ಬೆಂಗಳೂರು,ಆ.10-ನಗರ ಪೊಲೀಸರು ನಗರದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ 8 ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 39 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ 17 ಲಕ್ಷ ನಗದು ಸೇರಿದಂತೆ 55.80 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.ಬಂಧಿತರಿಂದ ಮಾದಕ ವಸ್ತುಗಳಾದ 21 ಕೆಜಿ 641 ಗ್ರಾಂ ಎಂಡಿಎಂಎ, 738 ಗ್ರಾಂ ಕೋಕೇನ್, 4 ಕೆಜಿ 493 ಗ್ರಾಂ ಹೈಡ್ರೋಗಾಂಜಾ, 184 ಕೆಜಿ 625 ಗ್ರಾಂ ಗಾಂಜಾ, 1 ಕೆಜಿ 65 ಗ್ರಾಂ ಅಫೀಮು, 25 ಗ್ರಾಂ ಮಾರ್ಫಿನ್, 17 ಲಕ್ಷ ನಗದು, 22 ಮೊಬೈಲ್ ಪೋನ್‌ಗಳು ಹಾಗೂ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಿಷನ್ ರೈಸ್ ಹಾಗೂ ಮಾದಕ ವಸ್ತುಗಳ ವಿರುದ್ಧದ ಅಭಿಯಾನದ ಅಂಗವಾದ ಬೇಡ ಬ್ರೋ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಅಮೃತಹಳ್ಳಿ, ಗಿರಿನಗರ, ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ, ಕೆ.ಐ.ಎ, ಯಶವಂತಪುರ, ಯಲಹಂಕ, ಹೆಬ್ಬಾಳ, ನಂದಿನಿ ಲೇಔಟ್, ಕಾಡುಗೋಡಿ, ಮಲ್ಲೇಶ್ವರಂ, ಗೋವಿಂದಪುರ, ಬಾಗಲೂರು, ಮಹದೇವಪುರ, ಮಹಾಲಕ್ಷೀ ಲೇಔಟ್, ಬೇಗೂರು ಹಾಗೂ ಕೊತ್ತನೂರು ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.
ಈ ವ್ಯಾಪ್ತಿಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಖಚಿತ ಮಾಹಿತಿಗಳು ದೊರೆತ್ತಿರುತ್ತವೆ. ಈ ಮಾಹಿತಿಗಳನ್ನಾಧಾರಿಸಿ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿಕೊಂಡು ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ.
ದಾಳಿ ಸಂದರ್ಭದಲ್ಲಿ 8 ವಿದೇಶಿ ಪ್ರಜೆಗಳು, 21 ಮಂದಿ ಹೊರರಾಜ್ಯದವರು ಹಾಗೂ 10 ಮಂದಿ ಸ್ಥಳೀಯರು ಸೇರಿದಂತೆ 39 ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾದ ಹೆಚ್ಚಿನ ಹಣಗಳಿಸುವ ಉದ್ದೇಶದಿಂದ ಈ ಕೃತ್ಯ ವೆಸಗಿರುವುದಾಗಿ ತಿಳಿಸಿದ್ದಾರೆ.
ಮಾದಕ ವಸ್ತುಗಳನ್ನು ವಿದೇಶ, ಹೊರ ರಾಜ್ಯ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಆರೋಪಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಅಪರಿಚಿತ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪ್ರಕರಣಗಳು ಪ್ರಗತಿಯಲ್ಲಿರುತ್ತವೆ.
ಅಮೃತಹಳ್ಳಿ ಠಾಣೆ ಪೊಲೀಸರು 28.88 ಕೋಟಿ ಮೌಲ್ಯದ 14 ಕೆಜಿ 436 ಗ್ರಾಂ ಎಂಡಿಎಂಎ ವಶಪಡಿಸಿಕೊಂಡರೆ, ಗಿರಿನಗರ 10.36 ಕೋಟಿ ಮೌಲ್ಯದ 5 ಕೆಜಿ 179 ಗ್ರಾಂ ಎಂಡಿಎಂಎ , ಮೊಬೈಲ್, ಸಿಸಿಬಿ ಪೊಲೀಸರು ಮೂರು ಪ್ರಕರಣಗಳಲ್ಲಿ 8.88 ಕೋಟಿ ಮೌಲ್ಯದ 738 ಗ್ರಾಂ ಕೋಕೆನ್, 336 ಗ್ರಾಂ ಎಂಡಿಎಂಎ, 82 ಕೆಜಿ 305 ಗ್ರಾಂ ಗಾಂಜಾ, 2 ದ್ವಿಚಕ್ರ ವಾಹನ, 2 ಮೊಬೈಲ್ ಜಪ್ತಿ ಮಾಡಿದ್ದಾರೆ.
ಯಶವಂತಪುರ ಠಾಣೆ ಪೊಲೀಸರು 2 ಪ್ರಕರಣಗಳಲ್ಲಿ 1.71 ಕೋಟಿ ಮೌಲ್ಯದ 650 ಗ್ರಾಂ ಎಂಡಿಎಂಎ, 41 ಕೆಜಿ 446 ಗ್ರಾಂ ಗಾಂಜಾ, ದ್ವಿಚಕ್ರ ವಾಹನ, 3 ಮೊಬೈಲ್‌ಗಳು ಹಾಗೂ ಕೆಐಎ ಪೊಲೀಸರು 3 ಪ್ರಕರಣಗಳಲ್ಲಿ 3 ಕೋಟಿ ಮೌಲ್ಯದ 4 ಕೆಜಿ 278 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಹೆಬ್ಬಾಳ ಠಾಣೆ ಪೊಲೀಸರು 19.20 ಲಕ್ಷ ರೂ. ಮೌಲ್ಯದ 96 ಗ್ರಾಂ ಎಂಡಿಎಂಎ, 17 ಲಕ್ಷ ನಗದು ಹಾಗೂ 2 ಮೊಬೈಲ್ ವಶಪಡಿಸಿಕೊಂಡರೆ, ನಂದಿನಿ ಲೇಔಟ್ ಠಾಣೆ ಪೊಲೀಸರು 30 ಲಕ್ಷ ಮೌಲ್ಯದ 150 ಗ್ರಾಂ ಎಂಡಿಎಂಎ 8 ಮೊಬೈಲ್, ದ್ವಿಚಕ್ರ ವಾಹನ ಹಾಗೂ ಕಾಡುಗೋಡಿ ಠಾಣೆ ಪೊಲೀಸರು 15.80 ಲಕ್ಷ ರೂ.ಮೌಲ್ಯದ 15 ಕೆಜಿ 800 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ.
ಮಲ್ಲೇಶ್ವರಂ ಠಾಣೆ ಪೊಲೀಸರು 15.5 ಲಕ್ಷ ಮೌಲ್ಯದ 215 ಗ್ರಾಂ ಹೈಡ್ರೋ ಗಾಂಜಾ, ಮೊಬೈಲ್, ಗೋವಿಂದಪುರ ಠಾಣೆ ಪೊಲೀಸರು 11.27 ಲಕ್ಷ ಮೌಲ್ಯದ 11ಕೆಜಿ 270 ಗ್ರಾಂ ಗಾಂಜಾ ಹಾಗೂ ಬಾಗಲೂರು ಠಾಣೆ ಪೊಲೀಸರು ಎರಡು ಪ್ರಕರಣಗಳಲ್ಲಿ 10.78 ಲಕ್ಷ ಮೌಲ್ಯದ 25 ಗ್ರಾಂ ಮಾರ್ಪಿನ್, 5ಕೆಜಿ 780 ಗ್ರಾಂ ಗಾಂಜಾವನ್ನು ಆರೋಪಿಗಳಿಂದ ವಶಕ್ಕೆ ಪಡೆದಿದ್ದಾರೆ.
ಮಹದೇವಪುರ ಠಾಣೆ ಪೊಲೀಸರು 10.58 ಲಕ್ಷ ರೂ. ಮೌಲ್ಯದ 10.579 ಗ್ರಾಂ ಗಾಂಜಾ ,ಮಹಾಲಕ್ಷ್ಮೀ ಲೇಟೌ ಠಾಣೆ ಪೊಲೀಸರು 10.65 ಲಕ್ಷ ಮೌಲ್ಯದ 1ಕೆಜಿ 65 ಗ್ರಾಂ ಅಫೀಮು, ದ್ವಿಚಕ್ರ ವಾಹನ, 2 ಮೊಬೈಲ್ ವಶಪಡಿಸಿಕೊಂಡರೆ , ಬೇಗೂರು ಠಾಣೆ ಪೊಲೀಸರು 10 ಲಕ್ಷ ಮೌಲ್ಯದ10 ಕೆಜಿ ಗಾಂಗಾ ಹಾಗೂ ಕೊತ್ತನೂರು ಠಾಣೆ ಪೊಲೀಸರು 7.44ಲಕ್ಷ ರೂ. ಮೌಲ್ಯದ 7 ಕೆಜಿ 445 ಗ್ರಾಂ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಗಳನ್ನು ಆಯಾಯಾ ಠಾಣಾ ಇನ್ಸಪೆಕ್ಟರ್‌ಗಳು ಹಾಗೂ ಸಿಬ್ಬಂದಿ ತಂಡ ಕೈಗೊಂಡು ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
