Homeರಾಷ್ಟ್ರೀಯನಿರ್ಮಾಣ ಹಂತದ ಜಲವಿದ್ಯುತ್‌ ಯೋಜನೆಯ ಸುರಂಗಕ್ಕೆ ಹಠಾತ್ತನೆ ನೀರು ನುಗ್ಗಿ 7 ಕಾರ್ಮಿಕರು

ನಿರ್ಮಾಣ ಹಂತದ ಜಲವಿದ್ಯುತ್‌ ಯೋಜನೆಯ ಸುರಂಗಕ್ಕೆ ಹಠಾತ್ತನೆ ನೀರು ನುಗ್ಗಿ 7 ಕಾರ್ಮಿಕರು

7 Killed, 3 Trapped As Water, Debris Enter Tunnel In Uttarakhand's Chamoli

ಚಮೋಲಿ(ಉತ್ತರಾಖಂಡ),ಆ.14- ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್‌ ಯೋಜನೆಯ ಸುರಂಗಕ್ಕೆ ಹಠಾತ್ತನೆ ನೀರು ಮತ್ತು ಭಾರೀ ಪ್ರಮಾಣದ ಅವಶೇಷಗಳು ನುಗ್ಗಿದ ಪರಿಣಾಮ ಸಂಭವಿಸಿದ ಭೀಕರ ದುರಂತದಲ್ಲಿ ಏಳು ಕಾರ್ಮಿಕರು ಮತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ.

ಇನ್ನೂ ಒಬ್ಬ ಕಾರ್ಮಿಕ ಸುರಂಗದೊಳಗೆ ಸಿಲುಕಿಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆಯೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.ಮಾಯಾಪುರಪಿಪಲ್ಕೋಟಿ ಪ್ರದೇಶದಲ್ಲಿರುವ THDCಯ ವಿಷ್ಣುಗಾಡ್‌ಪಿಪಲ್ಕೋಟಿ ಜಲವಿದ್ಯುತ್‌ ಯೋಜನೆಯ ನಿರ್ಮಾಣ ಹಂತದ ಸುರಂಗದಲ್ಲಿ ಗುರುವಾರ ಸಂಜೆ ಸುಮಾರು 6.45ರ ವೇಳೆಗೆ ಈ ಘಟನೆ ಸಂಭವಿಸಿದೆ.

ಸುರಂಗದೊಳಗೆ ಆ ವೇಳೆ ಒಟ್ಟು 22 ಕಾರ್ಮಿಕರು ಇದ್ದರು. ಹಠಾತ್ತನೆ ನೀರು ಮತ್ತು ಮಣ್ಣು ಅವಶೇಷಗಳು ಒಳನುಗ್ಗಿದ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಹೊರಬರಲು ಅವಕಾಶ ಸಿಗದೆ ಕೆಲವರು ಸಿಲುಕಿಕೊಂಡರು.ಘಟನೆ ಸಂಭವಿಸಿದ ಕೂಡಲೇ SDRF, NDRF, ಸೇನೆ, ITBP, CISF, ಪೊಲೀಸರು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ಹಲವು ತಂಡಗಳು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿವೆ.

ಸುರಂಗದೊಳಗಿನ ನೀರನ್ನು ಹೊರಹಾಕಲು ಹಾಗೂ ಅವಶೇಷಗಳನ್ನು ತೆರವುಗೊಳಿಸಲು ಭಾರೀ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ. ನೀರು ತುಂಬಿರುವ ಭಾಗಗಳನ್ನು ದಾಟಿ ಸಿಲುಕಿರುವ ಕಾರ್ಮಿಕನನ್ನು ತಲುಪಲು ರಕ್ಷಣಾ ಸಿಬ್ಬಂದಿ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.

ಗಾಯಾಳುಗಳಿಗೆ ಚಿಕಿತ್ಸೆ :
ಗಾಯಗೊಂಡ 14 ಕಾರ್ಮಿಕರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗೋಪೇಶ್ವರ ಸೇರಿದಂತೆ ವಿವಿಧ ವೈದ್ಯಕೀಯ ಕೇಂದ್ರಗಳಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಸ್ಥಿತಿಯಲ್ಲಿರುವವರನ್ನು ಅಗತ್ಯವಿದ್ದರೆ ಉನ್ನತ ವೈದ್ಯಕೀಯ ಕೇಂದ್ರಗಳಿಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಲಾಗಿದೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ದುರಂತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಯುದ್ಧೋಪಾದಿಯಲ್ಲಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಲಾಗಿದೆ. ಧಾಮಿ ಅವರು ಶುಕ್ರವಾರ ಬೆಳಗ್ಗೆ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಲಿದ್ದು, ನಂತರ ಗಾಯಾಳುಗಳನ್ನು ಭೇಟಿಯಾಗುವ ಕಾರ್ಯಕ್ರಮವಿದೆ. ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಸುರಂಗದೊಳಗೆ ಏಕಾಏಕಿ ಇಷ್ಟೊಂದು ಪ್ರಮಾಣದಲ್ಲಿ ನೀರು ಮತ್ತು ಅವಶೇಷಗಳು ನುಗ್ಗಲು ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆರಂಭಿಕ ಮಾಹಿತಿಯ ಪ್ರಕಾರ, ಭೂ ಕುಸಿತ ಅಥವಾ ಭೂಗರ್ಭದ ನೀರಿನ ಹಠಾತ್‌ ಹರಿವು ಘಟನೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ಅಧಿಕೃತ ತನಿಖೆಯ ಬಳಿಕವಷ್ಟೇ ನಿಖರ ಕಾರಣ ತಿಳಿದುಬರಬೇಕಿದೆ.

ಮತ್ತೆ ಮತ್ತೆ ಅಪಘಾತಗಳ ಸರಣಿ :
ಚಮೋಲಿಯ ಈ ಘಟನೆ ಕೇವಲ ಒಂದು ಪ್ರತ್ಯೇಕ ಅಪಘಾತವಾಗಿ ಕಾಣದೆ, ಪರ್ವತ ಪ್ರದೇಶಗಳಲ್ಲಿ ನಡೆಯುತ್ತಿರುವ ಸುರಂಗ ಹಾಗೂ ಜಲವಿದ್ಯುತ್‌ ಯೋಜನೆಗಳ ಕಾರ್ಮಿಕ ಸುರಕ್ಷತೆ ಮತ್ತು ನಿರ್ಮಾಣ ಮಾನದಂಡಗಳ ಬಗ್ಗೆ ಮತ್ತೊಮೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಇದೇ ವಿಷ್ಣುಗಾಡ್‌ಪಿಪಲ್ಕೋಟಿ ಜಲವಿದ್ಯುತ್‌ ಯೋಜನೆಯ ಸುರಂಗದಲ್ಲಿ 2025ರ ಡಿಸೆಂಬರ್‌ ಅಂತ್ಯದಲ್ಲಿ ಎರಡು ಲೊಕೋ ರೈಲುಗಳು ಡಿಕ್ಕಿಯಾಗಿ ಹಲವು ಕಾರ್ಮಿಕರು ಗಾಯಗೊಂಡಿದ್ದರು.

ಆ ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿ ಇದ್ದಾಗ ಸುಮಾರು 70 ಮಂದಿ ಗಾಯಗೊಂಡಿದ್ದರು. ಬಳಿಕ ಏಈಇ ಸುರಕ್ಷತಾ ವ್ಯವಸ್ಥೆಗಳ ಪರಿಶೀಲನೆಗಾಗಿ ಸಮಿತಿಯನ್ನೂ ರಚಿಸಿತ್ತು.
2026ರ ಜುಲೈಯಲ್ಲಿಯೂ ಉತ್ತರಾಖಂಡದ ಸಿಲ್ಕ್ಯಾರಾಬರ್ಕೋಟ್‌ ನಿರ್ಮಾಣ ಹಂತದ ಸುರಂಗದಲ್ಲಿ ಕಾಂಕ್ರೀಟ್‌ ಲೈನಿಂಗ್‌ನ ಒಂದು ಭಾಗ ಕುಸಿದು 21 ವರ್ಷದ ಕಾರ್ಮಿಕ ಮತಪಟ್ಟಿದ್ದ. ಈ ಘಟನೆ ಕೂಡ ಸುರಂಗ ನಿರ್ಮಾಣ ಕಾಮಗಾರಿಗಳಲ್ಲಿ ಕಾರ್ಮಿಕರ ಸುರಕ್ಷತೆ ಕುರಿತು ಆತಂಕ ಹೆಚ್ಚಿಸಿತ್ತು.

ಇದಕ್ಕೂ ಮುನ್ನ 2023ರ ಸಿಲ್ಕ್ಯಾರಾಬರ್ಕೋಟ್‌ ಸುರಂಗ ದುರಂತ ದೇಶದ ಗಮನ ಸೆಳೆದಿತ್ತು. ಸುರಂಗ ಕುಸಿತದಿಂದ 41 ಕಾರ್ಮಿಕರು ಒಳಗೆ ಸಿಲುಕಿಕೊಂಡು, ಹಲವು ದಿನಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಎಲ್ಲರನ್ನೂ ಸುರಕ್ಷಿತವಾಗಿ ಹೊರತರಲಾಗಿತ್ತು. ಆ ರಕ್ಷಣಾ ಕಾರ್ಯಾಚರಣೆಯಲ್ಲಿ ಘೆಈ್ಕಊ, ಖಈ್ಕಊ, ಸೇನೆಯ ಎಂಜಿನಿಯರ್‌ಗಳು ಸೇರಿದಂತೆ ಹಲವು ಸಂಸ್ಥೆಗಳು ಭಾಗವಹಿಸಿದ್ದವು.

ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಮತ್ತೆ ಪ್ರಶ್ನೆ :
ಹಿಮಾಲಯ ಪ್ರದೇಶವು ಭೌಗೋಳಿಕವಾಗಿ ಅತ್ಯಂತ ಸೂಕ್ಷ್ಮ ವಲಯವಾಗಿದ್ದು, ಭೂಕುಸಿತ, ಅತಿವೃಷ್ಟಿ, ಹಠಾತ್‌ ನೀರಿನ ಹರಿವು ಹಾಗೂ ಭೂಗರ್ಭದ ಬದಲಾವಣೆಗಳು ಸುರಂಗ ಕಾಮಗಾರಿಗಳಿಗೆ ದೊಡ್ಡ ಸವಾಲಾಗಿವೆ.

ಹೀಗಾಗಿ ದೊಡ್ಡ ಜಲವಿದ್ಯುತ್‌ ಮತ್ತು ರಸ್ತೆ ಯೋಜನೆಗಳಲ್ಲಿ ಭೂವೈಜ್ಞಾನಿಕ ಅಧ್ಯಯನ, ನೀರಿನ ಒತ್ತಡದ ನಿರ್ವಹಣೆ, ತುರ್ತು ನಿರ್ಗಮನ ಮಾರ್ಗಗಳು, ಒಳಾಂಗಣ ಸಂವಹನ ವ್ಯವಸ್ಥೆ ಮತ್ತು ಕಾರ್ಮಿಕರಿಗೆ ತುರ್ತು ರಕ್ಷಣಾ ತರಬೇತಿ ಎಷ್ಟು ಪರಿಣಾಮಕಾರಿಯಾಗಿ ಜಾರಿಯಲ್ಲಿವೆ ಎಂಬ ಪ್ರಶ್ನೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ಪ್ರಸ್ತುತ ಸರ್ಕಾರದ ಮೊದಲ ಆದ್ಯತೆ ಸುರಂಗದೊಳಗೆ ಸಿಲುಕಿರುವ ಒಬ್ಬ ಕಾರ್ಮಿಕನನ್ನು ಸುರಕ್ಷಿತವಾಗಿ ಹೊರತೆಗೆಯುವುದು ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವುದಾಗಿದೆ. ಆದರೆ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಈ ದುರಂತಕ್ಕೆ ಕಾರಣ, ಸುರಕ್ಷತಾ ಕ್ರಮಗಳ ಅನುಸರಣೆ ಹಾಗೂ ನಿರ್ಮಾಣ ಸಂಸ್ಥೆಗಳ ಹೊಣೆಗಾರಿಕೆಯ ಕುರಿತು ಸಮಗ್ರ ತನಿಖೆ ನಡೆಸಬೇಕೆಂಬ ಒತ್ತಾಯವೂ ಬಲಪಡೆಯುವ ಸಾಧ್ಯತೆ ಇದೆ.
ಈ ನಡುವೆ, ರಕ್ಷಣಾ ತಂಡಗಳು ಅವಶೇಷ ಮತ್ತು ನೀರಿನ ನಡುವೆ ಜೀವದ ಹೋರಾಟ ನಡೆಸುತ್ತಿದ್ದು, ಸುರಂಗದೊಳಗೆ ಸಿಲುಕಿರುವ ಕಾರ್ಮಿಕನ ಸುರಕ್ಷಿತ ರಕ್ಷಣೆಯತ್ತ ಇಡೀ ದೇಶದ ಗಮನ ನೆಟ್ಟಿದೆ.

RELATED ARTICLES
spot_img

Latest News