ನವದೆಹಲಿ, ಸೆ. 28 (ಪಿಟಿಐ)- ಏಷ್ಯನ್ ಗೇಮ್ಸೌ ಕಬಡ್ಡಿ ಚಾಂಪಿಯನ್‌ಗಳು ತವರಿಗೆ ಮರಳಿದಾಗ ಐಜಿಐ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ನಿಲ್ದಾಣ ಅಕ್ಷರಶಃ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾ ಯಿತು. ಚಿನ್ನದ ಪದಕ ವಿಜೇತರಾದ ಸುರುಚಿ ಸಿಂಗ್ ಮತ್ತು ಕಮಲ್‌ಜೀತ್ ಸಿಂಗ್ ನೇತೃತ್ವದ ಶೂಟರ್‌ಗಳು ಕೂಡ ಸ್ವಲ್ಪ ಸಮಯದ ನಂತರ ಆಗಮಿಸಿ ಸಂಭ್ರಮವನ್ನು ಹೆಚ್ಚಿಸಿದರು. ಚಿನ್ನ ಗೆದ್ದ ಪುರುಷರ ಮತ್ತು ಮಹಿಳೆಯರ ತಂಡಗಳು ಆಗಮಿಸುವ ನಿಗದಿತ ಸಮಯಕ್ಕೂ ಮುನ್ನವೇ ಕುಟುಂಬ ಸದಸ್ಯರು, ನೆರೆಹೊರೆಯವರು ಮತ್ತು ಸಹ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ದೂರದಿಂದಲೇ ಮರಳುತ್ತಿರುವ ಕ್ರೀಡಾ ವೀರರ ಮೊದಲ ನೋಟ ಸಿಕ್ಕಾಗ ಆ ಕಾಯುವಿಕೆಯು ಸಂಭ್ರಮಾಚರಣೆಯಾಗಿ ಪರಿವರ್ತನೆಗೊಂಡಿತು. ಉನ್ನತ ಮನೋಬಲವು ನಮ್ಮನ್ನು ಚಿನ್ನದ ಪದಕದತ್ತ ಕೊಂಡೊಯ್ದಿತು. ಇಂತಹ ಸ್ವಾಗತವನ್ನು ಕಂಡು ನನಗೆ ತುಂಬಾ ಸಂತೋಷವಾಗಿದೆ. ಒಂದು ದಿನ ಕಬಡ್ಡಿ ಒಲಿಂಪಿಕ್ ಕ್ರೀಡೆಯಾಗಲಿದೆ ಎಂದು ನಾನು ಭಾವಿಸುತ್ತೇನೆ, ಎಂದು ಭಾರತೀಯ ಪುರುಷರ ಕಬಡ್ಡಿ ತಂಡದ ನಾಯಕ ಸುನಿಲ್ ಕುಮಾರ್ ಸಂಭ್ರಮದ ಡೋಲುಗಳ ಸದ್ದಿನ ನಡುವೆ ಪಿಟಿಐಗೆ ತಿಳಿಸಿದರು.
ನಾವು ವಿಶ್ವದ ಅತ್ಯುತ್ತಮ ಕಬಡ್ಡಿ ಆಡುವ ರಾಷ್ಟ್ರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೇವೆ. ಪ್ರಶಸ್ತಿಯನ್ನು ಉಳಿಸಿಕೊಳ್ಳುವುದು ಅತ್ಯಂತ ಸಂತೋಷದಾಯಕ ವಿಷಯ. ನನ್ನ ತಂಡದ ಹುಡುಗರ ಬಗ್ಗೆ ನನಗೆ ಹೆಮ್ಮೆ ಇದೆ. ಅರ್ಹವಾದ ಚಿನ್ನವನ್ನು ಗೆಲ್ಲಲು ನಮ್ಮ ತಂಡವು ಅಪಾರ ಛಲ, ಬದ್ಧತೆ ಮತ್ತು ಉತ್ತಮ ಆಟವನ್ನು ಪ್ರದರ್ಶಿಸಿತು ಎಂದು ಅವರು ಹೇಳಿದರು.
ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ ಮಹಿಳಾ ತಂಡದ ನಾಯಕಿ ಪುಷ್ಪಾ ರಾಣಾ, ಫೈನಲ್‌ನಲ್ಲಿ ಇರಾನ್‌ನಿಂದ ತೀವ್ರ ಪೈಪೋಟಿ ಎದುರಾದರೂ, ನಿರ್ಣಾಯಕ ಕ್ಷಣದಲ್ಲಿ ತಮ್ಮ ತಂಡವು ಉತ್ತಮ ಪ್ರದರ್ಶನ ನೀಡಿ ಚಿನ್ನವನ್ನು ಗೆದ್ದುಕೊಂಡಿತು ಎಂದು ಹೇಳಿದರು.
ಕಬಡ್ಡಿಯನ್ನು ಕಾಮನ್‌ವೆಲ್ತ್ ಗೇಮ್ಸೌ ಮತ್ತು ಒಲಿಂಪಿಕ್‌್ಸನಲ್ಲಿ ಸೇರ್ಪಡೆಗೊಳಿಸಬೇಕು ಎಂದು ಅವರೂ ಆಗ್ರಹಿಸಿದರು. ನಮ್ಮ ಎದುರಾಳಿ (ಇರಾನ್) ತಂಡವು ಉತ್ತಮ ಹೋರಾಟ ನೀಡಿತು, ಆದರೆ ಪ್ರತಿಭೆ ಮತ್ತು ಅನುಭವದ ವಿಷಯದಲ್ಲಿ ನಾವು ಉತ್ತಮ ತಂಡವಾಗಿದ್ದೆವು. ಹೌದು, ಭಾರತವು ಈ ಕ್ರೀಡೆಯಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸುತ್ತಿದ್ದರೂ, ಇದು ವಿಶ್ವಾದ್ಯಂತ ಜನಪ್ರಿಯವಾಗುತ್ತಿದೆ.ಕಬಡ್ಡಿಯನ್ನು ಕಾಮನ್‌ವೆಲ್ತ್ ಗೇಮ್ಸೌನಲ್ಲಿ ಮತ್ತು ಭವಿಷ್ಯದಲ್ಲಿ ಒಲಿಂಪಿಕ್ಸ್ ನಲ್ಲಿಯೂ ಸೇರ್ಪಡೆಗೊಳಿಸಲು ಇದು ಸೂಕ್ತ ಸಮಯ, ಎಂದು ರಾಣಾ ಪಿಟಿಐಗೆ ತಿಳಿಸಿದರು.
ಬಿಎಸ್‌ಎಫ್ ಬ್ಯಾಂಡ್‌ನಿಂದ ಸ್ವಾಗತಿಸಲ್ಪಟ್ಟ ಮಹಿಳಾ ಕಬಡ್ಡಿ ಆಟಗಾರ್ತಿ ಮನೀಶಾ ಕುಮಾರಿ, ಈ ಸಾಧನೆ ಮಾಡಲು ಸಹಾಯ ಮಾಡಿದ ಭದ್ರತಾ ಪಡೆಗಳಿಗೆ ಧನ್ಯವಾದ ಅರ್ಪಿಸಿದರು.ನನಗೆ ನಿರಂತರ ಬೆಂಬಲ ನೀಡಿದ ಬಿಎಸ್‌ಎಫ್‌ಗೆ ನಾನು ಸದಾ ಋಣಿಯಾಗಿದ್ದೇನೆ. ನಮ್ಮ ಮೇಲೆ ಯಾವುದೇ ಒತ್ತಡವಿರಲಿಲ್ಲ. ನಾವು ಚಿನ್ನ ಗೆಲ್ಲುವ ದೃಢ ನಿರ್ಧಾರದೊಂದಿಗೆ ಕಣಕ್ಕಿಳಿದಿದ್ದೆವು ಮತ್ತು ಅದನ್ನು ಸಾಧಿಸಿದೆವು.
ಕಬಡ್ಡಿ ಆಟಗಾರರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಂತೆ ಸಂಭ್ರಮಾಚರಣೆಗಳು ಮುಕ್ತಾಯಗೊಳ್ಳುತ್ತಿರುವಂತೆಯೇ, ಶೂಟರ್‌ಗಳ ಆಗಮನವು ಮತ್ತೊಮ್ಮೆ ಉತ್ಸಾಹದ ಅಲೆಗೆ ಕಾರಣವಾಯಿತು.10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಕಮಲ್‌ಜೀತ್ ಮತ್ತು ಸುರುಚಿ ಜೋಡಿಯು ಎಲ್ಲರ ಗಮನ ಸೆಳೆಯಿತು.
10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಚಿನ್ನ ಗೆಲ್ಲುವುದು ಸುಲಭದ ಮಾತಾಗಿರಲಿಲ್ಲ. ಅದು ಸವಾಲಿನಿಂದ ಕೂಡಿತ್ತು, ಆದರೆ ನಾವು ಸಂಯಮ ಕಾಯ್ದುಕೊಂಡೆವು. ನಾವು ಈ ಅತ್ಯುನ್ನತ ಗೌರವವನ್ನು ಗೆದ್ದುಕೊಂಡಾಗ ಸುರುಚಿ ತೋರಿದ ಅದ್ಭುತ ಮನೋಬಲ ಮತ್ತು ಅತ್ಯುತ್ತಮ ಪ್ರದರ್ಶನವನ್ನು ಕಂಡು ನನಗೆ ಸಂತೋಷವಾಗಿದೆ, ಎಂದು ಕಮಲ್‌ಜೀತ್ ಹೇಳಿದರು. ಏಷ್ಯನ್ ಗೇಮ್ಸೌಗೆ ತಮ್ಮ ಚೊಚ್ಚಲ ಪ್ರವೇಶದಲ್ಲೇ ಚಿನ್ನ ಗೆದ್ದಿರುವುದಕ್ಕೆ ತಮಗೆ ಅತ್ಯಂತ ಸಂತೋಷವಾಗಿದೆ ಎಂದು ಸುರುಚಿ ಹೇಳಿದರು.
