Homeರಾಷ್ಟ್ರೀಯ2047ರ ವಿಕಸಿತ ಭಾರತಕ್ಕೆ 'ಸಪ್ತಧಾರಾ' ಪರಿಕಲ್ಪನೆ ಮುಂದಿಟ್ಟ ಪ್ರಧಾನಿ ಮೋದಿ

2047ರ ವಿಕಸಿತ ಭಾರತಕ್ಕೆ ‘ಸಪ್ತಧಾರಾ’ ಪರಿಕಲ್ಪನೆ ಮುಂದಿಟ್ಟ ಪ್ರಧಾನಿ ಮೋದಿ

Saptadhara PM Modi’s 7-Point Vision for Viksit Bharat 2047

ನವದೆಹಲಿ,ಆ.15- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು : 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಭಾರತವನ್ನು 2047ರ ವೇಳೆಗೆ ಅಭಿವದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸಪ್ತಧಾರ (ಏಳು ಪ್ರಮುಖ ಸ್ತಂಭಗಳು) ಪರಿಕಲ್ಪನೆಯನ್ನು ಅನಾವರಣಗೊಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿಟ್ಟಿರುವ ಸಪ್ತಧಾರ ಅಥವಾ ಭಾರತದ ಅಭಿವದ್ಧಿಯ ಏಳು ಪ್ರಮುಖ ಹರಿವುಗಳುಉತ್ಪಾದನೆ, ಕೃಷಿ, ತಂತ್ರಜ್ಞಾನ, ಗತಿ ಶಕ್ತಿ, ರಕ್ಷಣೆ, ಹಸಿರು ಶಕ್ತಿ ಮತ್ತು ಮೃದು ಶಕ್ತಿ2047ರ ವೇಳೆಗೆ ವಿಕ್ಷಿತ್‌ ಭಾರತೞ ನಿರ್ಮಾಣದ ಆರ್ಥಿಕ ಹಾಗೂ ತಂತ್ರಜ್ಞಾನಿಕ ರೂಪರೇಖೆಯಾಗಿ ಕಾಣಿಸಿಕೊಳ್ಳುತ್ತಿವೆ.

ಈ ಏಳು ಕ್ಷೇತ್ರಗಳನ್ನು ಪ್ರತ್ಯೇಕ ಯೋಜನೆಗಳಾಗಿ ನೋಡುವುದಕ್ಕಿಂತ, ಉತ್ಪಾದನೆಗೆ ಮೂಲಸೌಕರ್ಯ, ತಂತ್ರಜ್ಞಾನಕ್ಕೆ ಸಂಶೋಧನೆ, ಕಷಿಗೆ ಆಹಾರ ಭದ್ರತೆ, ರಕ್ಷಣೆಗೆ ದೇಶೀಯ ಕೈಗಾರಿಕೆ, ಹಸಿರು ಶಕ್ತಿಗೆ ಇಂಧನ ಭದ್ರತೆ ಮತ್ತು ಮದು ಶಕ್ತಿಗೆ ಜಾಗತಿಕ ಸಾಂಸ್ಕೃತಿಕ ಪ್ರಭಾವವನ್ನು ಜೋಡಿಸುವ ಸಮಗ್ರ ಅಭಿವೃದ್ಧಿ ಮಾದರಿಯಾಗಿ ನೋಡುವುದು ಹೆಚ್ಚು ಸೂಕ್ತ. ಕಳೆದ ಒಂದು ದಶಕದ ಬೆಳವಣಿಗೆಗಳನ್ನು ಗಮನಿಸಿದರೆ, ಈ ಏಳು ಕ್ಷೇತ್ರಗಳಲ್ಲಿ ಕೆಲವು ಈಗಾಗಲೇ ಗಮನಾರ್ಹ ಬದಲಾವಣೆಯನ್ನು ಕಂಡಿವೆ. ಆದರೆ 2047ರ ಗುರಿ ತಲುಪಲು ಉತ್ಪಾದನೆಯ ಪ್ರಮಾಣೞದಿಂದ ಉತ್ಪನ್ನದ ಗುಣಮಟ್ಟ ಮತ್ತು ದೇಶೀಯ ಮೌಲ್ಯವರ್ಧನೆೞವರೆಗೆ, ಡಿಜಿಟಲ್‌ ಬಳಕೆೞಯಿಂದ ಮೂಲ ತಂತ್ರಜ್ಞಾನ ನಿರ್ಮಾಣೞದವರೆಗೆ ಭಾರತ ಇನ್ನೂ ದೊಡ್ಡ ಹೆಜ್ಜೆ ಇಡಬೇಕಿದೆ.

1.ಉತ್ಪಾದನೆ:
2014ರಲ್ಲಿ ಆರಂಭವಾದ ಮೇಕ್‌ ಇನ್‌ ಇಂಡಿಯಾೞ ನಂತರ ಉತ್ಪಾದನಾ ಕ್ಷೇತ್ರಕ್ಕೆ PLI ಸೇರಿದಂತೆ ಹಲವು ಪ್ರೋತ್ಸಾಹಕ ಯೋಜನೆಗಳು ಜಾರಿಗೆ ಬಂದವು. 2025ರ ಡಿಸೆಂಬರ್‌ ಅಂತ್ಯದ ವೇಳೆಗೆ 14 ಔಐ ಕ್ಷೇತ್ರಗಳಲ್ಲಿ 2.16 ಲಕ್ಷ ಕೋಟಿಗೂ ಅಧಿಕ ಹೂಡಿಕೆ, 20.41 ಲಕ್ಷ ಕೋಟಿಗೂ ಅಧಿಕ ಉತ್ಪಾದನೆ/ಮಾರಾಟ ಮತ್ತು 8.3 ಲಕ್ಷ ಕೋಟಿಗೂ ಅಧಿಕ ರಫ್ತು ದಾಖಲಾಗಿತ್ತು. 14.39 ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗ ಸಷ್ಟಿಯಾಗಿದೆ ಎಂದು ಸರ್ಕಾರ ತಿಳಿಸಿದೆ. 2026ರ ಮಾರ್ಚ್‌ ಅಂತ್ಯದ ವೇಳೆಗೆ ಹೂಡಿಕೆ 2.40 ಲಕ್ಷ ಕೋಟಿಗೂ ಮೀರಿದೆ.

2.ಕಷಿ ಮತ್ತು ಆಹಾರ ಭದ್ರತೆ :
ಭಾರತದ ಅಭಿವದ್ಧಿಯ ಕಥೆಯಲ್ಲಿ ಕಷಿಯನ್ನು ಕಡೆಗಣಿಸುವ ಸಾಧ್ಯತೆಯೇ ಇಲ್ಲ. ಆಹಾರ ಭದ್ರತೆ, ಗ್ರಾಮೀಣ ಆದಾಯ, ಉದ್ಯೋಗ ಮತ್ತು ಬೆಲೆ ಸ್ಥಿರತೆಎಲ್ಲವೂ ಕಷಿಯೊಂದಿಗೆ ನೇರವಾಗಿ ಸಂಬಂಧಿಸಿವೆ.
2026ರಲ್ಲಿ ಸರ್ಕಾರದ ಕಷಿ ನೀತಿಯಲ್ಲಿ ಉತ್ಪಾದಕತೆ, ರೈತರ ಆದಾಯ, ಆಹಾರ ಮತ್ತು ಪೌಷ್ಟಿಕ ಭದ್ರತೆ, ಡಿಜಿಟಲ್‌ ಕಷಿ ಮತ್ತು ಹವಾಮಾನ-ಸ್ಥಿರ ಕಷಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ರಾಷ್ಟ್ರೀಯ ಸುಸ್ಥಿರ ಕಷಿ ಮಿಷನ್‌ ಅಡಿಯಲ್ಲಿ 2014ರಿಂದ 2025ರವರೆಗೆ 2,996 ಹವಾಮಾನ-ಸ್ಥಿರ ಬೆಳೆ ತಳಿಗಳನ್ನು ಅಭಿವದ್ಧಿಪಡಿಸಲಾಗಿದೆ. ಮಳೆ ಆಧಾರಿತ ಕಷಿ ದೇಶದ ಬಿತ್ತನೆ ಪ್ರದೇಶದ ಸುಮಾರು ಶೇ.60ರಷ್ಟು ಹೊಂದಿದ್ದು, ಒಟ್ಟು ಆಹಾರ ಉತ್ಪಾದನೆಯಲ್ಲಿ ಸುಮಾರು ಶೇ.40 ರಷ್ಟು ಕೊಡುಗೆ ನೀಡುತ್ತದೆ.

  1. ತಂತ್ರಜ್ಞಾನ ಮತ್ತು ನಾವೀನ್ಯತೆ :
    ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕಳೆದ ದಶಕದ ಅತ್ಯಂತ ಗಮನಾರ್ಹ ಸಾಧನೆ ಡಿಜಿಟಲ್‌ ಸಾರ್ವಜನಿಕ ಮೂಲಸೌಕರ್ಯ.2016ರಲ್ಲಿ ಆರಂಭವಾದ ಖಿಐ ಈಗ ಜಾಗತಿಕ ಮಟ್ಟದ ಡಿಜಿಟಲ್‌ ಪಾವತಿ ಮಾದರಿಯಾಗಿದೆ. 2025-26ರಲ್ಲಿ ಖಿಐ ಮೂಲಕ 24,161.69 ಕೋಟಿ ವಹಿವಾಟುಗಳು ನಡೆದಿದ್ದು, ಅವುಗಳ ಒಟ್ಟು ಮೌಲ್ಯ 314 ಲಕ್ಷ ಕೋಟಿ ಮೀರಿದೆ. 2026ರ ಜೂನ್‌ ವೇಳೆಗೆ 55.49 ಕೋಟಿ ಬಳಕೆದಾರರು ಖಿಐ ವ್ಯವಸ್ಥೆಗೆ ಸೇರಿದ್ದರು.
    ಆದರೆ ಮುಂದಿನ ಹಂತ ಕೇವಲ ಡಿಜಿಟಲ್‌ ಸೇವೆಗಳನ್ನು ಬಳಸುವುದಲ್ಲ; ಮೂಲ ತಂತ್ರಜ್ಞಾನವನ್ನು ಭಾರತವೇ ರೂಪಿಸುವುದು.

4.ಗತಿ ಶಕ್ತಿ:
ಮೂಲಸೌಕರ್ಯವನ್ನು ಅಭಿವದ್ಧಿಯ ಬೆನ್ನೆಲುಬಾಗಿ ಪರಿಗಣಿಸಿರುವ ಗತಿ ಶಕ್ತಿ ಮಾದರಿಯ ಉದ್ದೇಶ ರಸ್ತೆ, ರೈಲು, ಬಂದರು, ವಿಮಾನ ನಿಲ್ದಾಣ ಮತ್ತು ಸರಕು ಸಾಗಣೆ ವ್ಯವಸ್ಥೆಗಳನ್ನು ಪ್ರತ್ಯೇಕವಾಗಿ ಅಭಿವೃದ್ಧಿಪಡಿಸುವ ಬದಲು ಸಮಗ್ರವಾಗಿ ಜೋಡಿಸುವುದು. 2026ರ ವೇಳೆಗೆ PM Gati Shakti ಅಡಿಯಲ್ಲಿ ಬಂದರು ಸಂಪರ್ಕಕ್ಕೆ ಸಂಬಂಧಿಸಿದ 1.09 ಲಕ್ಷ ಕೋಟಿಯ 182 ಯೋಜನೆಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 31,967 ಕೋಟಿ ರೂ. 75 ಯೋಜನೆಗಳು ಪೂರ್ಣಗೊಂಡಿವೆ.ರೈಲ್ವೆಯ Gati Shakti Cargo Terminal ವ್ಯವಸ್ಥೆಯಲ್ಲಿಯೂ ವಿಸ್ತರಣೆ ಕಂಡುಬಂದಿದೆ. ಜುಲೈ 2026ರ ವೇಳೆಗೆ 142 ಟರ್ಮಿನಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 310 ಸ್ಥಳಗಳಿಗೆ ಅನುಮೋದನೆ ನೀಡಲಾಗಿದೆ.

5.ರಕ್ಷಾ ಶಕ್ತಿ:
ರಕ್ಷಣಾ ಕ್ಷೇತ್ರದಲ್ಲಿ ಆತನಿರ್ಭರತೆೞ ಕಳೆದ ಕೆಲವು ವರ್ಷಗಳಲ್ಲಿ ಸ್ಪಷ್ಟ ಫಲಿತಾಂಶಗಳನ್ನು ತೋರಿಸಿದೆ.2025-26ರಲ್ಲಿ ಭಾರತದ ರಕ್ಷಣಾ ಉತ್ಪಾದನೆ 1.78 ಲಕ್ಷ ಕೋಟಿ ರೂ. ದಾಖಲೆಯ ಮಟ್ಟ ತಲುಪಿದೆ. ಇದು 2020-21ರ 84,643 ಕೋಟಿ ರೂ.ಗೆ ಹೋಲಿಸಿದರೆ ದ್ವಿಗುಣಕ್ಕೂ ಹೆಚ್ಚು ಮತ್ತು 2013-14ರ ಮಟ್ಟಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ರಕ್ಷಣಾ ರಫ್ತು 38,424 ಕೋಟಿ ರೂ.ಗೆ ಏರಿದೆ.ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾಲೂ ಹೆಚ್ಚುತ್ತಿದೆ. 2025-26ರಲ್ಲಿ ಖಾಸಗಿ ವಲಯದ ಉತ್ಪಾದನಾ ಪಾಲು ಸುಮಾರು 24% ಆಗಿದ್ದು, ಸುಮಾರು 42,000 ಕೋಟಿ ರೂ.ಗಳಷ್ಟಿದೆ.

6.ಹಸಿರು ಶಕ್ತಿ:
ಹಸಿರು ಶಕ್ತಿಯನ್ನು ಸಪ್ತಧಾರದ ಪ್ರಮುಖ ಭಾಗವನ್ನಾಗಿ ಮಾಡುವ ಹಿಂದೆ ಪರಿಸರ ಸಂರಕ್ಷಣೆಯಷ್ಟೇ ಅಲ್ಲ, ಭವಿಷ್ಯದ ಇಂಧನ ಭದ್ರತೆಯ ಪ್ರಶ್ನೆಯೂ ಇದೆ. 2014ರಲ್ಲಿ ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ 76.38 GW ಆಗಿದ್ದರೆ, 2026ರ ಜೂನ್‌ 30ಕ್ಕೆ ಅದು 288.58 GWಗೆ ಏರಿದೆ. ಇದರಲ್ಲಿ ಸೌರಶಕ್ತಿ 162.15 ಎ ಮತ್ತು ಗಾಳಿ ಶಕ್ತಿ 57.44 GW ಪಾಲು ಹೊಂದಿವೆ. ಒಟ್ಟು ನಾನ್‌-ಫಾಸಿಲ್‌ ವಿದ್ಯುತ್‌ ಸಾಮರ್ಥ್ಯ 297.36 ಎ ಆಗಿದೆ.

ಮುಂದಿನ ಹಂತದಲ್ಲಿ ಸೌರ ಫಲಕಗಳ ಉತ್ಪಾದನೆಯಿಂದ ಹಿಡಿದು ಬ್ಯಾಟರಿ ಸಂಗ್ರಹಣೆ, ಗ್ರೀನ್‌ ಹೈಡ್ರೋಜನ್‌, ಗ್ರಿಡ್‌ ಆಧುನೀಕರಣ ಮತ್ತು ವಿದ್ಯುತ್‌ ವಾಹನಗಳವರೆಗೆ ಸಂಪೂರ್ಣ ಹಸಿರು ಇಂಧನ ಸರಪಳಿಯನ್ನು ನಿರ್ಮಿಸಬೇಕಾಗಿದೆ.

7.ಮೃದು ಶಕ್ತಿ:
ಸಪ್ತಧಾರದ ಅತ್ಯಂತ ವಿಭಿನ್ನ ಅಂಶ ಮದು ಶಕ್ತಿ. ಭಾರತದ ಸಾಂಸ್ಕೃತಿಕ ಪ್ರಭಾವವನ್ನು ಆರ್ಥಿಕ ಅವಕಾಶವಾಗಿ ಪರಿವರ್ತಿಸುವ ಚಿಂತನೆ ಇದರ ಕೇಂದ್ರದಲ್ಲಿದೆ.ಯೋಗ, ಆಯುರ್ವೇದ, ಭಾರತೀಯ ಕಲೆ, ಸಿನಿಮಾ, ಸಂಗೀತ, ಪ್ರವಾಸೋದ್ಯಮ, ಕರಕುಶಲ, ಆಹಾರ ಮತ್ತು ಆಧ್ಯಾತಿಕ ಪರಂಪರೆ ಈಗಾಗಲೇ ಭಾರತದ ಜಾಗತಿಕ ಗುರುತಿನ ಭಾಗಗಳಾಗಿವೆ. ಪ್ರವಾಸೋದ್ಯಮದ ಅಂಕಿಅಂಶಗಳು ಅವಕಾಶದ ಪ್ರಮಾಣವನ್ನು ತೋರಿಸುತ್ತವೆ. 2024ರಲ್ಲಿ ಭಾರತಕ್ಕೆ 2.057 ಕೋಟಿ ಅಂತರರಾಷ್ಟ್ರೀಯ ಪ್ರವಾಸಿಗರು ಬಂದಿದ್ದು, 2019ರ ಪೂರ್ವ-ಕೋವಿಡ್‌ ಮಟ್ಟಕ್ಕಿಂತ ಶೇ.14.82 ರಷ್ಟು ಹೆಚ್ಚಾಗಿದೆ. ಆದರೆ 2025ರ ತಾತ್ಕಾಲಿಕ ಅಂಕಿ 2.009 ಕೋಟಿಯಾಗಿದ್ದು, 2024ಕ್ಕಿಂತ ಶೇ.2.4ರಷ್ಟು ಇಳಿಕೆಯಾಗಿದೆ.

RELATED ARTICLES
spot_img

Latest News