Homeಬೆಂಗಳೂರುಅಂಡರ್‌ಪಾಸ್‌ನಲ್ಲಿ ಸಿಲುಕಿದ ಗೂಡ್ಸ್ ಟ್ರಕ್ : ಸವಾರರ ಪರದಾಟ

ಅಂಡರ್‌ಪಾಸ್‌ನಲ್ಲಿ ಸಿಲುಕಿದ ಗೂಡ್ಸ್ ಟ್ರಕ್ : ಸವಾರರ ಪರದಾಟ

ಬೆಂಗಳೂರು, ಸೆ.10- ನಗರದ ಡಾ. ರಾಜ್‌ಕುಮಾರ್‌ ರಸ್ತೆಯ ಅಂಡರ್‌ಪಾಸ್‌ನಲ್ಲಿ ಇಂದು ಬೆಳಗಿನ ಜಾವ ಬೃಹತ್‌ ಗೂಡ್ಸ್ ಟ್ರಕ್‌ ಸಿಲುಕಿಕೊಂಡ ಪರಿಣಾಮ ಕೆಲಕಾಲ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಭಾರಿ ಲೋಡ್‌ ಹೊತ್ತು ಬಂದಿದ್ದ ಟ್ರಕ್‌ ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಅಂಡರ್‌ಪಾಸ್‌ ಪ್ರವೇಶಿಸುತ್ತಿದ್ದಂತೆ ಆ್ಯಕ್ಸಲ್‌ ಕಟ್‌ ಆಗಿ ನಿಂತಿದೆ. ಇದರಿಂದ ಅಂಡರ್‌ಪಾಸ್‌ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡು, ಒರಾಯನ್‌ ಮಾಲ್‌ ಕೆಳಸೇತುವೆ ಬಳಿಯೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ವಿಷಯ ತಿಳಿಯುತ್ತಿದ್ದಂತೆ ಮಲ್ಲೇಶ್ವರಂ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ವಾಹನ ಸವಾರರಿಗೆ ಸೂಚಿಸಿದರು.ಬಳಿಕ ಈ ಮಾರ್ಗದಲ್ಲಿ ಸಂಚರಿಸದೆ ಪರ್ಯಾಯ ರಸ್ತೆಗಳನ್ನು ಬಳಸುವಂತೆ ವಾಹನ ಸವಾರರು ಹಾಗೂ ಚಾಲಕರಿಗೆ ಸಂಚಾರಿ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಮುಂಜಾನೆಯೇ ಮಾಹಿತಿ ನೀಡಿದರು.

ಅಂಡರ್‌ಪಾಸ್‌ಗಳಲ್ಲಿ ಪದೇಪದೇ ಗೂಡ್ಸ್‌ ಟ್ರಕ್‌ಗಳು ಸಿಲುಕಿಕೊಳ್ಳುತ್ತಿರುವುದು ಸಂಚಾರಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ನಿನ್ನೆಯಷ್ಟೇ ಮಹಾರಾಣಿ ಕಾಲೇಜು ಬಳಿಯ ಅಂಡರ್‌ಪಾಸ್‌ನಲ್ಲೂ ಟ್ರಕ್‌ ಸಿಲುಕಿಕೊಂಡು ಸಂಚಾರಕ್ಕೆ ತೊಂದರೆಯಾಗಿತ್ತು.

ಇದೀಗ ಡಾ. ರಾಜ್‌ಕುಮಾರ್‌ ರಸ್ತೆಯ ಅಂಡರ್‌ಪಾಸ್‌ನಲ್ಲೂ ಟ್ರಕ್‌ ಸಿಲುಕಿಕೊಂಡಿದ್ದು, ಅದರ ಆ್ಯಕ್ಸಲ್‌ ಕಟ್‌ ಆಗಿರುವುದರಿಂದ ವಾಹನವನ್ನು ತೆರವುಗೊಳಿಸಲು ಸಂಚಾರಿ ಪೊಲೀಸರು ಹರಸಾಹಸಪಡುತ್ತಿದ್ದಾರೆ.

RELATED ARTICLES
spot_img

Latest News