Homeರಾಜ್ಯಚನ್ನಮ್ಮನವರ ಅಂತಿಮ ದರ್ಶನದಲ್ಲಿ ಪೊಲೀಸರ ದರ್ಪ

ಚನ್ನಮ್ಮನವರ ಅಂತಿಮ ದರ್ಶನದಲ್ಲಿ ಪೊಲೀಸರ ದರ್ಪ

ಬೆಂಗಳೂರು,ಜು.20- ಅತಿ ಗಣ್ಯ ವ್ಯಕ್ತಿಗಳ ಕುಟುಂಬದಲ್ಲಿ ಸಾವು ಸಂಭವಿಸಿದಾಗ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಸಾಮಾನ್ಯ ಜ್ಞಾನ ನಮ್ಮ ಬೆಂಗಳೂರು ನಗರ ಪೊಲೀಸರಿಗಿಲ್ಲ.ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಬಂದ ಕೆಲವು ಗಣ್ಯರು, ಸಾರ್ವಜನಿಕರ ಮೇಲೆ ಪೊಲೀಸರು ತೋರಿಸಿದ ದರ್ಪ, ದೌರ್ಜನ್ಯದಿಂದ ಕೆಲವರು ಸಾಹಸಪಟ್ಟು ಅಂತಿಮ ದರ್ಶನ ಪಡೆದರೆ, ಇನ್ನೂ ಕೆಲವರು ದರ್ಶನಕ್ಕೆ ಅವಕಾಶ ಸಿಗದೇ ಅತೀವ ಬೇಸರದಿಂದ ವಾಪಸ್‌‍ ಹೋಗಿದ್ದಾರೆ. ಪೊಲೀಸರು ಕೈಗೊಂಡ ಕೆಲವು ಕೆಟ್ಟ ನಿರ್ಧಾರಗಳಿಂದ ಅಕ್ಕಪಕ್ಕದ ನಿವಾಸಿಗಳು ಸಹ ಬೇಸರ ಗೊಳ್ಳುವಂತಾಗಿತ್ತು.

ನಡೆದಿದ್ದಾದರೂ ಏನು? :
ಮಾಜಿ ಪ್ರಧಾನಮಂತ್ರಿ, ಜೆಡಿಎಸ್‌‍ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ.ದೇವೇಗೌಡರ ಧರ್ಮಪತ್ನಿ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ತಾಯಿ ಚನ್ನಮ ಅವರು ಮೊನ್ನೆ ಸಂಜೆ ನಿಧನರಾದರು.ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಪದನಾಭನಗರದಲ್ಲಿರುವ ಅವರ ಮನೆಗೆ ತಂದು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು.

ಚನ್ನಮನವರ ಬಂಧುಗಳು, ಹಿತೈಷಿಗಳು, ರಾಜಕೀಯ ಪಕ್ಷಗಳ ನಾಯಕರುಗಳು, ಇನ್ನೂ ಮುಂತಾದ ಗಣ್ಯರು ಅಂತಿಮ ದರ್ಶನ ಪಡೆಯಲು ಅವರ ಮನೆ ಬಳಿ ಅಂದು ರಾತ್ರಿ ಬಂದರು. ಆಗ ಮುಖ್ಯಮಂತ್ರಿಯವರು ಬರುತ್ತಾರೆಂದು ಗಂಟೆಗಳ ಮೊದಲೇ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿಕೊಂಡು ಸಾರ್ವಜನಿಕರು ಹಾಗೂ ಗಣ್ಯ ವ್ಯಕ್ತಿಗಳನ್ನು ಚನ್ನಮ ಅವರ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡದೇ ದರ್ಪ ತೋರಿದ್ದಾರೆ.

ಮೊದಲೇ ಮಳೆ ಬರುತ್ತಿತ್ತು. ಬೇಗ ಅಮನವರನ್ನು ನೋಡಿಕೊಂಡು ಮನೆಗೆ ಹೋಗೋಣ ಎಂದು ಬಂದಿದ್ದ ಕೆಲವು ಗಣ್ಯರಿಗೂ ಸಹ ಪೊಲೀಸರು ಬಿಡದೇ ಬಾಯಿ ಜೋರು ಮಾಡಿ ವಾಪಸ್‌‍ ಕಳುಹಿಸಿದ್ದಾರೆ. ಒಂದು ಕುಟುಂಬದಲ್ಲಿ ಸಾವು ಸಂಭವಿಸಿದಾಗ ಅವರ ಅಂತಿಮ ದರ್ಶನವನ್ನು ಪಡೆಯಲು ಅವರ ಬಂಧು-ಬಳಗ, ಸ್ನೇಹಿತರು ಹಿತೈಷಿಗಳು ಬರುತ್ತಾರೆ. ನೀವು ಅವರುಗಳನ್ನೇ ಬಿಡದೇ ಇದ್ದರೆ ಏನು ಅರ್ಥ?, ಬಹಳ ದೂರದಿಂದ ಕಷ್ಟಪಟ್ಟು ಬಂದು ಅಂತಿಮ ದರ್ಶನ ಪಡೆಯದೇ ವಾಪಸ್‌‍ ಹೋದವರ ಶಾಪ ನಿಮಗೆ ತಟ್ಟುವುದಿಲ್ಲವೇ? ಗೌಡರ ಮನೆಯ ಅಕ್ಕಪಕ್ಕದ ನಿವಾಸಿಗಳು ಓಡಾಡಲು ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕಿತ್ತಲ್ಲವೇ?

ಚನ್ನಮನವರ ಆರೋಗ್ಯ ಏರುಪೇರಾಗಿ ಆಸ್ಪತ್ರೆ ಸೇರಿದ್ದರು ಎಂಬ ವಿಷಯ ಮೊದಲೇ ನಿಮಗೆ ಗೊತ್ತಿತ್ತು. ಅದಕ್ಕೆ ತಕ್ಕಂತೆ ಸರಿಯಾದ ಸೂಕ್ತ ಸ್ಥಳ ಹಾಗೂ ಭದ್ರತೆ ಏಕೆ ಮಾಡಿಕೊಂಡಿಲ್ಲ?
ಕರ್ನಾಟಕ ರಾಜ್ಯದ ಅತ್ಯಂತ ಪ್ರತಿಷ್ಠಿತ ರಾಜಕೀಯ ಕುಟುಂಬ ದೇವೇಗೌಡ ಅವರದು. ಇದು ಗೊತ್ತಿದ್ದರೂ ಸಹ ನೀವು ಸರಿಯಾದ ವ್ಯವಸ್ಥೆ ಮಾಡಿಕೊಳ್ಳದಿರುವುದು ನಿಮ ಕರ್ತವ್ಯ ಲೋಪ ಅಲ್ಲವೇ?,

ಮತ್ತೆ ಮಳೆಯಲ್ಲಿ ಒದ್ದೆಯಾಗಿ, ಕೆಸರಾಗಿರುವ ಬ್ಯಾರಿಕೇಡ್‌ಗಳನ್ನು ತಂದು ಹಾಕಿದ್ದೀರಿ. ನಿಮ ತಳ್ಳು, ನೂಕಾಟದಿಂದ ಕೆಲವು ರಾಜಕಾರಣಿಗಳ, ಗಣ್ಯ ವ್ಯಕ್ತಿಗಳ ಬಿಳಿ ಬಟ್ಟೆಗಳಿಗೆ ಬ್ಯಾರಿಕೇಡ್‌ನ ಕೆಸರು ಮೆತ್ತಿಕೊಂಡಿದೆ.

ಶನಿವಾರ ರಾತ್ರಿ ಚನ್ನಮ ಅವರ ಅಂತಿಮ ದರ್ಶನ ಪಡೆಯಲು ಬಂದ ಗಣ್ಯರು ಹಾಗೂ ಬಂಧುಗಳ ನಡುವೆ ವಾಗ್ವಾದವು ನಡೆದಿದೆ. ಪೊಲೀಸರು ತಾಳೆಯಿಂದ ವರ್ತಿಸಿ ದರ್ಶನ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರೆ, ಅತೀ ಗಣ್ಯ ವ್ಯಕ್ತಿಗಳ ಆಗಮನ, ನಿರ್ಗಮನದ ಸಂದರ್ಭದಲ್ಲಿ ಅವರನ್ನು ತಡೆಯುವ ಅಗತ್ಯವೂ ಕಂಡುಬರುತ್ತಿರಲಿಲ್ಲ.

ಒಟ್ಟಾರೆ ಚನ್ನಮನವರ ಅಂತಿಮ ದರ್ಶನ ಪಡೆಯಲು ಬಂದ ಕೆಲವು ಸಾರ್ವಜನಿಕರು ಗಣ್ಯ ವ್ಯಕ್ತಿಗಳಿಗೆ ನೀವು ನೀಡಿರುವ ಕಿರುಕುಳ, ತೋರಿರುವ ದರ್ಪ, ದೌರ್ಜನ್ಯ ಬೆಂಗಳೂರು ನಗರ ಪೊಲೀಸರಿಗೆ ಒಂದು ಕಪ್ಪು ಚುಕ್ಕೆಯಾಗಿ ಉಳಿಯಲಿದೆ.

ಮುಖ್ಯಮಂತ್ರಿಗಳು, ಸಚಿವರು ಹಾಗೂ ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ಕಾರ್ಯಕ್ರಮ ಮುಂತಾದವುಗಳಿಗೆ ನೀವು ಸೂಕ್ತ ಬಂದೋಬಸ್ತ್‌ ಮಾಡಿ ಕಠಿಣ ಕ್ರಮ ಕೈಗೊಳ್ಳುವುದು ಸರಿ. ಆದರೆ ಅಂತಿಮ ದರ್ಶನ ಪಡೆಯಲು ಬಂದವರ ಮೇಲೆ ಪೌರುಷ ತೋರುವುದು ಉತ್ತರನ ಪೌರುಷ ಅಲ್ಲವೇ?

ಪೊಲೀಸ್‌‍ ಅಕಾಡೆಮಿ, ತರಬೇತಿ ಶಾಲೆಗಳಲ್ಲಿ ನಿಮಗೆ ಇದನ್ನೇ ಹೇಳಿಕೊಟ್ಟಿರುವುದೇ? ಮೊದಲು ನೀವು ಮನುಷ್ಯರು. ನಂತರ ಪೊಲೀಸರು ಎಂಬುದನ್ನು ಮರೆಯಬೇಡಿ. ಇನ್ನು ಮುಂದಾದರೂ ಇಂತಹ ದುಃಖದ ಕಾರ್ಯಕ್ರಮಗಳಲ್ಲಿ ಮಾನವೀಯತೆಯನ್ನು ತೋರಿ ಮನುಷ್ಯರಾಗಿ, ಮೃಗಗಳಾಗಬೇಡಿ.

RELATED ARTICLES

Latest News