Homeಜಿಲ್ಲಾ ಸುದ್ದಿಗಳುಶಾಲಾ ಬಸ್ಸು ಹರಿದು ಮಗು ಸಾವು

ಶಾಲಾ ಬಸ್ಸು ಹರಿದು ಮಗು ಸಾವು

ಮೈಸೂರು, ಸೆ.29- ರಸ್ತೆ ಬದಿ ನಿಂತಿದ್ದ ಪುಟ್ಟ ಬಾಲಕಿ ಮೇಲೆ ಖಾಸಗಿ ಶಾಲಾ ಬಸ್ಸು ಹರಿದ ಪರಿಣಾಮ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲ್ಲೂಕಿನ ನಂಜಾಪುರ ಗ್ರಾಮದಲ್ಲಿ ನಡೆದಿದೆ.
ಬಸವರಾಜು ಮತ್ತು ಕಾಂತರಾಜು ದಂಪತಿಯ ಪುತ್ರಿ ಒಂದೂವರೆ ವರ್ಷದ ಲತೀಕ್ಷ ಮೃತಪಟ್ಟ ಬಾಲಕಿ.

ನಿನ್ನೆ ಸಂಜೆ ಬಸವರಾಜು ಅವರ ಪುತ್ರ ತಿಲಕ್‌ ಶಾಲೆ ಮುಗಿಸಿ ಬಂದ ಪುತ್ರ ತಿಲಕನನ್ನು ಬಸ್ಸಿನಿಂದ ಇಳಿಸಿಕೊಂಡು ಮನೆಗೆ ಕರೆದೊಯ್ಯುವಾಗ ಈ ದುರ್ಘಟನೆ ಸಂಭವಿಸಿದೆ.
ಖಾಸಗಿ ಬಸ್‌‍ನ ಚಾಲಕ ಬಸ್ಸನ್ನು ಹಿಂಬದಿಗೆ ತೆಗೆಯುವಾಗ ನಿರ್ಲಕ್ಷ್ಯ ವಹಿಸಿದ್ದು, ಬಾಲಕಿಯ ತಲೆ ಮೇಲೆ ಬಸ್ಸು ಹರಿದಿದೆ ಎಂದು ತಿಳಿದುಬಂದಿದೆ.

ಪೋಷಕರ ಎದುರೇ ಮಗು ಪ್ರಾಣ ಬಿಟ್ಟಿದ್ದು ಈ ದೃಶ್ಯ ಕರುಳು ಹಿಂಡುವಂತಿತ್ತು. ಈ ಸಂಬಂಧ ಬಿಳಿಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
spot_img

Latest News