Homeರಾಜ್ಯಮಾದಪ್ಪನ ಹುಂಡಿಯಲ್ಲಿ 34 ದಿನಗಳಲ್ಲಿ 2.21 ಕೋಟಿ ರೂ. ಕಾಣಿಕೆ ಸಂಗ್ರಹ

ಮಾದಪ್ಪನ ಹುಂಡಿಯಲ್ಲಿ 34 ದಿನಗಳಲ್ಲಿ 2.21 ಕೋಟಿ ರೂ. ಕಾಣಿಕೆ ಸಂಗ್ರಹ

ಹನೂರು,ಸೆ.23-ತಾಲ್ಲೂಕಿನ ಪುಣ್ಯಕ್ಷೇತ್ರ ಶ್ರೀಮಲೆ ಮಹದೇಶ್ವರ ಬೆಟ್ಟ ಮಾದಪ್ಪನ ದೇಗುಲದಲ್ಲಿ ಹುಂಡಿ ಹಣ ಎಣಿಕೆ ನಡೆದಿದ್ದು 34 ದಿನಗಳಲ್ಲಿ 2.21 ಕೋಟಿ ರೂಗಳು ಸಂಗ್ರಹ ಆಗಿದೆ. ಸಾಲೂರು ಬಹನಠಾಧ್ಯಕ್ಷರಾದ ಡಾ. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ರವರ ಉಪಸ್ಥಿತಿಯಲ್ಲಿ ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಿ.ಪುರುಷೋತ್ತಮ್‌ ರವರ ನೇತತ್ವದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು 34 ದಿನಗಳಲ್ಲಿ 2,21,62,915 ಕೋಟಿ ರೂ. ನಗದು ಸಂಗ್ರಹವಾಗಿದೆ.

ಹುಂಡಿ ಮತ್ತು ಇ-ಹುಂಡಿ ಸೇರಿ, ಚಿನ್ನ 68 ಗ್ರಾಂ 500 ಮಿಲಿ, ಬೆಳ್ಳಿ 1 ಕೆ.ಜಿ.913 ಗ್ರಾಂ, 21 ವಿದೇಶಿ ನೋಟುಗಳು, 2 ಸಾವಿರ ಮುಖ ಬೆಲೆ 2 ನೋಟುಗಳು ಹುಂಡಿಯಲ್ಲಿ ದೊರೆತಿದೆ.
ಈ ಬಾರಿಯೂ ಭಕ್ತರಿಂದ ಹರಕೆ ರೂಪದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಕಾಣಿಕೆ ಸಂಧಿರುವುದು ಗೌರಿ- ಗಣೇಶ ಹಬ್ಬ ,ಅಮಾವಾಸ್ಯೆ, ಹುಣ್ಣಿಮೆ, ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣ ರಜಾ ದಿನಗಳು, ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಕ್ರೇತ್ರಕ್ಕೆ ಭೇಟಿ ನೀಡಿದ್ದರಿಂದ ಹೆಚ್ಚು ಹಣ ಸಂಗ್ರಹವಾಗಿದೆ.

ಮ. ಬೆಟ್ಟ ಬಸ್‌‍ ನಿಲ್ದಾಣದ ವಾಣಿಜ್ಯ ಕಟ್ಟಡದಲ್ಲಿ ಸಿಸಿ ಕ್ಯಾಮರಗಳ ಕಣ್ಗಾವಲಿನಲ್ಲಿ ಹಾಗೂ ಮ.ಬೆಟ್ಟ ಠಾಣೆ ಪೊಲೀಸ್‌‍ ಬಂದೋಬಸ್ತಿನಲ್ಲಿ ಪ್ರಾಧಿಕಾರದ ಸಿಬ್ಬಂಧಿಗಳು ಹಾಗೂ ಕೊಳ್ಳೇಗಾಲ ಭ್ಯಾಂಕ್‌ ಆಫ್‌ ಬರೋಡ ಸ್ಥಳೀಯ ಶಾಖೆ ಸಿಬ್ಬಂಧಿಗಳು ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು.

ಹುಂಡಿ ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ, ಚಾ.ನಗರ ಜಿಲ್ಲಾಡಳಿತ ಕಛೇರಿಯ ವಿಷಯ ನಿರ್ವಾಹಕಿ ಕಲ್ಯಾಣಮ, ಬ್ಯಾಂಕ್‌ ಆಫ್‌ ಬರೋಡ ಕೊಳ್ಳೇಗಾಲ ಶಾಖೆಯ ವ್ಯವಸ್ಥಾಪಕರಾದ ರವಿಶಂಕರ್‌ ಮತ್ತು ಸಿಬ್ಬಂದಿ ವರ್ಗ, ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕಪತ್ರ ಸಲಹೆಗಾರ ಮಹದೇವು , ಪ್ರಾಧಿಕಾರದ ಸಿಬ್ಬಂಧಿಗಳು, ಪಾರುಪತ್ತೇದಾರ್‌ ಮಾದೇಶ ಸೂಪರ್ವೈಸರ್‌ ಮಾದೇಶ್‌ ಸಿದ್ದಲಿಂಗ ಸೇರಿದಂತೆ ಪ್ರಾಧಿಕಾರದ ಎಲ್ಲಾ ವಿಭಾಗಗಳ ಸಿಬ್ಬಂದಿ ವರ್ಗದವರು ಹಾಜರಿದ್ದರು.

RELATED ARTICLES
spot_img

Latest News