Homeರಾಜ್ಯಬಿಡದಿ ಟೌನ್ ಶಿಪ್ : ಉಪವಾಸ ಸತ್ಯಾಗ್ರಹ ನಿರತ ರೈತರಿಗೆ ಧೈರ್ಯ ತುಂಬಿದ ದೇವೇಗೌಡರು

ಬಿಡದಿ ಟೌನ್ ಶಿಪ್ : ಉಪವಾಸ ಸತ್ಯಾಗ್ರಹ ನಿರತ ರೈತರಿಗೆ ಧೈರ್ಯ ತುಂಬಿದ ದೇವೇಗೌಡರು

ಬಿಡದಿ, ಸೆ.25- ಬಿಡದಿ ಉಪನಗರ ಯೋಜನೆಯ ಭೂಸ್ವಾಧೀನವನ್ನು ವಿರೋಧಿಸಿ ಬೈರಮಂಗಲದಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಧೈರ್ಯ ತುಂಬಿದ್ದಾರೆ.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಬೈರಮಂಗಲಕ್ಕೆ ಭೇಟಿ ನೀಡಿ ಉಪವಾಸ ನಿರತ ರೈತರ ಆರೋಗ್ಯ ವಿಚಾರಿಸಿ, ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದರು. ರೈತರ ಜೊತೆ ನೆಲದ ಮೇಲೆ ಕುಳಿತು ಅವರ ಸಮಸ್ಯೆಗಳನ್ನು ಆಲಿಸಿದರು.

ಇದೇ ವೇಳೆ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ದೂರವಾಣಿ ಮೂಲಕ ಪ್ರತಿಭಟನಾ ನಿರತ ರೈತರ ಜೊತೆ ಮಾತನಾಡಿ, ಧೈರ್ಯ ತುಂಬಿದರು. ರೈತರ ನ್ಯಾಯಯುತ ಹೋರಾಟದಲ್ಲಿ ತಾವು ಜೊತೆಗಿರುವುದಾಗಿ ಭರವಸೆ ನೀಡಿದರು. ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES
spot_img

Latest News