ಬೆಂಗಳೂರು,ಸೆ.29- ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ವತಿಯಿಂದ ಬೆಂಗಳೂರು-ಭಾಗಮಂಡಲ ಮಾರ್ಗದಲ್ಲಿ ಅ.1 ರಿಂದ ನೂತನ ರಾಜಹಂಸ ಬಸ್ ಸೇವೆ ಆರಂಭಿಸಲಿದೆ.ಶಾಂತಿನಗರ ಬಸ್ ನಿಲ್ದಾಣದಿಂದ ರಾತ್ರಿ 10.30ಕ್ಕೆ ಹೊರಡುವ ಬಸ್ ಮೈಸೂರು, ಹುಣಸೂರು, ಕುಶಾಲನಗರ, ಮಡಿಕೇರಿ ಹಾಗೂ ಕಾರಗುಂದ ಮಾರ್ಗವಾಗಿ ಬೆಳಗ್ಗೆ 6.15ಕ್ಕೆ ಭಾಗಮಂಡಲ ತಲುಪಲಿದೆ.
ಭಾಗಮಂಡಲದಿಂದ ರಾತ್ರಿ 8.30 ಕ್ಕೆ ಹೊರಡುವ ಬಸ್ ಮಡಿಕೇರಿಗೆ ರಾತ್ರಿ 10 ಕ್ಕೆ ತಲುಪಿ, ಅಲ್ಲಿಂದ ಮೈಸೂರು ರಸ್ತೆ ಬಸ್ ನಿಲ್ದಾಣದ ಮೂಲಕ ಬೆಳಗ್ಗೆ 4ಕ್ಕೆ ಶಾಂತಿನಗರ ಬಸ್ ನಿಲ್ದಾಣಕ್ಕೆ 4.30ಕ್ಕೆ ತಲುಪಲಿದೆ.
ಬೆಂಗಳೂರು-ಮಡಿಕೇರಿ ಪ್ರಯಾಣಕ್ಕೆ ವಯಸ್ಕರಿಗೆ 545 ರೂ. ಹಾಗೂ ಮಕ್ಕಳಿಗೆ 296 ರೂ. ದರ ನಿಗದಿಪಡಿಸಲಾಗಿದೆ. ಬೆಂಗಳೂರು-ಭಾಗಮಂಡಲ ಪ್ರಯಾಣಕ್ಕೆ ವಯಸ್ಕರಿಗೆ 608 ರೂ. ಮತ್ತು ಮಕ್ಕಳಿಗೆ 328 ರೂ. ದರ ಇರಲಿದೆ ಎಂದು ಕೆಎಸ್ಆರ್ಟಿಸಿ ಬೆಂಗಳೂರು ಕೇಂದ್ರೀಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
