Homeರಾಜ್ಯಪೊಲೀಸ್‌‍ ವಾಹನದಲ್ಲೇ ಗುಂಡು ಹಾರಿಸಿಕೊಂಡು ಕಾನ್‌ಸ್ಟೇಬಲ್‌ ಆತ್ಮಹತ್ಯೆ

ಪೊಲೀಸ್‌‍ ವಾಹನದಲ್ಲೇ ಗುಂಡು ಹಾರಿಸಿಕೊಂಡು ಕಾನ್‌ಸ್ಟೇಬಲ್‌ ಆತ್ಮಹತ್ಯೆ

Constable commits suicide by shooting himself in police vehicle

ಬೆಂಗಳೂರು,ಜು.8- ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್‌) ಕಾನ್‌ಸ್ಟೇಬಲ್‌ರೊಬ್ಬರು ಪೊಲೀಸ್‌‍ ವಾಹನದಲ್ಲೇ ತಮ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದಲ್ಲಿ ರಾತ್ರಿ ನಡೆದಿದೆ.

ಜೀವರ್ಗಿ ಮೂಲದ ಶಿವಕುಮಾರ್‌ ಮಾವನೂರು (32) ಆತಹತ್ಯೆ ಮಾಡಿಕೊಂಡಿರುವ ಸಿಎಆರ್‌ ಕಾನ್‌ಸ್ಟೇಬಲ್‌.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿವಕುಮಾರ್‌ ಅವರು ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಕಲಬುರಗಿ ನಗರಕ್ಕೆ ವರ್ಗಾವಣೆಯಾಗಿ ಹೋಗಿದ್ದರು.

ನಿನ್ನೆ ಎಂದಿನಂತೆ ಶಿವಕುಮಾರ್‌ ಕರ್ತವ್ಯದಲ್ಲಿದ್ದರು. ರಾತ್ರಿ 9 ಗಂಟೆ ಸುಮಾರಿನಲ್ಲಿ ಕಲಬುರಗಿ ನಗರದ ಬ್ರಹಾಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಜಗತ್‌ ವೃತ್ತದಲ್ಲಿ ಪೊಲೀಸ್‌‍ ವಾಹನ ನಿಂತಿತ್ತು.
ಕರ್ತವ್ಯ ಬದಲಾಣೆ ವೇಳೆ ವಾಹನದಲ್ಲಿದ್ದ ಸಹದ್ಯೋಗಿಗಳು ಇಳಿದು ಹೋಗುತ್ತಿದ್ದರು. ಕೊನೆಯಲ್ಲಿ ಶಿವಕುಮಾರ್‌ ಒಬ್ಬರೇ ಇದ್ದರು. ಆ ಸಂದರ್ಭದಲ್ಲಿ ಶಿವಕುಮಾರ್‌ ತಮ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.

ಗುಂಡು ಹಾರಿದ ಶಬ್ದ ಕೇಳಿ ಸಹದ್ಯೋಗಿಗಳು ಪೊಲೀಸ್‌‍ ವಾಹನದ ಬಳಿ ಓಡಿ ಬಂದು ನೋಡುವಷ್ಟರಲ್ಲಿ ಶಿವಕುಮಾರ್‌ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದರು. ಈ ಘಟನೆಯಿಂದ ಸಹದ್ಯೋಗಿಗಳು ಅಘಾತಕ್ಕೊಳಗಾಗಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಕಲಬುರಗಿ ನಗರ ಪೊಲೀಸ್‌‍ ಆಯುಕ್ತರಾದ ಡಾ.ಶರಣಪ್ಪ, ಉಪ ಪೊಲೀಸ್‌‍ ಆಯುಕ್ತ ಶಾಲೂ ಉದ್ಯೋಗ್‌ ಹಾಗೂ ಹಿರಿಯ ಪೊಲೀಸ್‌‍ ಅಧಿಕಾರಿಗಳು, ಎಫ್‌ಎಸ್‌‍ಎಲ್‌ ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಶಿವಕುಮಾರ್‌ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಲಬುರಗಿಯ ಜಿಮ್ಸೌ ಆಸ್ಪತ್ರೆಗೆ ರವಾನಿಸಿದ್ದಾರೆ.

ಶಿವಕುಮಾರ್‌ ಅವರ ಆತಹತ್ಯೆಗೆ ನಿಖರ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ವೈಯಕ್ತಿಕ ಕಾರಣದಿಂದ ಈ ರೀತಿ ಮಾಡಿಕೊಂಡಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬ್ರಹಾಪುರ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News