ಬೆಂಗಳೂರು,ಸೆ.25- ಇನ್‌ಸ್ಟಾಗ್ರಾಮ್‌ನಲ್ಲಿ ಉಗ್ರರ ಪೋಸ್ಟ್‌ಗಳಗೆ ಲೈಕ್-ಕಮೆಂಟ್ ಮಾಡಿ ಬೆಂಬಲಿಸಿ ಭಯೋತ್ಪಾದನೆಗೆ ಪಿತೂರಿ ಮಾಡುತ್ತಿದ್ದ ಮಾಸ್ಟರ್ ಮೈಂಡ್ ಶಬ್ಬೀರ್ ತಗಲಾಕಿಕೊಂಡಿದ್ದಾನೆ.ಆರೋಪಿ ಶಬ್ಬೀರ್ ಇಸ್ಟಾ ಐಡಿ ಫಾಲೋ ಮಾಡುತ್ತಿದ್ದನು. ಗುಪ್ತಚರ ಇಲಾಖೆ ಈತನ ಮೇಲೆ ಒಂದು ಕಣ್ಣಿಟ್ಟು ಸದ್ದಿಲ್ಲದೇ ತನಿಖೆ ನಡೆಸುತ್ತಿತ್ತು.
ಈ ವಿಚಾರವನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರಿಗೆ ಮಾಹಿತಿ ನೀಡಿತ್ತು. ಈ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಶಂಕಿತ ಉಗ್ರ ಶಬ್ಬೀರ್‌ನ ಚಲನವಲನಗಳನ್ನು ಗಮನಿಸಿ ಅದರಂತೆ ಆತನನ್ನು ಬಂಧಿಸಿ ಆತನ ಮೊಬೈಲ್‌ನ್ನು ವಶಕ್ಕೆ ಪಡೆದು ಇನ್‌ಸ್ಟಾ, ಟೆಲಿಗ್ರಾಂ ಆ್ಯಪ್‌ಗಳನ್ನು ಪರಿಶೀಲಿಸಿದಾಗ ಹಲವು ಮಾಹಿತಿಗಳು ಲಭ್ಯವಾಗಿದ್ದು, ಭಯೋತ್ಪಾದನೆಗೆ ಪಿತೂರಿ ನಡೆಸಿರುವುದು ಬಯಲಿಗೆ ಬಂದಿದೆ.
ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಎಸ್‌ಪಿ ಪದಿನಿ ಸಾಹು ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾಜಿಕ ಜಾಲ ತಾಣದ ಕ್ಲೋಸ್ಡ್ ಗ್ರೂಪ್‌ನಲ್ಲಿ ಪ್ರಚೋದನಕಾರಿ ಮೆಸೇಜ್‌ಗಳು ಸಿಕ್ಕಿವೆ. ಆ ಆಧಾರದ ಮೇಲೆ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದೇವೆ ಎಂದರು.
ಆರೋಪಿ ಶಬ್ಬೀರನ ಹಿನ್ನಲೆಯನ್ನು ಜಾಲಾಡುತ್ತಿದ್ದು, ಪ್ರಕರಣದ ಸಂಬಂಧ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ, ನಗರ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ. ಆತನ ಮೊಬೈಲ್‌ನಲ್ಲಿ ನಡೆದಿರುವ ಚರ್ಚೆ, ಮೆಸೇಜ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಕೂಲಂಕುಶವಾಗಿ ತನಿಖೆ ನಡೆಸಲಿದ್ದೇವೆ ಎಂದು ಅವರು ಹೇಳಿದರು.
