Homeರಾಷ್ಟ್ರೀಯಅಂಡಮಾನ್‌-ನಿಕೋಬಾರ್‌ಗೆ ಲೆಫ್ಟಿನೆಂಟ್‌ ಗವರ್ನರ್‌ ಆಗಿ ದಿನೇಶ್‌ ಶರ್ಮಾ ನೇಮಕ

ಅಂಡಮಾನ್‌-ನಿಕೋಬಾರ್‌ಗೆ ಲೆಫ್ಟಿನೆಂಟ್‌ ಗವರ್ನರ್‌ ಆಗಿ ದಿನೇಶ್‌ ಶರ್ಮಾ ನೇಮಕ

ನವದೆಹಲಿ, ಸೆ.6- ಬಿಜೆಪಿ ರಾಜ್ಯಸಭಾ ಸದಸ್ಯ ದಿನೇಶ್‌ ಶರ್ಮಾ ಅವರನ್ನು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಲೆಫ್ಟಿನೆಂಟ್‌ ಗವರ್ನರ್‌ ಆಗಿ ನೇಮಕ ಮಾಡಲಾಗಿದೆ. ದಿನೇಶ್‌ ಶರ್ಮಾ ಅವರು ನಿವೃತ್ತ ಅಡ್ಮಿರಲ್‌ ಡಿ.ಕೆ. ಜೋಶಿ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಜೋಶಿ ಅವರು 2017ರ ಅಕ್ಟೋಬರ್‌ 8ರಂದು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಲೆಫ್ಟಿನೆಂಟ್‌ ಗವರ್ನರ್‌ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ರಾಷ್ಟ್ರಪತಿ ಭವನ ತಡರಾತ್ರಿ ಹೊರಡಿಸಿದ ಪ್ರಕಟಣೆಯಲ್ಲಿ, ರಾಷ್ಟ್ರಪತಿಗಳು ಡಾ. ದಿನೇಶ್‌ ಶರ್ಮಾ ಅವರು ತಮ್ಮ ಕಚೇರಿಯ ಜವಾಬ್ದಾರಿ ವಹಿಸಿಕೊಳ್ಳುವ ದಿನದಿಂದ ಜಾರಿಗೆ ಬರುವಂತೆ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಲೆಫ್ಟಿನೆಂಟ್‌ ಗವರ್ನರ್‌ ಆಗಿ ನೇಮಕ ಮಾಡಿದ್ದಾರೆ ಎಂದು ತಿಳಿಸಿದೆ.

62 ವರ್ಷದ ದಿನೇಶ್‌ ಶರ್ಮಾ ಅವರು ಈ ಹಿಂದೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ನ.25ರಂದು ಕೊನೆಗೊಳ್ಳಬೇಕಿತ್ತು. ಅವರು ರಾಜ್ಯಸಭೆಯ ಉಪಸಭಾಪತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

RELATED ARTICLES
spot_img

Latest News