Homeಜಿಲ್ಲಾ ಸುದ್ದಿಗಳುಪತ್ನಿಯನ್ನು ಕೊಂದು ತೋಟದಲ್ಲಿ ಹೂತಿಟ್ಟು ಪತಿ ಆತ್ಮಹತ್ಯೆ

ಪತ್ನಿಯನ್ನು ಕೊಂದು ತೋಟದಲ್ಲಿ ಹೂತಿಟ್ಟು ಪತಿ ಆತ್ಮಹತ್ಯೆ

ಚಿಕ್ಕಮಗಳೂರು, ಆ.6- ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪತ್ನಿಯನ್ನು ಹತ್ಯೆಗೈದು ತನ್ನ ತೋಟದಲ್ಲೇ ರಹಸ್ಯವಾಗಿ ಹೂತಿಟ್ಟಿದ್ದ ಪ್ರಕರಣ ಐದು ದಿನಗಳ ಬಳಿಕ ಬೆಳಕಿಗೆ ಬಂದಿದೆ. ಪತ್ನಿಯನ್ನು ಕೊಲೆಗೈದ ಬಳಿಕ ಮೃತದೇಹವನ್ನು ಹೂತಿಟ್ಟು, ನಂತರ ಆರೋಪಿ ರಘು ಆತಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಬಸವನಹಳ್ಳಿ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ತೋಟದಲ್ಲಿ ಶೋಧ ನಡೆಸಿ, ಹೂತಿಟ್ಟಿದ್ದ ಮಹಿಳೆಯ ಮೃತದೇಹವನ್ನು ಹೊರತೆಗೆದರು. ಸ್ಥಳದಲ್ಲೇ ಮಹಜರು ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಯಿತು.

ಆರಂಭದಲ್ಲಿ ನಾಪತ್ತೆ ಪ್ರಕರಣವೆಂದು ದಾಖಲಾಗಿದ್ದ ಘಟನೆ, ಐದು ದಿನಗಳ ಬಳಿಕ ಮೃತದೇಹ ಪತ್ತೆಯಾಗುವುದರೊಂದಿಗೆ ಕೊಲೆ ಪ್ರಕರಣವಾಗಿ ಬಯಲಾಗಿದೆ. ಪತ್ನಿಯನ್ನು ಕೊಲೆಗೈದು ತೋಟದಲ್ಲೇ ಹೂತಿಟ್ಟು, ಬಳಿಕ ಆರೋಪಿ ಆತಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಸವನಹಳ್ಳಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES
spot_img

Latest News