Homeರಾಜಕೀಯಜನ ದಂಗೆ ಏಳುವ ಮುನ್ನ ಜ್ಞಾನೇಶ್‌ ಕುಮಾರ್‌ ರಾಜೀನಾಮೆ ನೀಡುವುದು ಸೂಕ್ತ

ಜನ ದಂಗೆ ಏಳುವ ಮುನ್ನ ಜ್ಞಾನೇಶ್‌ ಕುಮಾರ್‌ ರಾಜೀನಾಮೆ ನೀಡುವುದು ಸೂಕ್ತ

ಬೆಂಗಳೂರು,ಸೆ.26- ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್‌ ಕುಮಾರ್‌ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ವ್ಯವಸ್ಥೆಯನ್ನೇ ಕುಸಿಯುವಂತೆ ಮಾಡಿದ್ದು, ಜನ ದಂಗೆ ಏಳುವ ಮುನ್ನ ತಮ ಹ್ದುೆಗೆ ರಾಜೀನಾಮೆ ನೀಡುವುದು ಸೂಕ್ತ ಎಂದು ಎಐಸಿಸಿ ಎಸ್‌‍.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಡಾ. ಆನಂದ ಕುಮಾರ ಹೇಳಿದ್ದಾರೆ.

ಸಂವಿಧಾನಕ್ಕಿಂತ ದೊಡ್ಡದು ಜನರ ಮತದಾನದ ಹಕ್ಕು. ಜನರ ಮತಾಧಿಕಾರ ಕಸಿದಿರುವ ಜ್ಞಾನೇಶ್‌ ಕುಮಾರ್‌ ರಾಜೀನಾಮೆ ನೀಡಿ ಪ್ರಾಯಶ್ಚಿತ ಮಾಡಿಕೊಳ್ಳುವುದು ಸೂಕ್ತ ಎಂದಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭಾರತದ ಪ್ರಜಾಪ್ರಭುತ್ವದಲ್ಲಿ ಚುನಾವಣಾ ಆಯೋಗ ಕೇವಲ ಚುನಾವಣೆ ನಡೆಸುವ ಕಚೇರಿಯಲ್ಲ. ಅದು ಜನರ ಮತದಾನದ ಹಕ್ಕಿನ ಕಾವಲುಗಾರ. ಆ ಕಾವಲುಗಾರನ ಮೇಲೆಯೇ ಅನುಮಾನ ಮೂಡಿದಾಗ ಅಗ್ನಿ ಪರೀಕ್ಷೆ ಎದುರಿಸಲೇಬೇಕು ಎಂದರು.

ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು ವಿವೇಕ್‌ ಜೋಶಿ ಅವರು ಹತ್ತು ತಿಂಗಳಲ್ಲಿ 14 ಬಾರಿ ಮುಖ್ಯ ಚುನಾವಣಾ ಆಯುಕ್ತರ ತೀರ್ಮಾನಗಳನ್ನು ಪ್ರಶ್ನಿಸಿದ್ದಾರೆ. ಒಂದೇ ದಿನ ನಾಲ್ಕು ಪತ್ರಗಳನ್ನು ಬರೆದಿದ್ದಾರೆ. ಚುನಾವಣಾ ವ್ಯವಸ್ಥೆಯನ್ನು ಕುಸಿಯುವಂತೆ ಮಾಡುವ ತೀರ್ಮಾನಗಳ ವಿರುದ್ಧ ಅಸಮತಿಯ ಪತ್ರಗಳ ಮೂಲಕ ತಮ ಬಂಡಾಯ ಸೂಚಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರು ಮೂವರು ಆಯುಕ್ತರಲ್ಲಿ ಮೊದಲಿಗರು ಮಾತ್ರ. ಉಳಿದ ಇಬ್ಬರಿಗೆ ಇರುವ ಅಧಿಕಾರವೇ ಅವರಿಗೂ ಇದೆ. ಹೀಗಾಗಿ ತೀರ್ಮಾನ ಕೈಗೊಳ್ಳುವ ವಿಧಾನ, ಬಹುಮತದ ನಿರ್ಧಾರಗಳು, ಆಂತರಿಕ ಚರ್ಚೆಗಳು ಮತ್ತು ದಾಖಲಾದ ಭಿನ್ನಾಭಿಪ್ರಾಯಗಳ ಕುರಿತು ಸಾರ್ವಜನಿಕ ಚರ್ಚೆ ಅನಿವಾರ್ಯವಾಗಿದೆ ಎಂದು ಡಾ. ಆನಂದ ಕುಮಾರ ಹೇಳಿದ್ದಾರೆ.
ಆರೋಪಗಳಿದ್ದರೆ ತನಿಖೆಯಾಗಬೇಕು.

ದಾಖಲೆಗಳಿದ್ದರೆ ಸಾರ್ವಜನಿಕಗೊಳಿಸಬೇಕು. ಆಕ್ಷೇಪಣೆಗಳಿದ್ದರೆ ಅವುಗಳಿಗೆ ಉತ್ತರ ನೀಡಬೇಕು. ತಪ್ಪುಗಳಿದ್ದರೆ ಸರಿಪಡಿಸಬೇಕು ಎಂದರು.ಕಾಂಗ್ರೆಸ್‌‍ ಮೈತ್ರಿಕೂಟವನ್ನು ಪರಾಭವಗೊಳಿಸಲು ಚುನಾವಣಾ ಆಯೋಗವನ್ನು ಕೇಂದ್ರದ ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಂಡಿತ್ತು ಎಂಬುದಕ್ಕೆ ಇದೀಗ ಪುರಾವೆ ದೊರೆತಿದೆ ಎಂದು ಡಾ. ಆನಂದ ಕುಮಾರ ಹೇಳಿದ್ದಾರೆ.

RELATED ARTICLES
spot_img

Latest News