Homeರಾಜ್ಯಚಿನ್ನ-ಬೆಳ್ಳಿ ದರದಲ್ಲಿ ಮತ್ತಷ್ಟು ಕುಸಿತ

ಚಿನ್ನ-ಬೆಳ್ಳಿ ದರದಲ್ಲಿ ಮತ್ತಷ್ಟು ಕುಸಿತ

Further decline in gold and silver prices

ಬೆಂಗಳೂರು,ಜು.11- ಚಿನಿವಾರಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿದರಗಳು ಮತ್ತೆ ಕುಸಿತ ಕಂಡಿವೆ. ನಿನ್ನೆ ಚೇತರಿಕೆಯಾಗಿದ್ದ ದರಗಳು ಇಂದು ಇಳಿಮುಖವಾಗಿವೆ.ಕಳೆದ 2-3 ತಿಂಗಳುಗಳಿಂದ ಚಿನ್ನ-ಬೆಳ್ಳಿ ದರಗಳು ಸ್ಥಿರವಾಗಿರದೇ ಪದೇಪದೇ ಏರಿಳಿತವಾಗುತ್ತಿದೆ. ಇದು ವರ್ತಕರಿಗೂ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ ಆಭರಣಪ್ರಿಯರನ್ನು ಗೊಂದಲಕ್ಕೀಡು ಮಾಡಿದೆ.

ಲಭ್ಯವಿರುವ ಮಾರುಕಟ್ಟೆ ಪ್ರಕಾರ, ಜುಲೈ ತಿಂಗಳ ಮೊದಲ ವಾರದಲ್ಲಿ ತುಸು ಏರಿಕೆ ಕಂಡಿದ್ದ ದರಗಳು ನಂತರ ಇಳಿಮುಖದ ಹಾದಿ ಇಳಿದಿದ್ದವು. ಕಳೆದ 2 ದಿನಗಳಿಂದ ಸ್ವಲ್ಪ ಚೇತರಿಕೆ ಕಂಡಿದ್ದ ಚಿನ್ನವು ಇಂದು ಇಳಿಕೆಯಾಗಿದೆ.

24 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 49 ರೂ. ಇಳಿಕೆಯಾಗಿದ್ದು, 14,433 ರೂ.ಗೆ ಇದೆ. 22 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 45 ರೂ. ಇಳಿದಿದ್ದು, 13,230 ರೂ.ನಷ್ಟಿದೆ. 18 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 37 ರೂ. ಇಳಿಕೆಯಾಗಿದ್ದು, 10,825 ರೂ.ನಷ್ಟಿದೆ.ಅದೇ ರೀತಿ ಬೆಳ್ಳಿ ದರವು ಇಳಿಮುಖವಾಗಿದ್ದು, ಇಂದು ಒಂದು ಕೆಜಿಗೆ 5 ಸಾವಿರ ರೂ.ಗಳಷ್ಟು ಕಡಿಮೆಯಾಗಿ 2,35,000 ನಷ್ಟಿದೆ.

ಜುಲೈ 6 ರಂದು 5ಸಾವಿರ ಇಳಿಕೆಯಾಗಿದ್ದ ಬೆಳ್ಳಿ ಜು.9 ರಂದು 10 ಸಾವಿರ ಇಳಿಕೆಯಾಗಿ 2,35,000ಗೆ ತಲುಪಿತ್ತು. ನಿನ್ನೆ 5 ಸಾವಿರ ಏರಿಕೆಯಾಗಿದ್ದ ಬೆಳ್ಳಿದರವು ಇಂದು ಮತ್ತೆ ಇಳಿಕೆಯಾಗಿ ಹಳೆಯ ದರಕ್ಕೆ ತಲುಪಿದೆ.

RELATED ARTICLES
spot_img

Latest News