ನಿತ್ಯ ನೀತಿ : ಕಾಲ ಎಷ್ಟೇ ಕಠಿಣವಾಗಿರಲಿ, ಧೈರ್ಯ ಕಳೆದುಕೊಳ್ಳಬೇಡ, ನಿನ್ನ ನಂಬಿಕೆ ಗಟ್ಟಿಯಾಗಿದ್ದರೆ ದಾರಿ ತಾನೇ ತೆರೆದುಕೊಳ್ಳುತ್ತದೆ.
ಪಂಚಾಂಗ : ಮಂಗಳವಾರ , 29-09-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಶರದ / ಮಾಸ: ಭಾದ್ರಪದ / ಪಕ್ಷ: ಕೃಷ್ಣ / ತಿಥಿ: ತೃತೀಯಾ / ನಕ್ಷತ್ರ: ಅಶ್ವಿನಿ / ಯೋಗ: ವ್ಯಾಘಾತ / ಕರಣ: ವಣಿಜ
ಸೂರ್ಯೋದಯ – ಬೆ.6.10
ಸೂರ್ಯಾಸ್ತ – 06.13
ರಾಹುಕಾಲ – 3.00-4.30
ಯಮಗಂಡ ಕಾಲ – 9.00- 10.30
ಗುಳಿಕ ಕಾಲ – 12.00- 1.30
ರಾಶಿಭವಿಷ್ಯ :
ಮೇಷ: ಬಹಳ ದಿನಗಳ ನಂತರ ಸ್ನೇಹಿತರೊಂದಿಗೆ ಸಂತೋಷವಾಗಿ ಹೆಚ್ಚು ಸಮಯ ಕಳೆಯುವಿರಿ.
ವೃಷಭ: ಆಸ್ತಿ ವಿಚಾರದಲ್ಲಿ ಶುಭ. ತೊಂದರೆಗಳು ದೂರವಾಗಲಿವೆ. ಗೃಹ ನಿರ್ಮಾಣಕ್ಕೆ ಚಿಂತಿಸುವಿರಿ.
ಮಿಥುನ: ಸಂಗಾತಿ ಹಾಗೂ ಕುಟುಂಬದೊಂದಿಗಿನ ಬಾಂಧವ್ಯವು ಬಹಳ ಉತ್ತಮವಾಗಿರುತ್ತದೆ.
ಕಟಕ: ಹಿರಿಯ ಸಹೋದರ -ಸಹೋದರಿಯ ರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ.
ಸಿಂಹ: ಅನಿರೀಕ್ಷಿತ ಖರ್ಚು ತಲೆದೋರಬಹುದು. ವೈದ್ಯರಿಗೆ ಶುಭದಾಯಕ ದಿನ.
ಕನ್ಯಾ: ಮನೆಯ ಜವಾಬ್ದಾರಿ ಅರ್ಥ ಮಾಡಿಕೊಂಡು ಅವುಗಳನ್ನು ನಿಭಾಯಿಸಬೇಕು.
ತುಲಾ: ಜವಾಬ್ದಾರಿಗಳನ್ನು ಪೂರೈಸಿ. ಖಂಡಿತ ವಾಗಿಯೂ ಉನ್ನತ ಮಟ್ಟಕ್ಕೆ ಏರುವಿರಿ.
ವೃಶ್ಚಿಕ: ಕಚೇರಿಯಲ್ಲಿ ಹಿರಿಯ ಅ ಕಾರಿಗಳನ್ನು ನಿರ್ಲಕ್ಷಿಸಿದಲ್ಲಿ ದೊಡ್ಡ ತೊಂದರೆಯಲ್ಲಿ ಸಿಲುಕಿಕೊಳ್ಳ ಬೇಕಾಗುತ್ತದೆ.
ಧನುಸ್ಸು: ವಿದ್ಯಾರ್ಥಿಗಳು ಸಾಧ್ಯವಾದರೆ ಸ್ನೇಹಿತ ರೊಂದಿಗೆ ಅಧ್ಯಯನ ಮಾಡುವುದು ಒಳಿತು.
ಮಕರ: ಸಣ್ಣ ವ್ಯಾಪಾರಸ್ಥರಿಗೆ ಅನುಕೂಲಕರ ದಿನ. ಲಾಭ ಗಳಿಸಲು ಹಲವು ಅವಕಾಶಗಳು ಒದಗಲಿವೆ.
ಕುಂಭ: ಗುರು-ಹಿರಿಯರ ಆಶೀರ್ವಾದದಿಂದ ಕೆಲಸ ಸುಗಮವಾಗಲಿದೆ. ಸ್ನೇಹಿತನಿಗೆ ನಿಮ್ಮಿಂದ ಬೇಸರವಾಗಬಹುದು. ರಫ್ತು ವ್ಯಾಪಾರದಲ್ಲಿ ಲಾಭ.
ಮೀನ: ಕೆಲಸದ ಹೊರೆ ಹೆಚ್ಚಿದ್ದರೆ, ಭಯಪಡುವ ಬದಲು ಕಷ್ಟಪಟ್ಟು ಕೆಲಸ ಮಾಡಿ.
