Homeಮನರಂಜನೆರೇಸಿಂಗ್‌ ಟ್ರ್ಯಾಕ್‌ನಲ್ಲಿ ಕಾರು ಓಡಿಸಿದ ಕಿಚ್ಚ

ರೇಸಿಂಗ್‌ ಟ್ರ್ಯಾಕ್‌ನಲ್ಲಿ ಕಾರು ಓಡಿಸಿದ ಕಿಚ್ಚ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು ರೇಸಿಂಗ್‌ ಟ್ರ್ಯಾಕ್‌ನಲ್ಲಿ ಕಾರು ಚಲಾಯಿಸುವ ಮೂಲಕ ಜೀವನದಲ್ಲಿ ಮರೆಯಲಾಗದ ರೋಮಾಂಚಕಾರಿ ಅನುಭವ ಪಡೆದಿದ್ದಾರೆ. ಈ ವಿಶೇಷ ಅನುಭವದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಇದೊಂದು ಪದಗಳಲ್ಲಿ ವಿವರಿಸಲು ಸಾಧ್ಯವಾಗದ ಅದ್ಭುತ ಚಾಲನಾ ಅನುಭವ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ರೇಸಿಂಗ್‌ ಟ್ರ್ಯಾಕ್‌ಗೆ ಇಳಿಯುವ ಮುನ್ನ ಸುದೀಪ್‌ ಅವರಿಗೆ ರೇಸಿಂಗ್‌ ಕಾರಿನ ಕಾರ್ಯವೈಖರಿ, ತಾಂತ್ರಿಕ ಅಂಶಗಳು, ಚಾಲನೆಯ ವೇಳೆ ಪಾಲಿಸಬೇಕಾದ ನಿಯಮಗಳು ಹಾಗೂ ಸುರಕ್ಷತಾ ಕ್ರಮಗಳ ಕುರಿತು ತಜ್ಞರು ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಬಳಿಕ ಟ್ರ್ಯಾಕ್‌ನಲ್ಲಿ ಕಾರು ಚಲಾಯಿಸಿದ ಕಿಚ್ಚ, ಅಲ್ಲಿನ ವಿಶ್ವದರ್ಜೆಯ ಮೂಲಸೌಕರ್ಯ, ವಿಶಾಲವಾದ ಟ್ರ್ಯಾಕ್‌ ಹಾಗೂ ಅದ್ಭುತ ವಾತಾವರಣವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಶೇಷ ಅನುಭವವನ್ನು ಒದಗಿಸಿದ ಇಂಡಿಯನ್‌ ರೇಸಿಂಗ್‌ ಲೀಗ್‌ ತಂಡಕ್ಕೆ ಅವರು ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇಂಡಿಯನ್‌ ರೇಸಿಂಗ್‌ ಲೀಗ್‌ನಲ್ಲಿ ಸುದೀಪ್‌ ಮಾಲೀಕತ್ವದ ಕಿಚ್ಚಾಸ್‌‍ ಕಿಂಗ್ಸ್ ಬೆಂಗಳೂರು ತಂಡ ಮುಂಬರುವ ರೇಸ್‌‍ಗಳಿಗೆ ಭರ್ಜರಿ ಸಿದ್ಧತೆ ನಡೆಸುತ್ತಿದೆ. ನ.28 ಮತ್ತು 29ರಂದು ಗ್ರೇಟರ್‌ ನೋಯ್ಡಾದ ಬುದ್‌್ಧ ಇಂಟರ್‌ನ್ಯಾಷನಲ್‌‍ ಸರ್ಕ್‌ಯೂಟ್‌ನಲ್ಲಿ ನಡೆಯಲಿರುವ ರೇಸ್‌‍ನಲ್ಲಿ ತಂಡ ಭಾಗವಹಿಸಲಿದೆ.

ಇದಾದ ಬಳಿಕ ಡಿಸೆಂಬರ್‌ 5 ಮತ್ತು 6ರಂದು ನವಿ ಮುಂಬೈ ಸ್ಟ್ರೀಟ್‌ ಸರ್ಕ್‌ಯೂಟ್‌ನಲ್ಲಿ ಮತ್ತೊಂದು ರೋಚಕ ರೇಸ್‌‍ ನಡೆಯಲಿದೆ.ತಮ ನೆಚ್ಚಿನ ನಟ ಸುದೀಪ್‌ ರೇಸಿಂಗ್‌ ಕಾರು ಚಾಲನೆ ಮಾಡಿರುವುದು ಅಭಿಮಾನಿಗಳಲ್ಲಿಯೂ ಕುತೂಹಲ ಮತ್ತು ಸಂತಸ ಮೂಡಿಸಿದೆ.

RELATED ARTICLES

Latest News