ಬೆಂಗಳೂರು, ಮಾ.4- ಅಮೇರಿಕಾದ ರಾಷ್ಟ್ರೀಯ ಸಾಲವು 34.421 ಟ್ರಿಲಿಯನ್ ಡಾಲರ್ ಆಗಿದ್ದು, ಪ್ರತಿ 100 ದಿನಗಳಿಗೊಮ್ಮೆ ಒಂದು ಟ್ರಿಲಿಯನ್ ಡಾಲರ್ ಸಾಲ ಏರಿಕೆಯಾಗುತ್ತಲೆ ಇದೆ. ಅಮೇರಿಕಾ ವಾಲ್‍ಸ್ಟ್ರಿಟ್ ಸಿಲ್ವರ್ ಎಕ್ಸ್ ನಲ್ಲಿ ಈ ಅಂಶ ಪ್ರಕಟವಾಗಿದ್ದು, ಸಾಲದ ಮೇಲಿನ ಬಡ್ಡಿಯನ್ನು ಪಾವತಿಸಲು ಸಾಲ ಮಾಡಬೇಕಾದ ದುಸ್ಥಿತಿ ಅಮೇರಿಕಾಗೆ ಬಂದೊದಗಿದೆ. ವಿಶ್ವದ ದೊಡ್ಡಣ್ಣನಾಗಿರುವ ಅಮೇರಿಕಾದ ರಾಷ್ಟ್ರೀಯ ಸಾಲವು 30 ದಿನಗಳಿಗೆ ಒಂದು ಟ್ರಿಲಿಯನ್ ಡಾಲರ್ ಹೆಚ್ಚಾದರೂ ಆಶ್ಚರ್ಯ ಪಡಬೇಕಾಗಿಲ್ಲ.
ಈ ಸಾಲದ ಮೇಲಿನ ಬಡ್ಡಿಯನ್ನು ಪಾವತಿಸಲು ಮತ್ತೆ ಮತ್ತೆ ಸಾಲ ಮಾಡಬೇಕಾದ ದುಸ್ಥಿತಿಯಲ್ಲಿದ್ದೇವೆಯೆಂದು ಹಣಕಾಸು ಸಂಸ್ಥೆ ಹೇಳಿಕೊಂಡಿದೆ. ಹೆಚ್ಚಿನ ಬಡ್ಡಿ ದರಗಳ ಸಂದರ್ಭದಲ್ಲಿ ಸರ್ಕಾರದ ವೆಚ್ಚಗಳನ್ನು ಕಡಿಮೆ ಮಾಡಲು ಅಥವಾ ಆದಾಯವನ್ನು ಹೆಚ್ಚಿಸಲು ಪರಿಣಾಮಕಾರಿ ಹಣಕಾಸಿನ ನೀತಿ ಮತ್ತು ಕ್ರಮಗಳು ಇಲ್ಲದ ಪರಿಣಾಮ ಯುಎಸ್‍ನಲ್ಲಿ ಹಣಕಾಸಿನ ಕೊರತೆಗಳು ಬಹಳ ದೊಡ್ಡದಾಗಿ ಬೆಳೆಯುತ್ತಿವೆ. ಇದರಿಂದಾಗಿ ಸಾಲಗಳು ದೊರೆಯದೆ ಆತಂಕ ಪರಿಸ್ಥಿತಿಗಳು ಎದುರಾಗುತ್ತಿದೆ.
ಸಾಲದ ಅಪಮೌಲ್ಯಿಕರಣವೂ ಸಾರ್ವಕಾಲೀಕ ಗರಿಷ್ಠ ಮಟ್ಟದಲ್ಲಿ ಮಕ್ತಾಯಗೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲವೆಂದು ಹೇಳಿದೆ.