆ ಬಟ್ಟೆ ಕಟ್ಟಿಕೊಂಡು ಮಕ್ಕಳ ಭವಿಷ್ಯ ರೂಪಿಸಿಕೊಳ್ಳುತ್ತಿರುವಾಗ ಇದ್ದಕ್ಕಿದ್ದಂತೆ ತೆರವು ಮಾಡಿದರೆ ಅವರ ಪಾಡೇನು?, ಎಲ್ಲಿಗೆ ಹೋಗಬೇಕು?, ಇದರಿಂದ ತೀವ್ರ ತೊಂದರೆಯಾಗುತ್ತದೆ.

ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಬಡವರು ತಮ ದಿನ ನಿತ್ಯದ ಕೆಲಸ ಬೀದಿಬದಿಯಲ್ಲಿ ತರಕಾರಿಗಳನ್ನು ಮಾಡಿಕೊಂಡು ಬೆಳಗಿನ ಟಿಫನ್‌ ಬಂಡಿಗಳನ್ನು ಇಟ್ಟುಕೊಂಡು ಹೇಗೋ ತಮ ಜೀವನ ಸಾಗಿಸುತ್ತಿದ್ದಾರೆ. ಈಗ ಬೀದಿಬದಿ ವ್ಯಾಪಾರ ತೆರವು ಮಾಡಿದರೆ ಭಾರೀ ಸಮಸ್ಯೆಯಾಗಲಿದೆ ಎಂದರು.

ನಮಿಂದ ಇದುವರೆಗೆ ಯಾವ ತೊಂದರೆಗಳು ಆಗಿಲ್ಲ, ಆಗುವುದು ಇಲ್ಲ ಹಾಗೆ ನಾವು ನಮ ಬೀದಿಬದಿ ವ್ಯಾಪಾರಿಗಳನ್ನು ನ್ಯಾಯ ಸಮತವಾಗಿ ನಡೆಸಿಕೊಂಡು ಬಂದಿದ್ದೇವೆ. ಅದರಂತೆ ವ್ಯಾಪಾರ ಮಾಡಿಕೊಂಡು ಜೀವನ ನಡೆಸಲು ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವಂತೆ ಕೇಶವಮೂರ್ತಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

RELATED ARTICLES

Latest News