Homeರಾಷ್ಟ್ರೀಯರಕ್ಷಾ ಬಂಧನಕ್ಕೂ ಮುನ್ನ ಇಬ್ಬರು ಸಹೋದರಿಯರ ಗುಂಡಿಕ್ಕಿ ಹತ್ಯೆ

ರಕ್ಷಾ ಬಂಧನಕ್ಕೂ ಮುನ್ನ ಇಬ್ಬರು ಸಹೋದರಿಯರ ಗುಂಡಿಕ್ಕಿ ಹತ್ಯೆ

Man Kills Two Sisters In Uttarakhand Days Before Raksha Bandhan

ಡೆಹ್ರಾಡೂನ್‌, ಆ.25- ರಕ್ಷಾ ಬಂಧನ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ, ಉತ್ತರಾಖಂಡದ ರೂರ್ಕಿಯಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಸಹೋದರಿಯರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಗಂಗನಹರ್‌ ಪ್ರದೇಶದಲ್ಲಿ ಘಟನೆ ನಡೆದಿದ್ದು, ಆರೋಪಿ ವಿವೇಕ್‌ ಕುಮಾರ್‌ ಮೊದಲು ತನ್ನ ಸಹೋದರಿ ಪುಷ್ಪಾ ಅವರ ಮನೆಗೆ ತೆರಳಿ ಆಕೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ಬಳಿಕ ಮತ್ತೊಬ್ಬ ಸಹೋದರಿ ಶಕುಂತಲಾ ಅವರ ಮನೆಗೆ ತೆರಳಿದ ಆರೋಪಿ, ಆಕೆ ಮತ್ತು ಆಕೆಯ ಪತಿ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಗುಂಡೇಟಿನಿಂದ ಇಬ್ಬರೂ ಸಹೋದರಿಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಕುಂತಲಾ ಅವರ ಪತಿಗೂ ಗುಂಡೇಟು ತಗುಲಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಳಿಕ ಆರೋಪಿ ವಿವೇಕ್‌ ಕುಮಾರ್‌ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ಲಭ್ಯವಾದ ಕೂಡಲೇ ಪೊಲೀಸ್‌ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದೆ. ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆರೋಪಿಯನ್ನು ಬಂಧಿಸಲು ಪೊಲೀಸರು ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
spot_img

Latest News