ಚಿಕ್ಕಬಳ್ಳಾಪುರ, ಮಾ.14- ನಗರ ಹಾಗೂ ತಾಲ್ಲೂಕಿನಲ್ಲಿ ಎರಡು ಪ್ರತ್ಯೇಕ ನಾಪತ್ತೆ ಪ್ರಕರಣಗಳಲ್ಲಿ ಗೃಹಿಣಿ ಹಾಗೂ ಯುವತಿ ನಾಪತ್ತೆಯಾಗಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾ ಪುರ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯ ಮುಂಚನ ಬಲೆ ಗ್ರಾಮದ ನಿವಾಸಿ ಚಂದನ (24)ಎಂಬ ಯುವತಿ ಮನೆಯಿಂದ ಮಾರ್ಚ್ 7 ರಂದು ಬೆಳಗಿನ ಜಾವ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
ಚಂದನ ನಾಪತ್ತೆಯಾಗಿರುವ ಬಗ್ಗೆ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಹೋದರ ಮೋಹನ್ ದೂರು ನೀಡಿದ್ದು ಕಾಣೆಯಾಗಿರುವ ಚಂದನ ಅವರನ್ನು ಹುಡುಕಿಕೊಡ ಬೇಕೆಂದು ಮನವಿ ಮಾಡಿದ್ದಾರೆ.ಚಹರೆ: 24 ವರ್ಷದ ಚಂದನ, 5.5 ಅಡಿ ಎತ್ತರ, ಗೋ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ಕನ್ನಡ, ತೆಲುಗು ಮತ್ತು ಇಂಗ್ಲಿಷ್ ಮಾತನಾಡುತ್ತಾಳೆ.
ಮಹಿಳೆ ನಾಪತ್ತೆ:
ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ಸೇರಿದ ಚಿಕ್ಕಬಳ್ಳಾ ಪುರ 12ನೇ ವಾರ್ಡಿನ ಬಾಪೂಜಿ ನಗರದ ನಿವಾಸಿ 34 ವರ್ಷದ ಗೃಹಿಣಿ ದೇವಮ್ಮ ಮಾರ್ಚ್ 2 ರಂದು ಕಾಣೆಯಾಗಿದ್ದು, ಇವರು ಕೆಲಸಕ್ಕೆ ಎಂದು ಹೋದವರು ಮತ್ತೆ ಮನೆಗೆ ಮರಳಿ ಬಂದಿರುವುದಿಲ್ಲ. ಈ ಬಗ್ಗೆ ಎಲ್ಲೆಡೆ ಹುಡುಕಾಡಿದರು ಪತ್ತೆ ಆಗಿಲ್ಲ. ನಾಪತ್ತೆಯಾದ ದೇವಮ್ಮ ರವರನ್ನು ಪತ್ತೆ ಮಾಡಿಕೊಡಬೇಕೆಂದು ಪತಿ ವೆಂಕಟೇಶ್ ನೀಡಿದ ದೂರಿನ ಮೇರೆಗೆ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ: ದೇವಮ್ಮ, 34 ವರ್ಷ, 4.5 ಅಡಿ ಎತ್ತರ, ಗೋ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ರೆಡ್ ಕರ್ಲ ಚೂಡಿರ್ಧಾ ಧರಿಸಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾಳೆ. ಇವರಿಬ್ಬರ ಬಗ್ಗೆ ಮಾಹಿತಿ ಸಿಕ್ಕರೆ ಹತ್ತಿರದ ಪೊಲೀಸ್ ಠಾಣೆ ಅಥವಾ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸರಿಗೆ ತಿಳಿಸಬೇಕು ಎಂದು ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.