Homeರಾಷ್ಟ್ರೀಯಷೇರುಪೇಟೆಯಲ್ಲಿ ಬೆಳಿಗ್ಗೆ ಏಕಾಏಕಿ ಕುಸಿತ, ಮಧ್ಯಾಹ್ನದ ವೇಳೆಗೆ ಚೇತರಿಕೆ

ಷೇರುಪೇಟೆಯಲ್ಲಿ ಬೆಳಿಗ್ಗೆ ಏಕಾಏಕಿ ಕುಸಿತ, ಮಧ್ಯಾಹ್ನದ ವೇಳೆಗೆ ಚೇತರಿಕೆ

ಮುಂಬೈ, ಸೆ.11: ಷೇರುಪೇಟೆ ಸೂಚ್ಯಂಕಗಳು ಇಂದು ಬೆಳಿಗ್ಗೆ ಏಕಾಏಕಿ ಕುಸಿತ ಕಂಡು ಆತಂಕ ಮೂಡಿಸಿದರೂ, ಮಧ್ಯಾಹ್ನದ ವೇಳೆಗೆ ಕೊಂಚ ಚೇತರಿಕೆ ಕಂಡುಬಂದಿದೆ. ವಹಿವಾಟು ಆರಂಭದಲ್ಲೇ ಷೇರುಪೇಟೆಯಲ್ಲಿ ಭಾರಿ ಕುಸಿತ ಕಂಡುಬಂದಿತ್ತು. ಬಳಿಕ ಖರೀದಿ ಭರಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ 200ಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡಿತು. ನಿಫ್ಟಿಯಲ್ಲೂ ಚೇತರಿಕೆಯ ಲಕ್ಷಣಗಳು ಗೋಚರಿಸಿದವು.

ಆದರೆ ಮಧ್ಯಾಹ್ನ 12.30ರ ವೇಳೆಗೆ ಮತ್ತೆ ಮಾರಾಟದ ಒತ್ತಡ ಕಾಣಿಸಿಕೊಂಡಿದ್ದು, ಬಿಎಸ್‌ಇ ಸೆನ್ಸೆಕ್ಸ್‌ 390 ಅಂಕ ಕುಸಿದು 74,512.47 ಅಂಕಗಳಿಗೆ ತಲುಪಿತ್ತು. ನಿಫ್ಟಿ ಕೂಡ 136 ಅಂಕ ಇಳಿಕೆ ಕಂಡು 23,341.05 ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು.

ಐಟಿ ಸೇರಿದಂತೆ ವಿವಿಧ ವಲಯಗಳ ಷೇರುಗಳಲ್ಲಿನ ವಹಿವಾಟು ಹಾಗೂ ಬ್ಯಾಂಕಿಂಗ್‌ ಷೇರುಗಳಲ್ಲಿನ ಮಾರಾಟದ ಒತ್ತಡ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌, ಎಸ್‌ಬಿಐ ಸೇರಿದಂತೆ ಹಲವು ಪ್ರಮುಖ ಬ್ಯಾಂಕಿಂಗ್‌ ಷೇರುಗಳು ನಷ್ಟ ಅನುಭವಿಸಿವೆ.

ದಿನದ ವಹಿವಾಟು ಮುಕ್ತಾಯದ ವೇಳೆಗೆ ಮಾರುಕಟ್ಟೆ ಮತ್ತಷ್ಟು ಚೇತರಿಸಿಕೊಳ್ಳುವ ನಿರೀಕ್ಷೆ ಹೂಡಿಕೆದಾರರಲ್ಲಿ ಮೂಡಿದೆ.

RELATED ARTICLES
spot_img

Latest News