ಬೆಂಗಳೂರು,ಆ.22- ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳ ಜೊತೆ ಸಂಪರ್ಕ ಹೊಂದಿದ ಶಂಕಿತ ಉಗ್ರನೊಬ್ಬನನ್ನು ದೊಡ್ಡಬಳ್ಳಾಪುರ ಟೌನ್ ಪೊಲೀಸರು ಬಂಧಿಸಿದ್ದಾರೆ.ಇಸ್ಲಾಂಪುರದ ನಿವಾಸಿ ಸಯ್ಯದ್ ಅಬೂಬುಕರ್(28) ಬಂಧಿತ ಆರೋಪಿ. ಈತ ಎಸಿ ಮೆಕ್ಯಾನಿಕ್.
ಪಾಕಿಸ್ತಾನದ ಗ್ಯಾಂಗಸ್ಟರ್‌ಗಳ ಜೊತೆ ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕ ದಲ್ಲಿದ್ದು, ತನ್ನ ಆಧಾರ್ ಕಾರ್ಡ್‌ಅನ್ನು ಕೊಟ್ಟು ಅಕೌಂಟ್‌ಗೆ ಲಾಗಿನ್ ಆಗಿ ಕಳೆದ ಎರಡು ವರ್ಷಗಳಿಂದ ಅವರ ಜೊತೆ ಈತ ಸಂವಹನದಲ್ಲಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಈತ ಕೇರಳ, ದೆಹಲಿಗೆ ಹೋಗಿ ತರಬೇತಿ ಕೂಡ ಪಡೆದುಕೊಂಡು ಬಂದಿದ್ದಾನೆ.
ಅಲ್ಲದೆ ನಗರದ ಮಸೀದಿಯೊಂದರಲ್ಲಿ ಪಾಠ ಮಾಡುತ್ತಿದ್ದ ಎಂದು ಗೊತ್ತಾಗಿದೆ. ಕೇಂದ್ರ ಗುಪ್ತದಳ ನೀಡಿದ ಮಾಹಿತಿ ಆಧಾರದ ಮೇಲೆ ದೊಡ್ಡಬಳ್ಳಾಪುರ ಟೌನ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಈಗಾಗಲೇ ಕೇಂದ್ರ ಗುಪ್ತದಳ ಕೊಟ್ಟ ಮಾಹಿತಿಯಂತೆ ತುಮಕೂರು, ದಾವಣಗೆರೆ, ರಾಯಚೂರು, ಕಲಬುರಗಿ ಮುಂತಾದ ಕಡೆ ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಗ್ಯಾಂಗ್‌ಸ್ಟರ್‌ಗಳ ಜೊತೆ ಸಂಪರ್ಕ ಹೊಂದಿದ್ದ ನಾಲ್ವರನ್ನು ಬಂಧಿಸಿದ್ದಾರೆ.
