ನಿತ್ಯ ನೀತಿ : ಕಷ್ಟಗಳನ್ನು ವೌನವಾಗಿ ದಾಟಬೇಕು, ಪರಿಶ್ರಮ ಸದ್ದಿಲ್ಲದೆ ಸಾಗಬೇಕು. ಸಿಗುವ ಯಶಸ್ಸಿನ ಶಬ್ದ ಜಗತ್ತಿಗೆ ಕೇಳುವಷ್ಟು ಜೋರಾಗಿರಬೇಕು.
ಪಂಚಾಂಗ : ಮಂಗಳವಾರ, 16-12-2025
ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ಹೇಮಂತ / ಮಾಸ: ಮಾರ್ಗಶಿರ / ಪಕ್ಷ: ಕೃಷ್ಣ / ತಿಥಿ: ದ್ವಾದಶಿ / ನಕ್ಷತ್ರ: ಸ್ವಾತಿ / ಯೋಗ: ಅತಿಗಂ / ಕರಣ: ಕೌಲವ
ಸೂರ್ಯೋದಯ – ಬೆ.06.34
ಸೂರ್ಯಾಸ್ತ – 5.56
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30
ರಾಶಿಭವಿಷ್ಯ :
ಮೇಷ: ಸಂಗಾತಿಯೊಂದಿಗೆ ಹಣಕಾಸಿನ ಸಮಸ್ಯೆ ಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಿರಿ.
ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಅ ಕಾರಿ ವರ್ಗಕ್ಕೆ ಹತ್ತಿರವಾಗಿರುವುದರಿಂದ ಬಡ್ತಿ ಮತ್ತು ವೇತನ ಹೆಚ್ಚಳದ ರೂಪದಲ್ಲಿ ಲಾಭ ದೊರೆಯಲಿದೆ.
ಮಿಥುನ: ಹೊಸ ಪ್ರದೇಶಕ್ಕೆ ಭೇಟಿ ನೀಡುವ ಅವಕಾಶವೊಂದು ದಿಢೀರನೆ ಒದಗಿಬರಲಿದೆ.
ಕಟಕ: ಆದಾಯ ಹೆಚ್ಚಾಗಿರುವುದರಿಂದ ಯಾವುದೇ ತೊಂದರೆ ಇರುವುದಿಲ್ಲ.
ಸಿಂಹ: ಪ್ರತಿಯೊಂದು ಕೆಲಸವನ್ನು ಎಚ್ಚರಿಕೆ ಮತ್ತು ಪ್ರಾಮಾಣಿಕತೆಯಿಂದ ಮಾಡಿ.
ಕನ್ಯಾ: ತಲೆನೋವು, ಮೊಣಕಾಲು ನೋವು ಇತ್ಯಾದಿಗಳಿಂದ ತೊಂದರೆಗೆಒಳಗಾಗಬಹುದು.
ತುಲಾ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆಯಿರಿ.
ವೃಶ್ಚಿಕ: ಹಲವು ದಿನಗಳಿಂದ ಮಾಡಬೇಕೆಂದು ಕೊಂಡಿದ್ದ ಕೆಲಸ ಯಶಸ್ವಿಯಾಗಿ ನಡೆಯಲಿದೆ.
ಧನುಸ್ಸು: ಖಾಸಗಿ ಉದ್ಯೋಗದಲ್ಲಿರುವವರಿಗೆ ಒಳ್ಳೆಯ ಒಳ್ಳೆಯ ಸುದ್ದಿ ಸಿಗಲಿದೆ.
ಮಕರ: ಕೃಷಿ ಭೂಮಿ ಮತ್ತು ಅದಕ್ಕೆ ಸಂಬಂ ಸಿದ ಕೆಲಸ-ಕಾರ್ಯಗಳಿಂದ ಹೆಚ್ಚು ಲಾಭ ಗಳಿಸುವಿರಿ.
ಕುಂಭ: ಉದ್ಯೋಗದಲ್ಲಿನ ಮಾನಸಿಕ ಕಿರಿಕಿರಿಯಿಂದಾಗಿ ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಮೀನ: ಜವಾಬ್ದಾರಿಗಳನ್ನು ಪೂರೈಸಿ. ಖಂಡಿತ ವಾಗಿಯೂ ಉನ್ನತ ಮಟ್ಟಕ್ಕೆ ಏರುವಿರಿ.
