Homeಇದೀಗ ಬಂದ ಸುದ್ದಿಬಿ.ನಾಗೇಂದ್ರಗೆ ಎಸ್‌‍ಐಟಿಯಿಂದ ಕ್ಲೀನ್‌ಚಿಟ್‌ : ಸಚಿವ ಜಮೀರ್‌

ಬಿ.ನಾಗೇಂದ್ರಗೆ ಎಸ್‌‍ಐಟಿಯಿಂದ ಕ್ಲೀನ್‌ಚಿಟ್‌ : ಸಚಿವ ಜಮೀರ್‌

ಚಿತ್ರದುರ್ಗ, ಆ.7- ಬಳ್ಳಾರಿ ಜಿಲ್ಲೆಯ ಸಚಿವ ಬಿ. ನಾಗೇಂದ್ರ ವಿರುದ್ಧ ಕೇಳಿಬಂದಿದ್ದ ಆರೋಪಗಳ ಕುರಿತು ವಿಶೇಷ ತನಿಖಾ ದಳ (ಎಸ್‌‍ಐಟಿ) ತನಿಖೆ ನಡೆಸಿ ಕ್ಲೀನ್‌ಚಿಟ್‌ ನೀಡಿದೆ. ಹೀಗಿದ್ದರೂ ಪ್ರಕರಣ ಎಲ್ಲಿ ಬಾಕಿ ಇದೆ ಎಂದು ಸಚಿವ ಜಮೀರ್‌ ಅಹದ್‌ ಖಾನ್‌ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತರಕ್ಕೆ ಬೆಳೆದವರ ವಿರುದ್ಧ ರಾಜಕೀಯವಾಗಿ ಪಿತೂರಿ ನಡೆಸುವುದು ಸಹಜ. ಸಾಮಾನ್ಯ ಜನರ ಮೇಲೆ ಈ ರೀತಿಯ ಪಿತೂರಿಗಳು ನಡೆಯುವುದಿಲ್ಲ. ಬಿ. ನಾಗೇಂದ್ರ ಅವರು ರಾಜಕೀಯವಾಗಿ ಎತ್ತರಕ್ಕೆ ಬೆಳೆದಿರುವ ಕಾರಣ ಅವರ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದರು.

ನನ್ನ ವಿರುದ್ಧವೂ ಎತ್ತರಕ್ಕೆ ಬೆಳೆದಿದ್ದೇನೆ ಎಂಬ ಕಾರಣಕ್ಕೆ ಕೆಲವರು ಹಲವು ರೀತಿಯ ಷಡ್ಯಂತ್ರಗಳನ್ನು ನಡೆಸಿದ್ದರು. ರಾಜಕೀಯದಲ್ಲಿ ಇಂತಹ ಬೆಳವಣಿಗೆಗಳು ಸಹಜ ಎಂದು ಜಮೀರ್‌ ಅಹದ್‌ ಖಾನ್‌ ಹೇಳಿದರು.
ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅವರು ಏನು ಬೇಕಾದರೂ ಹೇಳಲಿ. ಅವರ ಹೇಳಿಕೆಗಳನ್ನು ಸವಾಲಾಗಿ ಸ್ವೀಕರಿಸಿ, 2028ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌‍ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ರಾಜಕೀಯ ಕಾರಣಕ್ಕಾಗಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ತಾರತಮ್ಯ ಸೃಷ್ಟಿಸಲಾಗುತ್ತಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲ ಧರ್ಮದವರೂ ಒಗ್ಗಟ್ಟಾಗಿ ಹೋರಾಡಿದ್ದರು.
ಆದರೆ ಸ್ವಾತಂತ್ರ್ಯ ನಂತರ ಕೆಲವರು ವಿವಿಧ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಒಗ್ಗಟ್ಟಿನಿಂದ ಬದುಕುವ ಜನರ ನಡುವೆ ಜಾತಿ-ಧರ್ಮ ಬಿತ್ತುತ್ತಿದ್ದಾರೆ ಎಂದು ಜಮೀರ್‌ ಅಹದ್‌ ಖಾನ್‌ ಹೇಳಿದರು.

RELATED ARTICLES
spot_img

Latest News