Homeಬೆಂಗಳೂರುಬೇಡ ಬ್ರೋ ಅಭಿಯಾನದಡಿ ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತಲಿರುವ ಅಂಗಡಿಗಳ ತಪಾಸಣೆ

ಬೇಡ ಬ್ರೋ ಅಭಿಯಾನದಡಿ ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತಲಿರುವ ಅಂಗಡಿಗಳ ತಪಾಸಣೆ

ಬೆಂಗಳೂರು,ಸೆ.2- ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಮಾದಕವಸ್ತುಗಳ ಮಾರಾಟ ಮತ್ತು ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೂರ್ವ ವಿಭಾಗದ ಪೊಲೀಸರು ನಿನ್ನೆ ಮಳಿಗೆಗಳ ತಪಾಸಣೆ ನಡೆಸಿದರು.
ಬೇಡ ಬ್ರೋ ಮತ್ತು ರೈಸ್‌ ಅಭಿಯಾನದಡಿ ವಿಶೇಷ ಕಾರ್ಯಾಚರಣೆ ಕೈಗೊಂಡು ವಿವಿಧ ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ ಲಿರುವ ಅಂಗಡಿಗಳು, ಮೆಡಿಕಲ್‌ಶಾಪ್‌ಗಳು, ಹೋಟೆಲ್‌ಗಳು, ದಿನಸಿ ಅಂಗಡಿಗಳು, ಸ್ಟೇಷನರಿ ಅಂಗಡಿಗಳು ಹಾಗೂ ಮೊಬೈಲ್‌ ಅಂಗಡಿಗಳು, ಐಸ್‌ಕ್ರೀಮ್‌ ಪಾರ್ಲರ್‌ಗಳು, ಜೆರಾಕ್‌್ಸ ಅಂಗಡಿಗಳು ಸೇರಿದಂತೆ ಇತರ ವಾಣಿಜ್ಯ ಮಳಿಗೆಗಳಲ್ಲಿ ತಪಾಸಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾದಕವಸ್ತುಗಳೊಂದಿಗೆ ಮಿಶ್ರಣ ಮಾಡಬಹುದಾದ ಅಥವಾ ವಿದ್ಯಾರ್ಥಿಗಳಿಗೆ ಅನುಮಾಸ್ಪದ ರೀತಿಯಲ್ಲಿ ಸರಬರಾಜು ಮಾಡಲಾಗುತ್ತಿರುವ ವಸ್ತುಗಳು ಹಾಗೂ ಇತರೆ ವಸ್ತುಗಳಲ್ಲಿ ಯಾವುದೇ ಅನುಮಾನಾಸ್ಪದ ಅಂಶಗಳು ಇರುವುದೇ ಎಂಬುದನ್ನು ಸಹ ಪರಿಶೀಲಿಸಲಾಯಿತು. ಈ ವೇಳೆ 575 ಅಂಗಡಿಗಳನ್ನು ತಪಾಸಣೆ ನಡೆಸಲಾಗಿದ್ದು, 232 ಪಿಟಿ ಕೇಸ್‌ ದಾಖಲಿಸಿಕೊಂಡರೆ, ಕೋಟ್ಪಾ ಕಾಯ್ದೆಯಡಿ 282 ಪ್ರಕರಣ ಗಳು ಹಾಗೂ ನಾಲ್ಕು ಮಾದಕವಸ್ತು ಸೇವನೆ ಪ್ರಕರಣಗಳನ್ನು ದಾಖಲಿಸ ಲಾಗಿದೆ. ಒಟ್ಟು 305 ಅನುಮಾಸ್ಪ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿದ್ದು, 27 ಅನುಮಾನಸ್ಪದ ವಾಹನಗಳನ್ನು ಜಪ್ತಿ ಮಾಡಲಾಗಿದೆ. 125 ಶಿಕ್ಷಣ ಸಂಸ್ಥೆಗಳಲ್ಲಿ ಸಭೆ ನಡೆಸಲಾಗಿದೆ.

ಇದೇ ವೇಳೆ ಪೊಲೀಸ್‌ ಅಽಕಾರಿಗಳು ಹಾಗೂ ಸಿಬ್ಬಂದಿಗಳು ಶಿಕ್ಷಣ ಸಂಸ್ಥೆಗಳಿಗೆ ಖುದ್ದಾಗಿ ಭೇಟಿ ನೀಡಿ, ಪ್ರಾಂಶುಪಾಲರು, ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಚರ್ಚೆ ನಡೆಸಿದರು. ಮಾದಕವಸ್ತುಗಳ ನಿಯಂತ್ರಣ, ಅನುಮಾನಾಸ್ಪದ ಚಟುವಟಿಕೆಗಳು ಹಾಗೂ ಸಂಸ್ಥೆಗೆ ಸಂಬಂಽಸಿದ ಇತರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ, ವಿದ್ಯಾರ್ಥಿಗಳನ್ನು ಮಾದಕ ವ್ಯಸನಕ್ಕೆ ಸೆಳೆಯುವ ಅಥವಾ ಪ್ರಚೋದಿಸುವ ಚಟುವಟಿಕೆಗಳು ಹಾಗೂ ಇತರೆ ಅಕ್ರಮ ಚಟುವಟಿಕೆಗಳ ಕುರಿತು ವಿಶೇಷ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದರು.

ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ವಾತಾವರಣವನ್ನು ಮಾದಕ ವಸ್ತುಗಳಂತಹ ಸಮಾಜ ವಿರೋಽ ಚಟುವಟಿಕೆಗಳಿಂದ ಮುಕ್ತವಾಗಿಡಲು ಪೊಲೀಸ್‌ ಇಲಾಖೆಯು ನಿರಂತರವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರ್ವಜನಿಕರು ಸಹ ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

RELATED ARTICLES
spot_img

Latest News