Homeಕ್ರೀಡಾ ಸುದ್ದಿಫಿಫಾ ವಿಶ್ವಕಪ್‌ : ಬ್ರೆಜಿಲ್‌ಗೆ ಆಘಾತ, ಕ್ವಾರ್ಟರ್‌ಫೈನಲ್‌ಗೆ ನಾರ್ವೆ ಲಗ್ಗೆ

ಫಿಫಾ ವಿಶ್ವಕಪ್‌ : ಬ್ರೆಜಿಲ್‌ಗೆ ಆಘಾತ, ಕ್ವಾರ್ಟರ್‌ಫೈನಲ್‌ಗೆ ನಾರ್ವೆ ಲಗ್ಗೆ

Norway Defeats Brazil 2-1, Advances to World Cup 2026 Quarterfinals

ಈಸ್ಟ್‌ ರುದರ್‌ಫೋರ್ಡ್‌,ಜು. 6- ರ್ಲಿಂಗ್‌ ಹಾಲೆಂಡ್‌ ಅವರ ಅದ್ಬುತ ಎರಡು ಗೋಲುಗಳ ನೆರವಿನಿಂದ ನಾರ್ವೆ ತಂಡವು ಐದು ಬಾರಿಯ ಚಾಂಪಿಯನ್‌ ಬ್ರೆಜಿಲ್‌ ವಿರುದ್ಧ 2-1 ಗೋಲುಗಳಿಂದ ಜಯಿಸಿ, ಫಿಫಾವಿಶ್ವಕಪ್‌ ಫುಟ್‌ಬಾಲ್‌‍ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ.

ಪಂದ್ಯದ ಬಹುಪಾಲು ಸಮಯ ಮಂಕಾಗಿದ್ದ ಹಾಲೆಂಡ್‌, ನಿರ್ಣಾಯಕ ಕ್ಷಣದಲ್ಲಿ ಮಿಂಚಿದರು. 80ನೇ ನಿಮಿಷದಲ್ಲಿ ಆಂಡ್ರಿಯಾಸ್‌‍ ಶೆಲ್ಡೆರುಪ್‌ ನೀಡಿದ ಅದ್ಭುತ ಪಾಸ್‌‍ಗೆ ಹೆಡರ್‌ ಮೂಲಕ ಗೋಲು ಗಳಿಸಿ ನಾರ್ವೆಗೆ ಮುನ್ನಡೆ ತಂದುಕೊಟ್ಟರು. ಬಳಿಕ ನಿಯಮಿತ ಅವಧಿ ಮುಕ್ತಾಯಕ್ಕೂ ಮುನ್ನ ಮತ್ತೊಂದು ಗೋಲು ದಾಖಲಿಸಿ ತಂಡದ ಗೆಲುವು ಖಚಿತಪಡಿಸಿದರು.

ವಿರಾಮದ ವೇಳೆ ಬದಲಿ ಆಟಗಾರನಾಗಿ ಕಣಕ್ಕಿಳಿದ ಶೆಲ್ಡೆರುಪ್‌‍, ಹಾಲೆಂಡ್‌ ಅವರ ಎರಡೂ ಗೋಲುಗಳಿಗೆ ಅಸಿಸ್ಟ್‌ ನೀಡಿದರು.ಈ ಟೂರ್ನಿಯಲ್ಲಿ ಹಾಲೆಂಡ್‌ ಅವರ ಗೋಲುಗಳ ಸಂಖ್ಯೆ ಏಳಕ್ಕೇರಿದ್ದು, ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ ಹಾಗೂ ಫ್ರಾನ್ಸ್ ನ ಕೈಲಿಯನ್‌ ಎಂಬಾಪೆ ಅವರೊಂದಿಗೆ ಅಗ್ರ ಗೋಲು ಗಳಿಕೆ ಪಟ್ಟಿಯಲ್ಲಿ ಜಂಟಿ ಸ್ಥಾನ ಪಡೆದಿದ್ದಾರೆ.

ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಸತತ 14 ಪಂದ್ಯಗಳಲ್ಲಿ ಗೋಲು ದಾಖಲಿಸಿದ ಸಾಧನೆಯನ್ನು ಹಾಲೆಂಡ್‌ ಮುಂದುವರಿಸಿದ್ದಾರೆ. ಈ ಅವಧಿಯಲ್ಲಿ ಅವರು 27 ಗೋಲುಗಳನ್ನುಗಳಿಸಿದ್ದು, ನಾರ್ವೆ ಪರ 54 ಪಂದ್ಯಗಳಲ್ಲಿ ಒಟ್ಟು 62 ಗೋಲುಗಳನ್ನು ದಾಖಲಿಸಿದ್ದಾರೆ.

ನಾರ್ವೆಯ ಗೋಲ್‌ಕೀರ್ಪ ಓರ್ಜನ್‌ ನೈಲ್ಯಾಂಡ್‌ ಕೂಡ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.ಪಂದ್ಯ ಆರಂಭದ 14ನೇ ನಿಮಿಷದಲ್ಲಿ ಬ್ರೆಜಿಲ್‌ಗೆ ಪೆನಾಲ್ಟಿ ಅವಕಾಶ ಸಿಕ್ಕಿತು ಆದರೆ ಬ್ರೂನೊ ಗಿಮರಾಯಿಸ್‌‍ ಗುಳು ಬಾರಿಸಲು ವಿಫಲರಾದರು ಅಂತಿಮ ಹಂತದಲ್ಲಿ ಕೂಡ ಎಂಡ್ರಿಕ್‌ ಅವರ ಅಪಾಯಕಾರಿ ಪ್ರಯತ್ನವನ್ನೂ ನೈಲ್ಯಾಂಡ್‌ ವಿಫಲಗೊಳಿಸಿದರು.

ಹೆಚ್ಚುವರಿ ಸಮಯದಲ್ಲಿ ನೇಮರ್‌ ಪೆನಾಲ್ಟಿ ಮೂಲಕ ಬ್ರೆಜಿಲ್‌ಗೆ ಏಕೈಕ ಗೋಲು ಗಳಿಸಿದರೂ, ಅದು ಸೋಲಿನ ಅಂತರವನ್ನು ಮಾತ್ರ ಕಡಿಮೆ ಮಾಡಿತು.35 ವರ್ಷದ ನೈಲ್ಯಾಂಡ್‌ ನಾರ್ವೆ ತಂಡದ ಅತ್ಯಂತ ಹಿರಿಯ ಆಟಗಾರರಾಗಿದ್ದು, ಈ ಐತಿಹಾಸಿಕ ಗೆಲುವಿನ ಪ್ರಮುಖ ರೂವಾರಿಯಾಗಿದ್ದರು.

1995ರಲ್ಲಿ ನಾರ್ವೆಯ ಮಹಿಳಾ ತಂಡ ವಿಶ್ವಕಪ್‌ ಗೆದ್ದಿದ್ದರೂ, ಪುರುಷರ ತಂಡವು ಈವರೆಗೆ ಕೇವಲ ನಾಲ್ಕು ಬಾರಿ ಮಾತ್ರ ವಿಶ್ವಕಪ್‌ಗೆ ಅರ್ಹತೆ ಪಡೆದಿತ್ತು. 1998ರ ಬಳಿಕ ಮೊದಲ ಬಾರಿಗೆ ವಿಶ್ವಕಪ್‌ ಆಡುತ್ತಿರುವ ನಾರ್ವೆ, ಈ ಬಾರಿ ಮೊದಲ ಬಾರಿಗೆ ಕ್ವಾರ್ಟರ್‌ಫೈನಲ್‌ಗೆ ತಲುಪಿದೆ.

ಈ ನಡುವೆ ಬ್ರೆಜಿಲ್‌ ಪರ ಬ್ರೂನೊ ಗಿಮರಾಯಿಸ್‌‍ ಪೆನಾಲ್ಟಿ ತಪ್ಪಿಸಿದ ಮೊದಲ ಆಟಗಾರ ಎಂಬ ಅನಪೇಕ್ಷಿತ ದಾಖಲೆಗೆ ಪಾತ್ರರಾದರು.ಐದು ಬಾರಿ ವಿಶ್ವಕಪ್‌ ಗೆದ್ದಿರುವ ಬ್ರೆಜಿಲ್‌, 1990ರ ಬಳಿಕ ಮೊದಲ ಬಾರಿಗೆ ಕ್ವಾರ್ಟರ್‌ಫೈನಲ್‌ಗೂ ಮುನ್ನವೇ ಟೂರ್ನಿಯಿಂದ ಹೊರಬಿದ್ದಿದೆ. ಅಲ್ಲದೆ ವಿಶ್ವಕಪ್‌ನಲ್ಲಿ ಯುರೋಪಿನ ತಂಡಗಳ ವಿರುದ್ಧ ಇದು ಬ್ರೆಜಿಲ್‌ಗೆ ಸತತ ಏಳನೇ ಸೋಲಾಗಿದೆ. 2002ರ ಫೈನಲ್‌ನಲ್ಲಿ ಜರ್ಮನಿಯನ್ನು ಮಣಿಸಿದ ಬಳಿಕ ಯುರೋಪಿನ ತಂಡದ ವಿರುದ್ಧ ವಿಶ್ವಕಪ್‌ನಲ್ಲಿ ಬ್ರೆಜಿಲ್‌ ಗೆಲುವು ಸಾಧಿಸಿಲ್ಲ.

ಗಾಯಗೊಂಡಿದ್ದ ಜೂಲಿಯನ್‌ ರಿಯರ್ಸನ್‌ ತಂಡಕ್ಕೆ ಮರಳಿದ್ದು, ವಿರಾಮದ ವೇಳೆ ಮಾಡಿದ ಬದಲಾವಣೆಗಳು ನಾರ್ವೆಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು.80,663 ಪ್ರೇಕ್ಷಕರ ಸಮುಖದಲ್ಲಿ ನಡೆದ ಪಂದ್ಯವನ್ನು ರಾಪರ್‌ ಜೇ-ಝೆಡ್‌‍, ಹಾಸ್ಯನಟ ಕ್ರಿಸ್‌‍ ರಾಕ್‌‍, ನಟ ವುಡಿ ಹ್ಯಾರೆಲ್ಸನ್‌‍, ನಟಿ ಸೋಫಿಯಾ ವರ್ಗಾರಾ ಹಾಗೂ ಎನ್‌ಬಿಎ ಚಾಂಪಿಯನ್‌ ತಂಡದ ಆಟಗಾರ ಜೇಲೆನ್‌ ಬ್ರನ್ಸನ್‌ ಸೇರಿದಂತೆ ಹಲವು ಗಣ್ಯರು ವೀಕ್ಷಿಸಿದರು.

ಕ್ವಾರ್ಟರ್‌ಫೈನಲ್‌ನಲ್ಲಿ ನಾರ್ವೆ ತಂಡ ಇಂಗ್ಲೆಂಡ್‌ ವಿರುದ್ಧ ಸೆಣಸಲಿದೆ. ಬ್ರೆಜಿಲ್‌ಗೆ ಇದು ಆಘಾತ ನೀಡಿದ್ದು ಕೋಟ್ಯಾಂತರ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.ತಂಡ ಆಘಾತಕಾರಿ ಸೋಲು ಕಂಡ ಬೆನ್ನಲ್ಲೇ ಸ್ಟಾರ್‌ ಆಟಗಾರ ನೇಮರ್‌ ಅಂತಾರಾಷ್ಟ್ರೀಯ ಫುಟ್‌ಬಾಲ್‌‍ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

ಬ್ರೆಜಿಲ್‌ ಪರ ಸಾರ್ವಕಾಲಿಕ ಗರಿಷ್ಠ ಗೋಲುಗಳನ್ನುಗಳಿಸಿದ ದಾಖಲೆಯೊಂದಿಗೆ ನೇಮರ್‌ ವಿದಾಯ ಘೋಷಿಸಿದ್ದಾರೆ. ಪಂದ್ಯದ ಸೋಲಿನ ಬೆನ್ನಲ್ಲೇ ಭಾವುಕರಾದ ನೇಮರ್‌ ತಮ 16 ವರ್ಷಗಳ ಸುದೀರ್ಘ ಅಂತಾರರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದರು.

RELATED ARTICLES
spot_img

Latest News