Homeರಾಜ್ಯಯುವ ಕಾಂಗ್ರೆಸ್‌‍ ಸೈಕಲ್‌ ಜಾಥಾಕ್ಕೆ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್‌ ಚಾಲನೆ

ಯುವ ಕಾಂಗ್ರೆಸ್‌‍ ಸೈಕಲ್‌ ಜಾಥಾಕ್ಕೆ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್‌ ಚಾಲನೆ

ಬೆಂಗಳೂರು, ಜು. 12- ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ, ಯುವ ಕಾಂಗ್ರೆಸ್‌‍ ಹಮಿಕೊಂಡಿದ್ದ ಸೈಕಲ್‌ ಜಾಥಾಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಚಾಲನೆ ನೀಡಿದರು. ಕೆಪಿಸಿಸಿ ಕಚೇರಿಯಿಂದ ಕೆ.ಆರ್‌.ಸರ್ಕಲ್‌ ಮಾರ್ಗವಾಗಿ ಗಾಂಧಿ ಪ್ರತಿಮೆವರೆಗೂ ನಡೆದ ಸೈಕಲ್‌ ಜಾಥಾಕ್ಕೆ ಬಿ.ಕೆ.ಹರಿಪ್ರಸಾದ್‌ ಅವರು ಖುದ್ದು ಸೈಕಲ್‌ ತುಳಿಯುವ ಮೂಲಕ ಚಾಲನೆ ನೀಡಿದರು.

ಪರೀಕ್ಷಾ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕು. ಪರೀಕ್ಷಾ ಅಕ್ರಮಗಳಿಗೆ ಸಂಬಂಧಪಟ್ಟಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳಾಗಬೇಕೆಂದು ಆಗ್ರಹಿಸಲಾಯಿತು.

ಇದೇ ವೇಳೆ ಮಾತನಾಡಿದ ಬಿ.ಕೆ.ಹರಿಪ್ರಸಾದ್‌, ಯುವ ಕಾಂಗ್ರೆಸ್‌‍ ಮತ್ತು ವಿದ್ಯಾರ್ಥಿ ಘಟಕಗಳಿಂದ ಜಾಗೃತಿ ಮೂಡಿಸಿ, ಸೈಕಲ್‌ ಜಾಥಾ ಆಯೋಜಿಸಲಾಗಿದೆ ಎಂದರು.ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆಯುವ ನೀಟ್‌ ಪರೀಕ್ಷೆಯಲ್ಲಿನ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ 21 ವಿದ್ಯಾರ್ಥಿಗಳು ಆತಹತ್ಯೆ ಮಾಡಿಕೊಂಡಿದ್ದಾರೆ. 1.40 ಕೋಟಿ ಜನರ ಭವಿಷ್ಯ ಅಂಧಕಾರದಲ್ಲಿದೆ ಎಂದರು.

ಯುವ ಜನರ ಮತ್ತು ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದು, ಸರ್ಕಾರದ ವೈಫಲ್ಯದಿಂದ ಯಾರ ಆತ ಸ್ಥೈರ್ಯವೂ ಕುಂದಬಾರದು. ಎಲ್ಲರೂ ಜಾಗೃತರಾಗಿ ಮುಂಬರುವ ಪರೀಕ್ಷೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಒಳ್ಳೆ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಧ್ವನಿ ಎಂಬ ಅಭಿಯಾನವನ್ನು ರಾಹುಲ್‌ಗಾಂಧಿ ಆರಂಭಿಸಿದ್ದಾರೆ ಎಂದು ತಿಳಿಸಿದರು. ರಾಜ್ಯದಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಆತಸ್ಥೈರ್ಯ ಮೂಡಿಸಲು ಈ ಜಾಥಾ ನಡೆಸಲಾಗುತ್ತಿದೆ ಎಂದು ಹೇಳಿದರು.

ರಾಷ್ಟ್ರದ ಗಾನ ಕೋಗಿಲೆ ಎಸ್‌‍.ಜಾನಕಿಯವರ ನಿಧನ, ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಜಾನಕಿ ಅವರ ಹಾಡು ಕೇಳದೇ ಇದ್ದವರು ದೇಶದಲ್ಲಿ ಯಾರೂ ಇಲ್ಲ. ಅವರ ನಿಧನದಿಂದ ಕರಾಳ ಛಾಯೆ ಮೂಡಿದೆ ಎಂದು ಹೇಳಿದರು.ಎಸ್‌‍ಐಆರ್‌ ಬಗ್ಗೆ ಹಾಗೂ ಬೇರೆ ಬೇರೆ ವಿಚಾರಗಳನ್ನು ಮಾತನಾಡುತ್ತಿರುವ ಗೋಲ್‌ಮಾಲ್‌ ಜೋಷಿ ಹೇಳಿಕೆಗಳಿಗೆ ನಂತರದ ದಿನಗಳಲ್ಲಿ ಪ್ರತಿಕ್ರಿಯಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

RELATED ARTICLES

Latest News