Homeರಾಜ್ಯಔಷಧಗಳ ಖರೀದಿ ದರ ಗರಿಷ್ಠ ಚಿಲ್ಲರೆ ದರಗಳ ನಡುವೆ ಭಾರಿ ವ್ಯತ್ಯಾಸ

ಔಷಧಗಳ ಖರೀದಿ ದರ ಗರಿಷ್ಠ ಚಿಲ್ಲರೆ ದರಗಳ ನಡುವೆ ಭಾರಿ ವ್ಯತ್ಯಾಸ

ಬೆಂಗಳೂರು,ಸೆ.27- ಔಷಧಗಳ ಖರೀದಿ ದರ ಮತ್ತು ರೋಗಿಗಳಿಗೆ ವಿಧಿಸಲಾಗುತ್ತಿರುವ ಗರಿಷ್ಠ ಚಿಲ್ಲರೆ ದರದ ನಡುವೆ ಭಾರೀ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ 254 ಔಷಧ ತಯಾರಿಕಾ ಕಂಪನಿಗಳ ಉತ್ಪನ್ನಗಳ ಬೆಲೆ ವಿವರಗಳ ಪಟ್ಟಿಯನ್ನು ಸಿದ್ಧಪಡಿಸಿ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರಕ್ಕೆ ಕಳುಹಿಸಿದೆ.

ಕಡಿಮೆ ದರದಲ್ಲಿ ಔಷಧ, ವೈದ್ಯಕೀಯ ಉಪಕರಣ ಹಾಗೂ ಆಸ್ಪತ್ರೆಗಳಲ್ಲಿ ಬಳಕೆಯಾಗುವ ಕನ್ಸ್ಯೂಮಬಲ್‌್ಸಗಳನ್ನು ಖರೀದಿಸಿ, ಹೆಚ್ಚಿನ ಎಂಆರ್‌ಪಿ ಆಧಾರದಲ್ಲಿ ರೋಗಿಗಳಿಗೆ ಬಿಲ್‌ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಎಫ್‌ಡಿಎ ಆಯುಕ್ತ ಕೆ.ಶ್ರೀನಿವಾಸ್‌‍ ಅವರು, ಡ್ರಗ್‌್ಸ ಆರ್ಡರ್‌ 2013 ಅಡಿಯಲ್ಲಿ ಅಗತ್ಯ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಎಫ್‌ಡಿಎ ಉಲ್ಲೇಖಿಸಿರುವ ಪ್ರಕರಣವೊಂದರಲ್ಲಿ 86 ರೂ.ಗಳ ಲ್ಯಾಂಡಿಂಗ್‌ ಕಾಸ್ಟ್‌ ಇರುವ ಔಷಧಕ್ಕೆ 4,528 ರೂ. ಎಂಆರ್‌ಪಿ ನಿಗದಿಪಡಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ 160 ರೂ. ಔಷಧಕ್ಕೆ 7,110 ರೂ. ಎಂಆರ್‌ಪಿ ಇದೆ.

ಇದೇ ರೀತಿ ಸೈಟ್ಯಾಕ್‌್ಸ 100 ಎಗೆ 342ರ ಲ್ಯಾಂಡಿಂಗ್‌ ಕಾಸ್ಟ್‌ ಎದುರು 3,836 ರೂ. ಎಂಆರ್‌ಪಿ ಹಾಗೂ ಬಿವಾಟಾಸ್‌‍ 400 ಎಂಜಿ ಇಂಜೆಕ್ಷನ್‌ಗೆ 5,850 ರೂ. ಎದುರು 62,690 ರೂ. ಎಂಆರ್‌ಪಿ ಇರುವುದನ್ನು ಇಲಾಖೆ ಉಲ್ಲೇಖಿಸಿದೆ.

ಎಂಆರ್‌ಪಿ ಮತ್ತು ಲ್ಯಾಂಡಿಂಗ್‌ ಕಾಸ್ಟ್‌ ನಡುವಿನ ಸಂಪೂರ್ಣ ವ್ಯತ್ಯಾಸವನ್ನೇ ಲಾಭವೆಂದು ಪರಿಗಣಿಸಲಾಗುವುದಿಲ್ಲ ಎಂದು ಎಫ್‌ಡಿಎ ಸ್ಪಷ್ಟಪಡಿಸಿದೆ. ವಿತರಣೆ, ತೆರಿಗೆ ಮತ್ತು ಇತರ ವೆಚ್ಚಗಳೂ ಬೆಲೆಯ ಭಾಗವಾಗುತ್ತವೆ.ಆಸ್ಪತ್ರೆಗಳ ಔಷಧ, ವೈದ್ಯಕೀಯ ಸಾಧನ ಹಾಗೂ ಕನ್ಸ್ಯೂಮಬಲ್‌್ಸಗಳ ಟ್ರೇಡ್‌ ಮಾರ್ಜಿನ್‌ಗೆ ಮಿತಿ ನಿಗದಿಪಡಿಸುವಂತೆಯೂ ಎಫ್‌ಡಿಎ ಕೇಂದ್ರಕ್ಕೆ ಮನವಿ ಮಾಡಿದೆ.

RELATED ARTICLES
spot_img

Latest News