ಬೆಂಗಳೂರು, ಮಾ.20- ನಮ್ಮ ಮೆಟ್ರೋ ಸಿಬ್ಬಂದಿ ಖಾಸಗಿ ಅಂಗ ಮುಟ್ಟಿಕೊಂಡು ಅಸಭ್ಯವಾಗಿ ವರ್ತಿಸಿರುವ ಬಗ್ಗೆ ದೂರು ದಾಖಲಾಗಿದೆ. ಘಟನೆ ಬಗ್ಗೆ ಮಹಿಳೆ ವಿಡಿಯೋದೊಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೇಲ್ ಮಾಡಿ ನಾನು ಇಲ್ಲಿ ಸುರಕ್ಷಿತಳಲ್ಲ ಎಂಬಂತೆ ಭಾಸವಾಗುತ್ತಿದೆ ಎಂದಿದ್ದಾರೆ.
ಜಾಲಹಳ್ಳಿ ಮೆಟ್ರೋ ಫ್ಲಾಟ್ ಫಾರ್ಮ್ ಎದುರು ಮಾ.17 ರಂದು ಮಧ್ಯಾಹ್ನ 2.30ರ ಸುಮಾರಿನಲ್ಲಿ ನಿಂತಿದ್ದಾಗ ಮೆಟ್ರೋ ಸಿಬ್ಬಂದಿ ಖಾಸಗಿ ಅಂಗವನ್ನು ಸ್ಪರ್ಶಿಸಿ ದುವರ್ತನೆ ತೋರಿದ್ದಾನೆ. ಅಲ್ಲದೆ, ಸನ್ನೆಗಳನ್ನು ಮಾಡುತ್ತಾ ದಿಟ್ಟಿಸಿ ನೋಡಿದ್ದಾನೆ. ಹಗಲು ವೇಳೆಯಲ್ಲಿಯೇ ಇಂತಹ ಘಟನೆಯಿಂದ ನಾನು ಮುಜುಗರಕ್ಕೊಳಗಾಗಿದ್ದು, ಆತನ ವರ್ತನೆಯನ್ನು ವಿಡಿಯೋ ಮಾಡುತ್ತಿದ್ದಂತೆ ಆತ ಸ್ಥಳದಿಂದ ಹೊರಟು ಹೋದನೆಂದು ಆ ಮಹಿಳೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೇಲ್ ಮಾಡಿ ದೂರು ನೀಡಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಮಹಿಳೆ ಮನವಿ ಮಾಡಿದ್ದಾರೆ.ಪೊಲೀಸರು ಮೆಟ್ರೋ ನಿಲ್ದಾಣದಲ್ಲಿನ ಸಿಸಿ ಟಿವಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ಸಿಬ್ಬಂದಿಯ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.