ಬೆಂಗಳೂರು,ಮಾ.11- ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ವಿವಾದವಿಲ್ಲದ ಕ್ಷೇತ್ರ, ಎಲ್ಲಿ ಹಾಲಿಗಳಿಗೆ ಮತ್ತೊಮ್ಮೆ ಅವಕಾಶ ನೀಡಲು ನಿರ್ಧರಿಸಲಾಗಿದೆಯೋ ಅವರ ಹೆಸರುಗಳು ನಾಳೆ ಪಟ್ಟಿಯಲ್ಲಿ ಪ್ರಕಟಗೊಳ್ಳಲಿವೆ. ಸಂಜೆ ಪ್ರಧಾನಿ ನರೇಂದ್ರಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಅಮಿತ್ ಷಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಂಬಂಧ ಸಭೆ ನಡೆಯಲಿದ್ದು, ಬಹುತೇಕ ನಾಳೆಯೇ ಪಟ್ಟಿ ಬಿಡುಗಡೆಯಾಗುವ ಸಂಭವವಿದೆ. ಎರಡು ಹಂತದಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಿಸಲು ನಿರ್ಧರಿಸಿದ್ದು, ನಾಳೆ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ. ಮೊದಲ ಪಟ್ಟಿಯಲ್ಲಿ ಮತ್ತೊಮ್ಮೆ ಸ್ಪರ್ಧೆ ಮಾಡಲಿರುವ ಸಂಸದರ ಹೆಸರು, ವಿವಾದವಿಲ್ಲದ ಕ್ಷೇತ್ರಗಳ ಅಭ್ಯರ್ಥಿಗಳು ಮತ್ತು ಕೇಂದ್ರ ಸಚಿವರಾಗಿರುವ ರಾಜ್ಯಸಭಾ ಸದಸ್ಯರ ಸ್ಪರ್ಧೆಗೆ ಅವಕಾಶ ನೀಡಿದರೆ ಅವರ ಹೆಸರು ಇರಲಿದೆ ಎನ್ನಲಾಗಿದೆ.
ಈ ಬಾರಿಯ ಪಟ್ಟಿಯಲ್ಲಿ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರಾಗಿರುವ ಯಡಿಯೂರಪ್ಪ ಮೇಲುಗೈ ಸಾಧಿಸಲಿದ್ದಾರೆ ಎನ್ನಲಾಗಿದೆ. ಗೋ ಬ್ಯಾಕ್ ಅಭಿಯಾನದ ನಡುವೆಯೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆ, ದಾವಣಗೆರೆಯಲ್ಲಿ ಎಂ.ಪಿ. ರೇಣುಕಾಚಾರ್ಯ, ಬೀದರ್‍ನಲ್ಲಿ ಭಗವಂತ ಖೂಬಾ, ಬೆಂಗಳೂರು ಉತ್ತರದಲ್ಲಿ ಡಿ.ವಿ.ಸದಾನಂದ ಗೌಡ, ಮೈಸೂರಿನಲ್ಲಿ ಪ್ರತಾಪ್ ಸಿಂಹ, ದಕ್ಷಿಣ ಕನ್ನಡದಿಂದ ನಳಿನ್ ಕುಮಾರ್ ಕಟೀಲ್, ಹಾವೇರಿಯಿಂದ ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಪರ ಯಡಿಯೂರಪ್ಪ ಬಲವಾಗಿ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:
ಬೆಂಗಳೂರು ಉತ್ತರ – ನಿರ್ಮಲಾ ಸೀತಾರಾಮನ್/ ಡಿ.ವಿ.ಸದಾನಂದ ಗೌಡ/ ಸಿ.ಟಿ.ರವಿ
ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ
ಬೆಂಗಳೂರು ಸೆಂಟ್ರಲ್ – ಜೈಶಂಕರ್/ಪಿ.ಸಿ.ಮೋಹನ್
ಬೆಂಗಳೂರು ಗ್ರಾಮಾಂತರ – ಡಾ.ಸಿ.ಎನ್.ಮಂಜುನಾಥ್/ಸಿ.ಪಿ.ಯೋಗೀಶ್ವರ್
ಬೆಳಗಾವಿ – ಜಗದೀಶ್ ಶೆಟ್ಟರ್/ಮಂಗಳಾ ಅಂಗಡಿ
ಚಿಕ್ಕೋಡಿ – ಅಣ್ಣಾ ಸಾಹೇಬ್ ಜೊಲ್ಲೆ/ರಮೇಶ್ ಕತ್ತಿ
ಬೀದರ್ – ಭಗವಂತ್ ಖೂಬಾ
ಕಲಬುರಗಿ – ಉಮೇಶ್ ಜಾಧವ್
ವಿಜಯಪುರ – ರಮೇಶ್ ಜಿಗಜಿಣಗಿ/ಗೋವಿಂದ ಕಾರಜೋಳ
ಬಾಗಲಕೋಟೆ – ಪಿ.ಸಿ.ಗದ್ದಿಗೌಡರ್
ರಾಯಚೂರು – ರಾಜಾ ಅಮರೇಶ್ವರ್ ನಾಯಕ / ಬಿ.ವಿ.ನಾಯಕ
ಕೊಪ್ಪಳ – ಸಂಗಣ್ಣ ಕರಡಿ / ಡಾ.ಬಸವರಾಜ್ ಕ್ಯಾವಟರ್
ಹುಬ್ಬಳ್ಳಿ ಧಾರವಾಡ – ಪ್ರಹ್ಲಾದ್ ಜೋಶಿ
ಹಾವೇರಿ – ಬಸವರಾಜ ಬೊಮ್ಮಾಯಿ/ಕೆ.ಇ.ಕಾಂತೇಶ್/ಜಗದೀಶ್ ಶೆಟ್ಟರ್/ಬಿ.ಸಿ.ಪಾಟೀಲ್
ಬಳ್ಳಾರಿ – ಬಿ.ಶ್ರೀರಾಮುಲು
ದಕ್ಷಿಣ ಕನ್ನಡ – ನಳಿನ್ ಕುಮಾರ್ ಕಟೀಲ್/ನಿರ್ಮಲಾ ಸೀತಾರಾಮನ್/ಕ್ಯಾ.ಬ್ರಿಜೇಶ್ ಚೌಟ
ಉತ್ತರ ಕನ್ನಡ – ಅನಂತ ಕುಮಾರ್ ಹೆಗ್ಡೆ/ವಿಶ್ವೇಶ್ವರ ಹೆಗಡೆ ಕಾಗೇರಿ
ಉಡುಪಿ – ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ/ಸಿ.ಟಿ.ರವಿ
ಶಿವಮೊಗ್ಗ – ಬಿ.ವೈ.ರಾಘವೇಂದ್ರ
ಚಿತ್ರದುರ್ಗ – ಎ ನಾರಾಯಣಸ್ವಾಮಿ/ಮಾದಾರ ಚನ್ನಯ್ಯ ಸ್ವಾಮೀಜಿ
ದಾವಣಗೆರೆ – ಜಿ.ಎಂ.ಸಿದ್ದೇಶ್ವರ್/ಎಂ.ಪಿ.ರೇಣುಕಾಚಾರ್ಯ
ತುಮಕೂರು – ವಿ.ಸೋಮಣ್ಣ/ಜೆಸಿ ಮಾಧುಸ್ವಾಮಿ
ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್/ಅಲೋಕ್ ವಿಶ್ವನಾಥ್
ಮೈಸೂರು – ಪ್ರತಾಪ್ ಸಿಂಹ
ಚಾಮರಾಜನಗರ – ಡಾ.ಮೋಹನ್ ಕುಮಾರ್ / ಎಸ್ ಬಾಲರಾಜ್
ಮಂಡ್ಯ – ಜೆಡಿಎಸ್‍ಗೆ ಹಂಚಿಕೆ ಸಾಧ್ಯತೆ
ಕೋಲಾರ – ಜೆಡಿಎಸ್‍ಗೆ ಹಂಚಿಕೆ ಸಾಧ್ಯತೆ
ಹಾಸನ – ಜೆಡಿಎಸ್‍ಗೆ ಹಂಚಿಕೆ ಸಾಧ್ಯತೆ