Homeರಾಜ್ಯನಡುರಸ್ತೆಯಲ್ಲೇ ರ್ಯಾಪಿಡೋ ಬೈಕ್‌ ಸವಾರನ ಮೇಲೆ ಆಟೋ ಚಾಲಕರಿಂದ ಹಲ್ಲೆ

ನಡುರಸ್ತೆಯಲ್ಲೇ ರ್ಯಾಪಿಡೋ ಬೈಕ್‌ ಸವಾರನ ಮೇಲೆ ಆಟೋ ಚಾಲಕರಿಂದ ಹಲ್ಲೆ

ಬೆಂಗಳೂರು,ಸೆ.2- ನಡುರಸ್ತೆಯಲ್ಲೇ ರ್ಯಾಪಿಡೋ ಬೈಕ್‌ ಸವಾರನ ಮೇಲೆ ಆಟೋ ಚಾಲಕರು ಹಿಗ್ಗಾಮುಗ್ಗಾ ಹಲ್ಲೆ ನಡೆಸಿ ದರ್ಪ ಮೆರೆದಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರು-ಹೊಸೂರು ಹೆದ್ದಾರಿಯ ಎಲೆಕ್ಟ್ರಾನಿಕ್‌ಸಿಟಿಯಲ್ಲಿರುವ ಸೀಸನ್‌್ಸ ಹೋಟೆಲ್‌ ಸಮೀಪ ಗ್ರಾಹಕರೊಬ್ಬರು ರ್ಯಾಪಿಡೊ ಬುಕ್‌ ಮಾಡಿದ ಹಿನ್ನೆಲೆಯಲ್ಲಿ ರಸ್ತೆಬದಿ ಬೈಕ್‌ ನಿಲ್ಲಿಸಿಕೊಂಡು ಗ್ರಾಹಕರಿಗಾಗಿ ಯುವಕ ಕಾಯುತ್ತಿದ್ದನು.

ಆ ಸಂದರ್ಭದಲ್ಲಿ ಆಟೋ ಚಾಲಕನೊಬ್ಬ ಇವನ ಬಳಿ ಬಂದು ಬೈಕ್‌ ಸೈಡ್‌ಗೆ ಹಾಕು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ನಡುರಸ್ತೆಯಲ್ಲೇ ಯುವಕನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಇನ್ನಿಬ್ಬರು ಆಟೋ ಚಾಲಕರು ಸೇರಿಕೊಂಡು ಯುವಕನಿಗೆ ವಿನಾಕಾರಣ ಬೈದು ಹೊಡೆದಿದ್ದಾರೆ. ಸಾರ್ವಜನಿಕರು ನೋಡುತ್ತಿದ್ದರೂ ಸಹ ಬಿಡದೆ ಮನಸೋ ಇಚ್ಛೆ ಥಳಿಸಿರುವ ಮೂವರು ಆಟೋ ಚಾಲಕರ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರ ಭಯವಿಲ್ಲದೆ ಆಟೋ ಚಾಲಕರು ಸಾರ್ವಜನಿಕ ಸ್ಥಳದಲ್ಲಿ ಪುಂಡಾಟಿಕೆ ಮೆರೆದಿರುವುದು ರ್ಯಾಪಿಡೊ ಬೈಕ್‌ ಸವಾರರು ಹಾಗೂ ಸ್ಥಳೀಯರಲ್ಲಿ ಆತಂಕ ವ್ಯಕ್ತವಾಗಿದೆ.

ಇಬ್ಬರು ವಾಹನಗಳ್ಳರ ಬಂಧನ:10.46 ಲಕ್ಷ ರೂ.ಮೌಲ್ಯದ 11 ದ್ವಿಚಕ್ರ ವಾಹನಗಳು, ಆಟೋ ಜಪ್ತಿ

ಬೆಂಗಳೂರು,ಸೆ.2- ನಗರದಲ್ಲಿ ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ಇಬ್ಬರನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿ 10.46 ಲಕ್ಷ ರೂ. ಮೌಲ್ಯದ 11 ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಮಂಡ್ಯದ ಸುಪ್ರೀತ್‌ (26) ಮತ್ತು ರವಿ (24) ಬಂಧಿತ ವಾಹನಗಳ್ಳರು. ಶ್ರೀರಾಮಪುರ 2ನೇ ಕ್ರಾಸ್‌‍ನಲ್ಲಿರುವ ನಿವಾಸಿಯೊಬ್ಬರು ತಮ ಮನೆ ಮುಂಭಾಗ ಎಂದಿನಂತೆ ರಾತ್ರಿ ದ್ವಿಚಕ್ರ ವಾಹನ ನಿಲ್ಲಿಸಿದ್ದು, ಬೆಳಗಾಗುವಷ್ಟರಲ್ಲಿ ವಾಹನ ಇರಲಿಲ್ಲ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿ ದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮಾಹಿತಿಗಳನ್ನು ಕಲೆ ಹಾಕಿದಾಗ ಒಬ್ಬಾತನನ್ನು ಮಂಡ್ಯ ಜಿಲ್ಲೆಯ ಹೊಸಹಳ್ಳಿಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮತ್ತೊಬ್ಬ ಸಹಚರನ ಜೊತೆ ಸೇರಿ ವಾಹನಗಳವು ಮಾಡಿರು ವುದಾಗಿ ಹೇಳಿದ್ದಾನೆ. ಈತನ ಮಾಹಿತಿಯಂತೆ ಮತ್ತೊಬ್ಬನನ್ನು ಮಂಡ್ಯದ ಬೀಚನಹಳ್ಳಿಯಲ್ಲಿ ಆತನ ಮನೆಯಲ್ಲೇ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಪ್ರಕರಣದಲ್ಲಿ ಭಾಗಿಯಾಗಿ ರುವುದಾಗಿ ಬಾಯ್ಬಿಟ್ಟಿದ್ದಾನೆ.

ಈ ಇಬ್ಬರೂ ಸೇರಿಕೊಂಡು ಬೆಂಗಳೂರು, ಮಂಡ್ಯ, ಮೈಸೂರು ಮತ್ತು ಕೋಲಾರದಲ್ಲಿ ಒಟ್ಟು 11 ದ್ವಿಚಕ್ರ ವಾಹನಗಳನ್ನು ಹಾಗೂ ಆಟೋರಿಕ್ಷಾವನ್ನು ಕಳವು ಮಾಡಿ ಮಾರಾಟ ಮಾಡುವ ಸಲುವಾಗಿ ಮಂಡ್ಯದ ಶಿವಳ್ಳಿಯಲ್ಲಿರುವ ಹಳೆಯ ಆಲೆಮನೆ ಹಾಗೂ ನಗರದ ಪಿಎಫ್‌ ರಸ್ತೆಯಲ್ಲಿ ನಿಲ್ಲಿಸಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ. ಆರೋಪಿಗಳ ಮಾಹಿತಿ ಯಂತೆ ಒಟ್ಟು 11 ದ್ವಿಚಕ್ರ ವಾಹನಗಳು ಹಾಗೂ ಒಂದು ಆಟೋರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಮೌಲ್ಯ 11.46 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಈ ಕಾರ್ಯಾಚರಣೆಯನ್ನು ಇನ್‌ಸ್ಪೆಕ್ಟರ್‌ ಪೂಣಚ್ಚ ಹಾಗೂ ಇತರೆ ಸಿಬ್ಬಂದಿ ತಂಡವು ಕೈಗೊಂಡಿತ್ತು.


ಮೂವರು ದರೋಡೆಕೋರರ ಬಂಧನ
ಬೆಂಗಳೂರು,ಸೆ.2- ಫುಡ್‌ ಡೆಲಿವರಿ ಬಾಯ್‌ ಸೇರಿದಂತೆ ಹಲವರನ್ನು ಅಡ್ಡಗಟ್ಟಿ ದರೋಡೆ ಮಾಡಿ ಪರಾರಿಯಾಗುತ್ತಿದ್ದ ಮೂವರು ದರೋಡೆಕೋರರನ್ನು ಸುಬ್ರಹಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅವರಿಂದ ನಾಲ್ಕು ಮೊಬೈಲ್‌ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ವನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 1.50 ಲಕ್ಷ ರೂ.ಗಳು ಎಂದು ಅಂದಾಜಿಸಲಾಗಿದೆ.

ಬಂಗಾರಪೇಟೆ ನಿವಾಸಿಗಳಾದ ಶೇಖ್‌ಮಾಜಾ (25), ಸೈಯ್ಯದ್‌ ಅಫ್ರೀದ್‌ ಉಲ್ಲಾ (21) ಮತ್ತು ತಲಘಟ್ಟಪುರ ನಿವಾಸಿ ಮೊಹಮದ್‌ ಶಾದಿಕ್‌(25) ಬಂಧಿತ ದರೋಡೆಕೋರರು.
ಕಳೆದ 26 ರಂದು ಮುಂಜಾನೆ 1.30ರ ಸಮಯದಲ್ಲಿ ಡೆಲಿವರಿ ಬಾಯ್‌ ಒಬ್ಬರು ಅಪಾರ್ಟ್‌ಮೆಂಟ್‌ ಒಂದಕ್ಕೆ ಫುಡ್‌ ಡೆಲಿವರಿ ಮಾಡಿ ವಾಪಸ್ಸು ಗುಬ್ಬಲಾಳ ಮುಖ್ಯರಸ್ತೆಯಲ್ಲಿರುವ ಸಿಂಗಾಪುರ ಗಾರ್ಡನ್‌ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದರು.

ಆಗ ಒಂದೇ ಬೈಕ್‌ನಲ್ಲಿ ಬಂದ ಮೂವರು ದರೋಡೆಕೋರರು ಅವರನ್ನು ಅಡ್ಡಗಟ್ಟಿ ಬೆದರಿಸಿ 4 ಸಾವಿರ ರೂ.ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಫುಡ್‌ ಡೆಲಿವರಿ ಬಾಯ್‌ ಅವರು ಸುಬ್ರಹಣ್ಯಪುರ ಠಾಣೆಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಖಚಿತ ಮಾಹಿತಿ ಮೇರೆಗೆ ಆವಲಹಳ್ಳಿಯ ಮನೆಯೊಂದರಲ್ಲಿ ಈ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ದರೋಡೆ ಪ್ರಕರಣಗಳು ಬೆಳಕಿಗೆ ಬಂದಿವೆ. ಸುಬ್ರಹಣ್ಯಪುರ, ಕೋಣನಕುಂಟೆ, ಜಯನಗರ, ಕುಮಾರಸ್ವಾಮಿಲೇಔಟ್‌ ಪೊಲೀಸ್‌‍ ಠಾಣೆಗಳಲ್ಲಿ ತಲಾ ಒಂದು ದರೋಡೆ ಪ್ರಕರಣಗಳು ಹಾಗೂ ತಲಘಟ್ಟಪುರ ಪೊಲೀಸ್‌‍ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣವೂ ಸೇರಿದಂತೆ ಒಟ್ಟು 5 ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳನ್ನು ಬಂಧಿಸುವಲ್ಲಿ ಇನ್‌್ಸಪೆಕ್ಟರ್‌ ಲಕ್ಷ್ಮಿಕಾಂತ್‌ ಮತ್ತವರ ಸಿಬ್ಬಂದಿ ಯಶಸ್ವಿ ಯಾಗಿದ್ದಾರೆ.

RELATED ARTICLES
spot_img

Latest News