Homeಜಿಲ್ಲಾ ಸುದ್ದಿಗಳುಹೊಂಡದಲ್ಲಿ ಕಾಲು ಜಾರಿ ಬಿದ್ದ ಪತ್ನಿ ರಕ್ಷಣೆಗೆ ಹೋಗಿ ಪತಿಯೂ ಸಾವು

ಹೊಂಡದಲ್ಲಿ ಕಾಲು ಜಾರಿ ಬಿದ್ದ ಪತ್ನಿ ರಕ್ಷಣೆಗೆ ಹೋಗಿ ಪತಿಯೂ ಸಾವು

ಮಧುಗಿರಿ,ಅ.29- ಜಮೀನಿನ ಕಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದ ಪತ್ನಿಯನ್ನು ರಕ್ಷಿಸಲು ಹೋದ ಪತಿಯೂ ನೀರಿನಲ್ಲಿ ಮುಳುಗಿ ಮತಪಟ್ಟಿರುವ ಹದಯವಿದ್ರಾವಕ ಘಟನೆ ತಾಲ್ಲೂಕಿನ ಶ್ರಾವಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮತರನ್ನು ಗ್ರಾಮದ ನಿವಾಸಿಗಳಾದ ಲಕ್ಷ್ಮಣನಾಯ್ಕ (52) ಮತ್ತು ಅವರ ಪತ್ನಿ ನಾಗಮ (50) ಎಂದು ಗುರುತಿಸಲಾಗಿದೆ.

ದಂಪತಿಯ ಅಡಿಕೆ ತೋಟದಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರು ಬಂದಿದ್ದರು. ಅವರಿಗೆ ಕುಡಿಯಲು ನೀರು ತರಲು ನಾಗಮ ಜಮೀನಿನಲ್ಲಿದ್ದ ಕೃಷಿ ಹೊಂಡದ ಸಮೀಪದ ಕೊಳವೆಬಾವಿಯಿಂದ ನೀರು ತರಲು ಹೋದಾಗ ಆಕಸಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ.

ಪತ್ನಿ ಬಹಳ ಹೊತ್ತಾದರೂ ವಾಪಸ್‌‍ ಬಾರದಿರುವುದನ್ನು ಗಮನಿಸಿದ ಪತಿ ಲಕ್ಷ್ಮಣನಾಯ್ಕ ಕೃಷಿ ಹೊಂಡದ ಬಳಿ ತೆರಳಿದ್ದಾರೆ. ಈ ವೇಳೆ ಪತ್ನಿ ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡು ಆಕೆಯನ್ನು ರಕ್ಷಿಸಲು ಹೊಂಡಕ್ಕೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ನಾಗಮ ಪತಿಯನ್ನು ಬಿಗಿಯಾಗಿ ಹಿಡಿದುಕೊಂಡ ಪರಿಣಾಮ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆ ಗಮನಿಸಿದ ಕೂಲಿ ಕಾರ್ಮಿಕರು ತಕ್ಷಣ ಹೊಂಡದಿಂದ ಇಬ್ಬರನ್ನೂ ಹೊರತೆಗೆದಿದ್ದಾರೆ. ಆದರೆ, ನಾಗಮ ಸ್ಥಳದಲ್ಲೇ ಮೃತಪಟ್ಟಿದ್ದು, ಸ್ವಲ್ಪ ಉಸಿರಾಡುತ್ತಿದ್ದ ಲಕ್ಷ್ಮಣನಾಯ್ಕ ಅವರನ್ನು ತಕ್ಷಣ ಗೌರಿಬಿದನೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಂಪತಿಯ ಸಾವಿನಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

RELATED ARTICLES

Latest News