ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೇರಿಕಾ ಅಮೇರಿಕಾ ಚಿತ್ರ ತೆರೆಕಂಡು ಭರ್ಜರಿ ಯಶಸ್ಸು ಕಂಡಿದ್ದು ಎಲ್ಲರಿಗೂ ತಿಳಿದ ಸಂಗತಿ. ಮೂರು ದಶಕಗಳ ನಂತರ ನಾಗತಿಹಳ್ಳಿ ಚಂದ್ರಶೇಖರ್ ಮತ್ತೆ ಅದೇ ಶೀರ್ಷಿಕೆಯ ಅಮೇರಿಕಾ ಅಮೇರಿಕಾ-2 ಚಿತ್ರವನ್ನು ನಿರ್ದೇಶಿಸಿದ್ದಾರೆ. ಆದರೆ ಇದು ಅಮೇರಿಕಾ ಅಮೇರಿಕಾ ಚಿತ್ರದ ಮುಂದುವರಿದ ಭಾಗ ಅಲ್ಲ.
ನಾಗತಿಹಳ್ಳಿ ಸಿನಿ ಕ್ರಿಯೇಷನ್‌್ಸ ಲಾಂಛನದಲ್ಲಿ ನಿರ್ಮಾಣವಾಗಿರುವ ಅಮೇರಿಕಾ ಅಮೇರಿಕಾ-2 ಚಿತ್ರ ಈ ವಾರ (ಸೆಪ್ಟೆಂಬರ್ 11)ರಂದು ಬಿಡುಗಡೆಯಾಗುತ್ತಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರೇ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಮನೋ ಮೂರ್ತಿ ಸಂಗೀತ ನಿರ್ದೇಶನ, ಎಸ್.ಕೆ. ರಾವ್ ಛಾಯಾಗ್ರಹಣ ಹಾಗೂ ಶ್ರೀ ಕ್ರೇಜಿಮೈಂಡ್ಸ್ ಸಂಕಲನವಿದೆ.
ನಿರೂಪ್ ಭಂಡಾರಿ, ಪೃಥ್ವಿ ಅಂಬರ್, ಶಾನ್ವಿ ಶ್ರೀವಾಸ್ತವ್ ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅಚ್ಯುತಕುಮಾರ್, ರೀತು ಸಿಂಗ್, ಮಂಡ್ಯ ರಮೇಶ್, ಮಾನಸಿ ಸುಧೀರ್ ಮುಂತಾದವರಿದ್ದಾರೆ.
